ಮುಂಬೈ: ಬಾಲಿವುಡ್ ಖ್ಯಾತ ನಟ ಶಾರೂಖ್ ಖಾನ್ ಅವರು ಮುಂಬೈನಲ್ಲಿರುವ ತಮ್ಮ ಕಚೇರಿಯನ್ನು ಕೋವಿಡ್ ಸೋಂಕಿತರಿಗಾಗಿ ನೀಡುವ ಮೂಲಕ ಮಾದರಿಯಾಗಿದ್ದಾರೆ.
ನಟ ಶಾರೂಖ್ ಖಾನ್ ಹಾಗೂ ಅವರ ಪತ್ನಿ ಗೌರಿ ಖಾನ್ ಅವರು ತಮ್ಮ ನಾಲ್ಕು ಅಂತಸ್ತಿನ ಕಚೇರಿಯನ್ನು ಕೋವಿಡ್ ಸಂಬಂಧ ಬಳಸಿಕೊಳ್ಳುವಂತೆ ಬಾಂಬೆ ಮಹಾನಗರ ಪಾಲಕೆಗೆ ಕೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಶಾರೂಖ್ ಖಾನ್ ಅವರ ಕಚೇರಿಯನ್ನು 15 ಬೆಡ್ಗಳ ಐಸಿಯು ಘಟಕವನ್ನಾಗಿ ಮಾಡಿ, ಅದರಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಖಾನ್ ಅವರ ಮೀರ್ ಫೌಂಡೇಷನ್, ಬಾಂಗೆ ಮಹಾನಗರ ಪಾಲಿಕೆ ಹಾಗೂ ಹಿಂದುಜಾ ಆಸ್ಪತ್ರೆಯವರ ಸಹಭಾಗಿತ್ವದಲ್ಲಿ ಕಿಂಗ್ಖಾನ್ ಅವರ ಕಚೇರಿಯನ್ನು ಐಸಿಯು ಘಟಕವನ್ನಾಗಿ ಅಪ್ಗ್ರೇಡ್ ಮಾಡಲಾಗಿದೆ.
ಕೊರೊನಾ ಹಿನ್ನೆಲೆ ಸಾಕಷ್ಟು ಸೌಲಭ್ಯಗಳ ಕೊರತೆ ಎದುರಾಗಿದ್ದ ಕಾರಣ ಖಾನ್ ದಂಪತಿ ಏಪ್ರಿಲ್ ತಿಂಗಳಲ್ಲೇ ಮಹಾನಗರ ಪಾಲಿಕೆಗೆ ತೆರಳಿ, ತಮ್ಮ ಕಚೇರಿ ಬಳಸಿಕೊಳ್ಳುವಂತೆ ಹೇಳಿದ್ದರು. ಆ ಬಳಿಕ ಮೇ.29ರಿಂದ ಖಾನ್ ಅವರ ಕಚೇರಿ ಪಡೆದು ಕ್ವಾರಂಟೈನ್ಗೆ ಬಳಸಿಕೊಳ್ಳಲಾಗಿತ್ತು. ನಂತರ ಜುಲೈ15ರ ಬಳಿಕ ಅಲ್ಲೇ ಐಸಿಯು ಘಟಕವನ್ನಾಗಿ ಅಪ್ಗ್ರೇಡ್ ಮಾಡುವ ಕಾರ್ಯ ಆರಂಭವಾಯಿತು. ಇದೀಗ ಖಾನ್ ಅವರ ಕಚೇರಿ ಐಸಿಯು ಘಟಕವಾಗಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.