ETV Bharat / sitara

ನಟಿ ಶ್ರಿಯಾ ಶರಣ್​ ದಂಪತಿಗೆ ಹೆಣ್ಣು ಮಗು ಜನನ: 2 ವರ್ಷ ಈ ವಿಚಾರ ಮುಚ್ಚಿಟ್ಟಿದ್ದೇಕೆ? - ಬಾಲಿವುಡ್ ನಟಿ ಶ್ರಿಯಾ ಶರಣ್​

2020 ರ ಲಾಕ್​ಡೌನ್​ ಸಂದರ್ಭದಲ್ಲಿ ಶ್ರಿಯಾ ಶರಣ್​ಗೆ ಮಗು ಜನಿಸಿದ್ದು, ಇದೀಗ ಅವರು ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಶ್ರಿಯಾ ಶರಣ್​
ಶ್ರಿಯಾ ಶರಣ್​
author img

By

Published : Oct 12, 2021, 2:24 PM IST

ಬಾಲಿವುಡ್ ನಟಿ ಶ್ರಿಯಾ ಶರಣ್- ಪತಿ, ಉದ್ಯಮಿ ಆಂಡ್ರೇ ಕೊಶ್ಚೀವ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ಶ್ರಿಯಾಗೆ 2020ರ ಲಾಕ್​ಡೌನ್​ ಸಂದರ್ಭದಲ್ಲಿಯೇ ಮಗು ಜನಿಸಿತ್ತು. ಆದರೆ, ಈ ವಿಚಾರವನ್ನು ಎಲ್ಲಿಯೂ ಅವರು ಹೇಳಿಕೊಂಡಿರಲಿಲ್ಲ. ಇದೀಗ ಶ್ರಿಯಾ ಈ ವಿಚಾರ ಬಿಚ್ಚಿಟ್ಟಿದ್ದಾರೆ.

ತಮ್ಮ ಮುದ್ದು ಮಗುವಿನೊಂದಿಗೆ ಇರುವ ವಿಡಿಯೋವನ್ನು ನಟಿ ಶ್ರಿಯಾ ಶರಣ್ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘2020ರ ಕ್ವಾರಂಟೈನ್ ನಮಗೆ ಬಹಳ ಸುಂದರವಾಗಿತ್ತು. ಇಡೀ ಜಗತ್ತು ಸಂಕಷ್ಟದಲ್ಲಿರುವಾಗಲೇ, ನಮ್ಮ ಜೀವನ ಬದಲಾಯಿತು. ನಮಗೆ ಹೆಣ್ಣು ಮಗು ಜನಿಸಿತು. ನಾವು ದೇವರಿಗೆ ಬಹಳ ಕೃತಜ್ಞರಾಗಿರುತ್ತೇವೆ’ ಎಂದು ಇನ್​ಸ್ಟಾಗ್ರಾಂನಲ್ಲಿ ಶ್ರಿಯಾ ಶರಣ್ ಬರೆದುಕೊಂಡಿದ್ದಾರೆ. ಜೊತೆಗೆ 2020ರಲ್ಲಿ ತಾವು ಗರ್ಭಿಣಿಯಾಗಿದ್ದ ಫೋಟೋ ಮತ್ತು ಈಗ ತಮ್ಮ ಪುತ್ರಿಯನ್ನು ಶ್ರಿಯಾ ಶರಣ್ ಹಾಗೂ ಆಂಡ್ರೇ ಕೊಶ್ಚೀವ್ ಮುದ್ದು ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.

ತಮಗೆ ಮಗು ಜನಿಸಿದ ವಿಚಾರವನ್ನು ವರ್ಷದ ಬಳಿಕ ಬಹಿರಂಗಪಡಿಸಿದ ಶ್ರಿಯಾ ಶರಣ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. 2001ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಶ್ರಿಯಾ ಶರಣ್ ಈವರೆಗೂ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರು 2018ರಲ್ಲಿ ರಷ್ಯನ್ ಬಾಯ್‌ಫ್ರೆಂಡ್ ಆಂಡ್ರೇ ಕೊಶ್ಚೀವ್‌ ಜೊತೆ ದಾಂಪತ್ಯ ಬದುಕಿಗೆ ಕಾಲಿಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.