ಮುಂಬೈ: ಸದಾ ನಟನೆಯಲ್ಲಿ ಬ್ಯುಸಿಯಾಗಿರುತ್ತಿದ್ದ ನಟಿ - ಮಣಿಯರು ಕೋವಿಡ್ನಿಂದ ಮನೆಯಲ್ಲಿ ತಂಗಿದ್ದರು. ಈಗ ಮಹಾರಾಷ್ಟ್ರದಲ್ಲಿ ಕೋವಿಡ್ ಹತೋಟಿಗೆ ಬಂದಿದ್ದು, ನಗರದ ಬೀದಿಗಳಲ್ಲಿ ಒಬ್ಬೊಬ್ಬರಾಗಿ ಬಾಲಿವುಡ್ನ ತಾರೆಯರು ಕ್ಯಾಮೆರಾ ಕಣ್ಣಿಗೆ ಸಿಗುತ್ತಿದ್ದಾರೆ.
ಮುಂಬೈನ ಜುಹುದಲ್ಲಿನ ಸಲೂನ್ ಶಾಪ್ನಿಂದ ಹೊರಗೆ ಬರುತ್ತಿದ್ದಾಗ ಬಾಲಿವುಡ್ ನಟಿ ಸನ್ಯಾ ಮಲ್ಹೋತ್ರಾ ಕ್ಯಾಮೆರಾ ಕಣ್ಣಿಗೆ ಸಿಕ್ಕಿಹಾಕಿಕೊಂಡರು. ಅವರು ಮುಂದಿನ 'ಲವ್ ಹಾಸ್ಟೆಲ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರು ಈಗಿನಿಂದಲೇ ತಯಾರಿ ನಡೆಸಿದ್ದಾರೆ.
'ದಬಾಂಗ್' ನಟಿ ಸೋನಾಕ್ಷಿ ಸಿನ್ಹಾ ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ತೆಯಾದರು. ಅವಳು ಬಿಳಿ ಹಳದಿ ಹೂವಿನ ಕುರ್ತಾದಲ್ಲಿ ಸುಂದರವಾಗಿಯೇ ಕಾಣುತ್ತಿದ್ದರು. ಅವರು 'ಭುಜ್' ಚಿತ್ರದಲ್ಲಿ ಅಜಯ್ ದೇವಗನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ನಟಿ ಸೋನಾಲ್ ಚೌಹಾಣ್ ಬಾಂದ್ರಾದ ರೆಸ್ಟೋರೆಂಟ್ ಹೊರಗೆ ಕಾಣಿಸಿಕೊಂಡರು.
ಲಕ್ಷ್ಮಿ ಚಿತ್ರದ ನಟ ಶರದ್ ಕೆಲ್ಕರ್ ಜುಹುವಿನ ಡಬ್ಬಿಂಗ್ ಸ್ಟುಡಿಯೋ ಹೊರಗೆ ಬರುತ್ತಿದ್ದಾಗ ಕ್ಯಾಮೆರಾಗೆ ಸೆರೆ ಸಿಕ್ಕರು. ಅವರು ಮುಂದಿನ 'ಭುಜ್' ಮತ್ತು 'ಜರ್ಸಿ' ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.