ಮುಂಬೈ: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ತಲುಪಿಸುವ ಮಹತ್ತರ ಕಾರ್ಯ ಮಾಡುತ್ತಿರುವ ನಟ ಸೋನು ಸೂದ್ಗೆ ಅಭಿಮಾನಿಯೋಬ್ಬ ವಿಶೇಷ ಬೇಡಿಕೆ ಇಟ್ಟಿದ್ದಾನೆ.
-
थोड़े दिन दूर रह के देख ले भाई .. सच्चे प्यार की परीक्षा भी हो जाएगी । 😂 https://t.co/mD7JEMgD3q
— sonu sood (@SonuSood) May 25, 2020 " class="align-text-top noRightClick twitterSection" data="
">थोड़े दिन दूर रह के देख ले भाई .. सच्चे प्यार की परीक्षा भी हो जाएगी । 😂 https://t.co/mD7JEMgD3q
— sonu sood (@SonuSood) May 25, 2020थोड़े दिन दूर रह के देख ले भाई .. सच्चे प्यार की परीक्षा भी हो जाएगी । 😂 https://t.co/mD7JEMgD3q
— sonu sood (@SonuSood) May 25, 2020
ಈ ಬಗ್ಗೆ ಟ್ವೀಟ್ ಮಾಡಿರುವ ವ್ಯಕ್ತಿಯೋರ್ವ, 'ಅಣ್ಣ ನನ್ನ ಗೆಳತಿಯ ಬಳಿಗೆ ಹೋಗಲು ನನಗೆ ಸಹಾಯ ಮಾಡಿ. ಅವಳು ಬಿಹಾರದಲ್ಲಿದ್ದಾಳೆ' ಎಂದಿದ್ದಾನೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೋನು ಸೂದ್, 'ಕೆಲವು ದಿನಗಳವರೆಗೆ ದೂರವಿರಲು ಪ್ರಯತ್ನಿಸಿ ಸಹೋದರ. ನಿಮ್ಮ ನಿಜವಾದ ಪ್ರೀತಿಗೆ ಇದೊಂದು ಪರೀಕ್ಷೆಯಾಗಿದೆ' ಎಂದಿದ್ದಾರೆ.
ವಿಲನ್‌ನೊಳಗೊಬ್ಬ ರಿಯಲ್ ಹೀರೋ: ಕನ್ನಡದ ಕಾರ್ಮಿಕರನ್ನು ಊರು ತಲುಪಿಸಿದ ಸೋನು ಸೂದ್
ಲಾಕ್ಡೌನ್ನಿಂದ ಮಹಾರಾಷ್ಟ್ರದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ ತಮ್ಮ ರಾಜ್ಯಗಳಿಗೆ ಮರಳಲು ಸೋನು ಸೂದ್ ಸಹಾಯ ಮಾಡುತ್ತಿದ್ದಾರೆ. ತೆರೆ ಮೇಲೆ ಕಳನಟನಾದರೂ ರಿಯಲ್ ಲೈಫ್ನಲ್ಲಿ ಹಲವರ ಪಾಲಿಗೆ ಹೀರೋ ಆಗಿದ್ದು, ನಟ ಅಜಯ್ ದೇವಗನ್ ಕೂಡ ಸೋನು ಸೂದ್ಗೆ ಮೆಚ್ಚುಗೆ ಸೂಚಿಸಿದ್ದರು.
ಮತ್ತೆ ವಲಸೆ ಕಾರ್ಮಿಕರ ರಕ್ಷಣೆಗೆ ನಿಂತ ನಟ ಸೋನು ಸೂದ್
ಈ ಬಗ್ಗೆ ಮಾತನಾಡಿದ್ದ ಅವರು, ಇದೊಂದು ಭಾವನಾತ್ಮಕ ಪ್ರಯಾಣವಾಗಿದೆ. ವಲಸಿಗರು ತಮ್ಮ ಮನೆಗಳಿಂದ ದೂರವಿರುವುದು ಮತ್ತು ಮನೆಗೆ ತೆರಳಲು ಪ್ರಯತ್ನಿಸುತ್ತಿರುವುದನ್ನು ನೋಡಿ ನನ್ನ ಹೃದಯಕ್ಕೆ ನೋವಾಗಿದೆ. ನಾನು ವಲಸಿಗರನ್ನು ಮನೆಗೆ ಕಳುಹಿಸುವುದನ್ನು ಮುಂದುವರಿಸುತ್ತೇನೆ. ಕೊನೆಯ ವಲಸಿಗ ತನ್ನ ಕುಟುಂಬ ಮತ್ತು ಪ್ರೀತಿಪಾತ್ರರನ್ನು ಸೇರುವವರೆಗೂ ನನ್ನ ಕಾರ್ಯ ಮುಂದುವರಿಯಲಿದೆ ಎಂದಿದ್ದಾರೆ.
ವೈದ್ಯಕೀಯ ಸಿಬ್ಬಂದಿಗೆ ಸ್ವಂತ ಹೋಟೆಲ್ ಬಿಟ್ಟುಕೊಡಲು ಮುಂದಾದ ನಟ ಸೋನು ಸೂದ್..