ಮುಂಬೈ: ಕೋವಿಡ್ ಸಂದರ್ಭದಲ್ಲಿ ನಟ ಮತ್ತು ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ದೇಶಕ್ಕೆ ಮಾಡಿದ ಸಹಾಯ ಎಲ್ಲರಲ್ಲೂ ಅಚ್ಚಾಗಿ ಉಳಿದಿದೆ. 'ರಿಯಲ್ ಹೀರೋ' ಎಂಬ ಬಿರುದು ಪಡೆದಿರುವ ಸೋನು ಸೂದ್ ಮೇಲೆ ತೆರಿಗೆ ವಂಚನೆ ಆರೋಪ ಕೇಳಿಬಂದಿದ್ದು, ಈ ಬಗ್ಗೆ ನಟ ಟ್ವಿಟರ್ನಲ್ಲಿ ಐಟಿ ಇಲಾಖೆಗೆ ಉತ್ತರ ನೀಡಿದ್ದಾರೆ.
-
“सख्त राहों में भी आसान सफर लगता है,
— sonu sood (@SonuSood) September 20, 2021 " class="align-text-top noRightClick twitterSection" data="
हर हिंदुस्तानी की दुआओं का असर लगता है” 💕 pic.twitter.com/0HRhnpf0sY
">“सख्त राहों में भी आसान सफर लगता है,
— sonu sood (@SonuSood) September 20, 2021
हर हिंदुस्तानी की दुआओं का असर लगता है” 💕 pic.twitter.com/0HRhnpf0sY“सख्त राहों में भी आसान सफर लगता है,
— sonu sood (@SonuSood) September 20, 2021
हर हिंदुस्तानी की दुआओं का असर लगता है” 💕 pic.twitter.com/0HRhnpf0sY
ಕಳೆದ ವಾರ ಮುಂಬೈನಲ್ಲಿರುವ ಸೋನು ಸೂದ್ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು, ನಟ 20 ಕೋಟಿ ರೂ. ಆದಾಯ ತೆರಿಗೆ ವಂಚನೆ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಕೆಲ ಸಾಕ್ಷ್ಯಗಳು ಲಭ್ಯವಾಗಿವೆ ಎಂಬ ಮಾಹಿತಿ ನೀಡಿದ್ದರು. ಈ ಬಗ್ಗೆ ಮೌನವಾಗಿದ್ದ ಸೂದ್ ಇದೀಗ ಟ್ವೀಟ್ ಮಾಡಿದ್ದು, "ಅತ್ಯಂತ ಕಠಿಣವಾದ ರಸ್ತೆಗಳಲ್ಲಿಯೂ ಪ್ರತಿಯೊಬ್ಬ ಭಾರತೀಯನ ಸದ್ಭಾವನೆಯಿಂದ ಸುಲಭ ಪ್ರಯಾಣವು ಕಂಡುಬರುತ್ತದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಟ ಸೋನು ಸೂದ್ 20 ಕೋಟಿ ರೂ. ಆದಾಯ ತೆರಿಗೆ ವಂಚನೆ : ಕಂದಾಯ ಇಲಾಖೆ ಆರೋಪ
"ನಾನು ಭಾರತದ ಜನರ ಸೇವೆಗಾಗಿ ಪ್ರತಿಜ್ಞೆ ಮಾಡಿರುವೆ. ನನ್ನ ಸಂಸ್ಥೆಯ ಒಂದೊಂದು ರೂಪಾಯಿ ಕೂಡ ಅಮೂಲ್ಯವಾದ ಜೀವವನ್ನು ಉಳಿಸಲು ಮತ್ತು ಅಗತ್ಯವಿರುವವರನ್ನು ತಲುಪಲು ತನ್ನ ಸರದಿಗಾಗಿ ಕಾಯುತ್ತಿದೆ. ನಾನು ಕೆಲವು ಅತಿಥಿಗಳನ್ನು ಭೇಟಿ ಮಾಡುವಲ್ಲಿ ನಿರತನಾಗಿದ್ದೆ. ಹೀಗಾಗಿ ಕಳೆದ ನಾಲ್ಕು ದಿನಗಳಿಂದ ನಿಮ್ಮ ಸೇವೆಯಲ್ಲಿ ಇರಲು ಸಾಧ್ಯವಾಗಲಿಲ್ಲ. ಇದೀಗ ಮತ್ತೆ ನಾನು ನಿಮ್ಮ ಸೇವೆಗಾಗಿ ಮರಳಿದ್ದೇನೆ" ಎಂದು ನಟ ಟ್ವೀಟ್ ಮಾಡಿದ್ದಾರೆ.
-
More power to u Sonu ji. U are a hero to millions of Indians https://t.co/TACjG8ugOP
— Arvind Kejriwal (@ArvindKejriwal) September 20, 2021 " class="align-text-top noRightClick twitterSection" data="
">More power to u Sonu ji. U are a hero to millions of Indians https://t.co/TACjG8ugOP
— Arvind Kejriwal (@ArvindKejriwal) September 20, 2021More power to u Sonu ji. U are a hero to millions of Indians https://t.co/TACjG8ugOP
— Arvind Kejriwal (@ArvindKejriwal) September 20, 2021
ಇದಕ್ಕೆ ರಿಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, "ಸೋನು ಜೀ ನಿಮಗೆ ಹೆಚ್ಚಿನ ಶಕ್ತಿ ಸಿಗಲಿ. ನೀವು ಲಕ್ಷಾಂತರ ಭಾರತೀಯರಿಗೆ ಹೀರೋ." ಎಂದು ಹೇಳಿದ್ದಾರೆ.