ETV Bharat / sitara

ಸುಶಾಂತ್ ತಂದೆಯ 2ನೇ ಮದುವೆ ಪ್ರಸ್ತಾಪ.. ಸಂಜಯ್​ ರಾವತ್​ಗೆ ನೋಟಿಸ್

ಸುಶಾಂತ್​ ಸಿಂಗ್​ ಕುರಿತು ಶಿವಸೇನಾ ಪಕ್ಷದ ಮುಖವಾಣಿಯಲ್ಲಿ ಸಂಜಯ್ ರಾವತ್ ಬರೆದಿರುವ ಲೇಖನದ ಕುರಿತು ನೋಟಿಸ್ ನೀಡಲಾಗಿದೆ.

SSSR Death Case
ಸುಶಾಂತ್​ ಸಿಂಗ್​ ರಜಪೂತ್
author img

By

Published : Aug 14, 2020, 8:22 AM IST

ಪಾಟ್ನಾ: ಬಿಹಾರ ಶಾಸಕ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರ ಆಪ್ತ ಸಂಬಂಧಿ ಬುಧವಾರ ಶಿವಸೇನೆ ಮುಖಂಡ ಸಂಜಯ್ ರಾವತ್ ಅವರಿಗೆ ಲಾಯರ್​​ ನೋಟಿಸ್ ಕಳುಹಿಸಿದ್ದಾರೆ. ಮೃತ ನಟನ ತಂದೆಯೊಂದಿಗಿನ ಸಂಬಂಧದ ಬಗ್ಗೆ ಪಕ್ಷದ ಮುಖವಾಣಿಯಲ್ಲಿ ಅವರ ಬರಹದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರ ವಕೀಲರು ಎಚ್ಚರಿಕೆ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ 'ಸಾಮ್ನಾ ಅಂಕಣದಲ್ಲಿ, ಸುಶಾಂತ್ ತನ್ನ ಸ್ವಂತ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ ಮತ್ತು ಎರಡನೇ ಮದುವೆಯ ನಂತರ ತನ್ನ ತಂದೆಯೊಂದಿಗೆ ಆತನ ಸಂಬಂಧ ಹಳಸಿತ್ತು ಎಂದು ರಾವತ್ ಆರೋಪಿಸಿದ್ದರು.

"ಸಂಜಯ್ ರಾವತ್ ಅವರು ಸಂಸತ್ತಿನ ಗೌರವಾನ್ವಿತ ಸದಸ್ಯರು ಮತ್ತು ಪಕ್ಷದ ಜವಾಬ್ದಾರಿಯುತ ವಕ್ತಾರರಾಗಿದ್ದಾರೆ. ನನ್ನ ಕಕ್ಷಿದಾರ ನೀರಜ್ ಕುಮಾರ್ ಬಬ್ಲು ಅವರ ವಿರುದ್ಧ ಆಧಾರರಹಿತ ಟೀಕೆಗಳಿಗೆ 48 ಗಂಟೆಗಳ ಒಳಗೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಒಂದು ವೇಳೆ ಹಾಗೆ ಮಾಡದೇ ಇದ್ದರೆ ನಾವು ಕಾನೂನು ಮೂಲಕ ಪರಿಹಾರ ಹುಡುಕಬೇಕಾಗುತ್ತದೆ "ಎಂದು ಬಿಜೆಪಿ ಶಾಸಕರ ಸಲಹೆಗಾರ ಅನೀಶ್ ಜಾ ಹೇಳಿದ್ದಾರೆ

ದಿವಂಗತ ನಟನ ಸಾವಿನ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಸಿಬಿಐ ಬಿಟ್ಟು ಯಾರಾದರೂ ತನಿಖೆಯನ್ನು ನಡೆಸಿದರೆ, ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದೂ ಅವರು ಇದೇ ವೇಳೆ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.