ETV Bharat / sitara

ನಮ್ಮ ಮೇಲೂ ಕರುಣೆ ತೋರಿಸಿ: ಜಯಾ ಬಚ್ಚನ್​​ ವಿರುದ್ಧ ಕಂಗನಾ ಗರಂ - ಡ್ರಗ್ಸ್​​ ಹಾಗೂ ಮೂವಿ ಮಾಫಿಯಾ

ಇಂದಿನಾ ರಾಜ್ಯಸಭಾ ಕಲಾಪದಲ್ಲಿ ಪರೋಕ್ಷವಾಗಿ ನಟಿ ಕಂಗನಾ ರನೌತ್​ಗೆ ಟಾಂಗ್​ ನೀಡಿದ್ದ ಸಂಸದೆ ಜಯಾ ಬಚ್ಚನ್​ಗೆ ಕಂಗನಾ ತಿರುಗೇಟು ನೀಡಿದ್ದಾರೆ.

Kangana Ranaut attacks Jaya Bachchan
ಜಯಾ ಬಚ್ಚನ್​​ ವಿರುದ್ಧ ಕಂಗನಾ ಗರಂ
author img

By

Published : Sep 15, 2020, 12:41 PM IST

ಮುಂಬೈ: ವಿವಾದಗಳ ಸುಳಿಯಲ್ಲಿ ಸಿಲುಕಿರುವ ಬಾಲಿವುಡ್​ ನಟಿ ಕಂಗನಾ ರನೌತ್​​, ಶಿವಸೇನೆ ಸಂಸದ ಸಂಜಯ್​ ರಾವತ್​ ಜೊತೆಗಿನ ಕದನದ ಬಳಿಕ ಇದೀಗ ಹಿರಿಯ ನಟಿ, ಸಂಸದೆ ಜಯಾ ಬಚ್ಚನ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಜಪೂತ್​ ಸಾವಿನ ವಿಚಾರ, ಡ್ರಗ್ಸ್​​ ಹಾಗೂ ಮೂವಿ ಮಾಫಿಯಾ ವಿರುದ್ಧ ದನಿ ಎತ್ತಿರುವ ನಟಿ ಕಂಗನಾ ರನೌತ್​​​​ ಬಾಲಿವುಡ್​​​ಅನ್ನು 'ಗಟ್ಟರ್'​ (ಚರಂಡಿ) ಎಂದು ಈ ಹಿಂದೆ ಟ್ವೀಟ್​​ ಮಾಡಿದ್ದರು. ಇಂದು ನಡೆಯುತ್ತಿರುವ ರಾಜ್ಯಸಭಾ ಕಲಾಪದಲ್ಲಿ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಈ ವಿಚಾರವನ್ನು ಎತ್ತಿದ್ದರು.

  • Jaya ji would you say the same thing if in my place it was your daughter Shweta beaten, drugged and molested as a teenage, would you say the same thing if Abhieshek complained about bullying and harassment constantly and found hanging one day? Show compassion for us also 🙏 https://t.co/gazngMu2bA

    — Kangana Ranaut (@KanganaTeam) September 15, 2020 " class="align-text-top noRightClick twitterSection" data=" ">

ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ರಂಗದವರ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಅವರ ಹೆಸರು ಕೆಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಚಿತ್ರರಂಗ ಎಷ್ಟೋ ಜನರಿಗೆ ಹೆಸರು ಮತ್ತು ಖ್ಯಾತಿ ತಂದುಕೊಟ್ಟಿದೆ. ಆದರೂ ಅಂತವರೇ ಇದನ್ನು 'ಗಟ್ಟರ್'​ ಎಂದು ಕರೆಯುತ್ತಿದ್ದಾರೆ ಎಂದು ಕಂಗನಾಗೆ ಪರೋಕ್ಷವಾಗಿ ಜಯಾ ಟಾಂಗ್​ ಕೊಟ್ಟಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಂಗನಾ, "ಜಯಾ ಜೀ.. ನನ್ನ ಜಾಗದಲ್ಲಿ ನಿಮ್ಮ ಮಗಳು ಶ್ವೇತಾ ಇದ್ದು, ಆಕೆಯ ಮೇಲೆ ಡ್ರಗ್ಸ್​​ ಆರೋಪ ಹೊರಿಸಿ, ಕಿರುಕುಳ ನೀಡಿದ್ದರೆ ನೀವು ಇದೇ ಮಾತನ್ನು ಹೇಳುತ್ತಿದ್ರಾ? ನಿಮ್ಮ ಮಗ ಅಭಿಷೇಕ್​ ಬಚ್ಚನ್​ ಬೆದರಿಕೆ, ಕಿರುಕುಳಕ್ಕೊಳಗಾಗಿ ನೇಣಿಗೆ ಶರಣಾಗಿದ್ದರೆ ಆಗ ಕೂಡ ಇದೇ ಮಾತು ಹೇಳುತ್ತಿದ್ರಾ? ನಮ್ಮ ಮೇಲೂ ಕರುಣೆ ತೋರಿಸಿ" ಎಂದು ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.