ಹೈದರಾಬಾದ್ (ತೆಲಂಗಾಣ): ಬಾಲಿವುಡ್ ನಟಿ ಸೋನಂ ಕಪೂರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ತಾನು ತಾಯಿಯಾಗಲಿರುವ ಕುರಿತು ಬರೆದುಕೊಂಡಿದ್ದಾರೆ.
ನಟಿ ಸೋನಂ ಕಪೂರ್ ತಮ್ಮ ಪತಿ ಉದ್ಯಮಿಯಾದ ಆನಂದ್ ಅಹುಜಾ ಅವರ ಮಡಿಲಲ್ಲಿ ಮಲಗಿರುವ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, 'ನಾಲ್ಕು ಕೈಗಳು, ಎರಡು ಹೃದಯ, ಒಂದು ಕುಟುಂಬ.
ನಾವು ನಿನ್ನನ್ನು ಸಾಧ್ಯವಾದಷ್ಟು ಉತ್ತಮವಾಗಿ ಬೆಳೆಸಲು ಇಷ್ಟಪಡುತ್ತೇವೆ. ನಿನ್ನ ಪ್ರತಿ ಹೆಜ್ಜೆಯಲ್ಲೂ ನಾವಿರುತ್ತೇವೆ. ಪ್ರೀತಿ ಮತ್ತು ಬೆಂಬಲ ಸದಾ ನಿನ್ನೊಂದಿಗಿರುತ್ತದೆ. ನಿನ್ನ ಆಗಮನಕ್ಕೆ ಕಾಯುತ್ತಿದ್ದೇವೆ' ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಸೋನಂರ ಈ ಖುಷಿಯ ಪೋಸ್ಟ್‌ಗೆ ನಟ-ನಟಿಯರು ಕಮೆಂಟ್ ಮಾಡಿ ಶುಭ ಹಾರೈಸಿದ್ದಾರೆ. ಜಾಹ್ನವಿ ಕಪೂರ್, ಖುಷಿ ಕಪೂರ್ ಮತ್ತು ಅಂಶುಲಾ ಕಪೂರ್ ಅವರು ಕೂಜ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.
ನಟಿ ಕರೀನಾ ಕಪೂರ್, 'ನಿಮ್ಮಿಬ್ಬರಿಗೂ ಅಭಿನಂದನೆ, ತುಂಬಾ ಸಂತೋಷದ ವಿಚಾರ. ಮಕ್ಕಳು ಆಟವಾಡುವುದನ್ನು ಕಾಯಲು ಇನ್ನು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಸೋನಂ ಕಪೂರ್ ಅವರು ಉದ್ಯಮಿ ಆನಂದ್ ಅಹುಜಾ ಅವರನ್ನು ಮೇ 8, 2018ರಂದು ಮುಂಬೈನಲ್ಲಿ ವಿವಾಹವಾಗಿದ್ದರು.
ಓದಿ: ರಾಣಿ ಮುಖರ್ಜಿಗೆ 44ನೇ ಹುಟ್ಟುಹಬ್ಬದ ಸಂಭ್ರಮ; ಸಿನಿ ಜರ್ನಿ ಬಗ್ಗೆ ಗುಲಾಮ್ ನಟಿ ಮನದಾಳದ ಮಾತು