ETV Bharat / sitara

ಮಗುವಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿ ಉದಾರತೆ ಮೆರೆದ ರಿಯಲ್​​ ಹೀರೋ ಸೋನು ಸೂದ್​ - ಮಗುವಿಗೆ ಶಸ್ತ್ರ ಚಿಕಿತ್ಸೆ ಮಾಡಿಸಲು ಸಹಾಯ ಮಾಡಿದ ಸೋನು ಸೂದ್​

ಸರಿಯಾದ ಸಮಯದಲ್ಲಿ ತಮಗೆ ಸಹಾಯ ಮಾಡಿದ್ದಕ್ಕಾಗಿ ಕೃಷ್ಣ ದಂಪತಿ, ಸೋನು ಸೂದ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇಂತಹ ಉದಾರವಾದ ಕೆಲಸಗಳಿಂದ ಸೋನು ಸೂದ್ ನಿಜ ಜೀವನದ ಹೀರೋ ಎಂದು ಕರೆಸಿಕೊಂಡಿದ್ದಾರೆ..

Sonu Sood
ಸೋನು ಸೂದ್​
author img

By

Published : Oct 20, 2021, 5:50 PM IST

Updated : Oct 20, 2021, 6:05 PM IST

ತೆಲಂಗಾಣ : ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ಶಸ್ತ್ರ ಚಿಕಿತ್ಸೆ ಮಾಡಿಸುವ ಮೂಲಕ ಬಾಲಿವುಡ್ ನಟ ಸೋನು ಸೂದ್ ಮತ್ತೊಮ್ಮೆ ತಮ್ಮ ಉದಾರತೆ ಮೆರೆದಿದ್ದಾರೆ. ಖಮ್ಮಮ್ ಜಿಲ್ಲೆಯ ಕಂಚೆಪೊಗು ಕೃಷ್ಣ ಮತ್ತು ಬಿಂದು ಪ್ರಿಯಾ ದಂಪತಿಗೆ ಈ ವರ್ಷ ಗಂಡು ಮಗು ಜನಿಸಿತ್ತು.

ಆದರೆ, ಪುಟ್ಟ ಕಂದಮ್ಮ ಹೃದಯ ಸಮಸ್ಯೆಯಿಂದ ಬಳುಲುತ್ತಿತ್ತು. ಮಗುವಿನ ಚಿಕಿತ್ಸೆಗೆ 6 ಲಕ್ಷಕ್ಕಿಂತ ಅಧಿಕ ಮೊತ್ತದ ಹಣದ ಅವಶ್ಯಕತೆ ಇತ್ತು. ಆದರೆ, ಮಗುವಿನ ತಂದೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಅಷ್ಟೊಂದು ಹಣ ಒದಗಿಸಲು ಶಕ್ತರಾಗಿರಲಿಲ್ಲ.

ದಂಪತಿಯ ಸಮಸ್ಯೆಯನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿದ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ವಿಜ್ಞಾನ ವೇದಿಕೆಯ ಪ್ರತಿನಿಧಿಗಳು, ನಟ ಸೋನು ಸೂದ್​ ಬಳಿ ಸಹಾಯ ಮಾಡುವಂತೆ ಮನವಿ ಮಾಡಿದ್ದರು.

ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಸೋನು ಸೂದ್, ದಂಪತಿ ಸಮೇತ ಮಗುವನ್ನು ಮುಂಬೈಗೆ ಕರೆ ತಂದು ವಾಡಿಯಾ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿದ್ದರು. ಇದೀಗ ಆಪರೇಷನ್ ಕೂಡ ಯಶಸ್ವಿಯಾಗಿದೆ. ಮಗುವಿನ ಆರೋಗ್ಯವು ಉತ್ತಮ ಸ್ಥಿತಿಯಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸರಿಯಾದ ಸಮಯದಲ್ಲಿ ತಮಗೆ ಸಹಾಯ ಮಾಡಿದ್ದಕ್ಕಾಗಿ ಕೃಷ್ಣ ದಂಪತಿ, ಸೋನು ಸೂದ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇಂತಹ ಉದಾರವಾದ ಕೆಲಸಗಳಿಂದ ಸೋನು ಸೂದ್ ನಿಜ ಜೀವನದ ಹೀರೋ ಎಂದು ಕರೆಸಿಕೊಂಡಿದ್ದಾರೆ.

Last Updated : Oct 20, 2021, 6:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.