ನವದೆಹಲಿ : ಶ್ರೇಯಾ ಘೋಷಲ್ ಉತ್ತಮ ಗಾಯಕಿ ಅನ್ನೋದು ಎಲ್ಲರಿಗೂ ತಿಳಿದಿದೆ. ಆದರೆ, ಅವರೊಳಗೆ ಒಬ್ಬ ಸಂಯೋಜಕಿಯೂ ಇದ್ದಾರೆ ಎಂಬುವುದು ಯಾರಿಗೂ ತಿಳಿದಿಲ್ಲ.
ಲಾಕ್ಡೌನ್ನ ಸ್ವಲ್ಪ ದಿನಗಳ ಮೊದಲು ಶ್ರೇಯಾ 'ನಾ ವೋ ಮೇ' ಎಂಬ ತಮ್ಮ ಹಾಡು ಬಿಡುಗಡೆಗೊಳಿಸಿದ್ದರು. ಶ್ರೇಯಾ ಆ ಹಾಡಿನ ಸಹ-ಸಂಯೋಜಕಿಯಾಗಿದ್ದರು.
"ನಾನು ಹಾಡನ್ನು ಸ್ವಲ್ಪ ದಿನಗಳ ಬಳಿಕ ಬಿಡುಗಡೆ ಮಾಡಬೇಕೆಂದಿದ್ದೆ. ಆದರೆ, ಲಾಕ್‌ಡೌನ್ ಎಷ್ಟು ಸಮಯದವರೆಗೆ ಮುಂದುವರೆಯುತ್ತದೆ ಎಂದು ಖಾತ್ರಿಯಿಲ್ಲದ ಕಾರಣ ಹಾಡನ್ನು ನನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದೇನೆ. ನಾನು ಮತ್ತು ನನ್ನ ಸಹೋದರ ಈ ಹಾಡಿನ ಸಹ-ಸಂಯೋಜಕರಾಗಿದ್ದೇವೆ" ಎಂದು ಶ್ರೇಯಾ ತಿಳಿಸಿದ್ದಾರೆ.
- " class="align-text-top noRightClick twitterSection" data="">
ಲಾಕ್‌ಡೌನ್ ದಿನಗಳಲ್ಲಿ ತನ್ನ ಯೂಟ್ಯೂಬ್ ಚಾನೆಲ್‌ಗಾಗಿ ಹೆಚ್ಚಿನ ವಿಷಯವನ್ನು ರಚಿಸಲು ಶ್ರೇಯಾ ಬಯಸುತ್ತಾರೆ. "ನಾನು ಹೊಸ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ. ನಾನು ಗಾಯಕಿಯಾಗಿದ್ದು, ಇದೀಗ ಸಂಗೀತ ಸಂಯೋಜನೆ ಮಾಡಿದ್ದೇನೆ. ಈ ರೀತಿಯ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೇನೆ" ಎಂದು ಶ್ರೇಯಾ ಹೇಳಿದರು.
"ನಾನು ಹಾಡುವ ಹಾಡನ್ನು ನಾನೇ ರಚಿಸಬೇಕೆಂದು ಬಹಳ ಹಿಂದಿನಿಂದಲೇ ಬಯಸಿದ್ದೆ. ಕೇವಲ ಸಿನಿಮಾ ಹಾಡುಗಳಿಗೆ ಮಾತ್ರ ಸೀಮಿತವಾಗಿರಲು ನಾನು ಬಯಸುವುದಿಲ್ಲ" ಎಂದು ಹೇಳಿದರು.