ಮುಂಬೈ: ಬಾಲಿವುಡ್ ನಟಿ ಸೋನಂ ಕಪೂರ್, ಆಗಸ್ಟ್ 17 ರಂದು ನಡೆದ ತನ್ನ ಸಹೋದರಿ ರಿಯಾ ಕಪೂರ್ ವಿವಾಹದ ಫೋಟೋಗಳನ್ನು ಕರಣ್ ಬೂಲಾನಿ ಜೊತೆ ಹಂಚಿಕೊಂಡಿದ್ದಾರೆ.
ಸೋನಂ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಿಯಾ ಮದುವೆಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. ರಿಯಾ ಮದುವೆಯಂದು ಸೋನಂ ಹೊಳೆಯುವ ತಿಳಿ - ನೀಲಿ ವರ್ಣದ ಸಾಂಪ್ರದಾಯಿಕ ಡ್ರೆಸ್ ಧರಿಸಿದ್ದರು. ಅವಳ ಸಹೋದರಿ ರಿಯಾ ಮದುವೆಗೆ ಬಿಳಿ ಬಣ್ಣದ ಸಾಂಪ್ರದಾಯಿಕ ಉಡುಪು ತೊಟ್ಟು ಕಂಗೊಳಿಸಿದರು.
ಸೋನಂ ಕಪೂರ್ ಶೇರ್ ಮಾಡಿರುವ ಒಂದು ಫೋಟೋದಲ್ಲಿ ರಿಯಾಳ ಮದುವೆ ಸಮಾರಂಭದಂದು ಸೋನಂ ಕಣ್ಣೀರು ಹಾಕುತ್ತಿರುವಂತೆ ಕಾಣುತ್ತಿದ್ದಾರೆ.
ಇದನ್ನೂ ಓದಿ: ಬ್ರೇಕ್‌ನ ನಂತರ ಸೂಪರ್ ಡ್ಯಾನ್ಸರ್ ಶೋದಲ್ಲಿ ಕಾಣಿಸಿಕೊಂಡ ಶಿಲ್ಪಾ ಶೆಟ್ಟಿ