ಮುಂಬೈ: ಸಲಾರ್ ಬೆಡಗಿ ಶೃತಿ ಹಾಸನ್ ಬಾಯ್ಫ್ರೆಂಡ್ ಸಂತಾನು ನಗರದಲ್ಲಿ ಕಲಾಕೃತಿ ಪ್ರದರ್ಶನ ಹಮ್ಮಿಕೊಂಡಿದ್ದರು. ಅವನ ಕಲಾಕೃತಿ ಮತ್ತು ಆತನ ಮೇಲೆ ನನಗೆ ಹೆಮ್ಮೆ ಇದೆ ಎಂದು ನಟಿ ಶೃತಿ ಹಾಸನ್ ಹೇಳಿದ್ದಾರೆ. ಇನ್ನು ಕಲಾಕೃತಿ ಪ್ರದರ್ಶನದಲ್ಲಿ ಶೃತಿ ಹಾಸನ್ ಕಿರಿಯ ಸಹೋದರಿ ಅಕ್ಷರಾ ಹಾಸನ್ ಭಾಗಿಯಾಗಿರುವುದು ವಿಶೇಷವಾಗಿತ್ತು.
ಈ ಕಲಾಕೃತಿ ಪ್ರದರ್ಶನದಲ್ಲಿ ಶೃತಿ ಹಾಸನ್ ಭಾಗಿಯಾಗಿ ಹಾಡು ಹಾಡಿ, ಡ್ಯಾನ್ಸ್ ಮಾಡಿ ಸಖತ್ ಎಂಜಾಯ್ ಮಾಡಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಟಿ ಶೃತಿ ಹಾಸನ್, ಸಂತಾನು ಕಲಾಕೃತಿ ಪ್ರದರ್ಶನದಲ್ಲಿ ನನ್ನೊಂದಿಗೆ ಭಾಗಿಯಾದ ಎಲ್ಲ ಸಂಗೀತಗಾರರಿಗೆ ಮತ್ತು ನನ್ನ ಮುದ್ದಿನ ಸಹೋದರಿ ಅಕ್ಷರಾಗೆ ಧನ್ಯವಾದ ಎಂದು ತಿಳಿಸಿದರು.
ಓದಿ: ಚಿನ್ನ ಕಳ್ಳತನ ಮಾಡಿರುವ ಆರೋಪದಡಿ ವಿಚಾರಣೆ... ಮನನೊಂದು ಆತ್ಮಹತ್ಯೆಗೆ ಶರಣಾದ ಕೆಲಸದಾಕೆ
ಶೃತಿ ಹಾಸನ್ ಮತ್ತು ಸಂತನು ಹಜಾರಿಕಾ ಒಂದೆರಡು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಮುಂಬೈನಲ್ಲಿರುವ ಶೃತಿ ಮನೆಯಲ್ಲಿ ಇಬ್ಬರೂ ಲಿವ್ ಇನ್ ರಿಲೇಶನ್ ಶಿಪ್ನಲ್ಲಿದ್ದಾರೆ. ಆಗಾಗ್ಗೆ ಇಬ್ಬರೂ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಇತ್ತೀಚೆಗೆ, ಮುಂಬೈನ ವರ್ಲಿಯಲ್ಲಿ ನಡೆದ ಕಲಾಕೃತಿ ಪ್ರದರ್ಶನದಲ್ಲಿ ಸಂತಾನು ಹಜಾರಿಕಾ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು. ಶೃತಿ ಅತ್ಯುತ್ತಮ ಗೆಳತಿಯಾಗಿದ್ದರಿಂದ ಅವರನ್ನು ಬೆಂಬಲಿಸಿದರು. ಈ ಕಲಾಕೃತಿ ಪ್ರದರ್ಶನದಲ್ಲಿ ಶೃತಿ ಹಾಸನ್ ತಮ್ಮ ಬ್ಯಾಂಡ್‌ನೊಂದಿಗೆ ಸರಣಿ ಹಾಡುಗಳನ್ನು ಹಾಡಿ, ಡ್ಯಾನ್ಸ್ ಮಾಡುವ ಮೂಲಕ ಪ್ರೇಕ್ಷಕರನ್ನು ಸೆಳೆದರು.
ತನ್ನ ಗೆಳೆಯ ಸಂತಾನು ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ. ಆತನನ್ನು ಪ್ರೀತಿಸಲು ಮತ್ತು ಗೌರವಿಸಲು ನಿತ್ಯ ಹೊಸ ಕಾರಣಗಳನ್ನು ಕಂಡುಕೊಳ್ಳುತ್ತೇನೆ ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೃತಿ ಹಾಸನ್ ಬರೆದುಕೊಂಡಿದ್ದಾರೆ.
ಓದಿ: ಸೌರವ್ ಗಂಗೂಲಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ 'ಸುಳ್ಳು'... ನಾರಾಯಣ ಹೆಲ್ತ್ ಸಿಟಿ ಸ್ಪಷ್ಟನೆ
ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ವಿಜಯ್ ಸೇತುಪತಿ ಅವರ ಲಾಭಂನಲ್ಲಿ ಶೃತಿ ಹಾಸನ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅವರು ಈಗ ತಮ್ಮ ಮುಂಬರುವ ದೊಡ್ಡ ಬಜೆಟ್ ಚಿತ್ರ ಸಲಾರ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಸಲಾರ್ ಚಿತ್ರ ಏಪ್ರಿಲ್ 14, 2022 ರಂದು ಬಿಡುಗಡೆಯಾಗಲಿದೆ. ಅವರ ಮುಂಬರುವ ವೆಬ್ ಸರಣಿ ಬೆಸ್ಟ್ ಸೆಲ್ಲರ್ ಫೆಬ್ರವರಿ 18 ರಂದು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಬಿಡುಗಡೆಯಾಗಲಿದೆ.
ನಟಿ ಶೀಘ್ರದಲ್ಲೇ ಗೋಪಿಚಂದ್ ಮಲಿನೇನಿ ನಿರ್ದೇಶನದ ನಂದಮೂರಿ ಬಾಲಕೃಷ್ಣ ಅವರ ಮುಂಬರುವ ತೆಲುಗು ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.