ETV Bharat / sitara

ಪತಿ ಜೈಲಿನಲ್ಲಿ.. ಮಕ್ಕಳೊಂದಿಗೆ ಗಣೇಶ ಹಬ್ಬದ ಆಚರಣೆಯಲ್ಲಿ ಶಿಲ್ಪಾ ಶೆಟ್ಟಿ - Shilpa Shetty Instagram post

"ಓಂ ಗನ್ ಗಣಪತಾಯ ನಮೋ ನಮಃ ! ಶ್ರೀ ಸಿದ್ಧಿವಿನಾಯಕ ನಮೋ ನಮಃ ! ಅಷ್ಟ ವಿನಾಯಕ ನಮೋ ನಮಃ ! ಗಣಪತಿ ಬಪ್ಪಾ ಮೋರಯಾ! ನಮ್ಮ ಗಣ್ಣು ರಾಜ ನಮ್ಮನ್ನು ಭೇಟಿ ಮಾಡಲು 11ನೇ ವರ್ಷವೂ ಬಂದಿದ್ದಾನೆ" ಎಂದು ಶಿಲ್ಪಾ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ..

Shilpa Shetty
Shilpa Shetty
author img

By

Published : Sep 10, 2021, 5:34 PM IST

ಮುಂಬೈ (ಮಹಾರಾಷ್ಟ್ರ): ಪ್ರತಿ ವರ್ಷ ಮನೆಯಲ್ಲಿ ಗಣಪತಿ ಮೂರ್ತಿ ತಂದು ವಿಜೃಂಭಣೆಯಿಂದ ಕುಟುಂಬ ಸಮೇತ ಗಣೇಶ ಚತುರ್ಥಿ ಆಚರಿಸುವ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಅವರು ಇದೇ ಮೊದಲ ಬಾರಿಗೆ ಪತಿ ರಾಜ್​ ಕುಂದ್ರಾ ಅನುಪಸ್ಥಿತಿಯಲ್ಲಿ ಮಕ್ಕಳೊಂದಿಗೆ ಹಬ್ಬ ಆಚರಿಸಿದ್ದಾರೆ.

ನಿನ್ನೆಯಷ್ಟೇ ಗಣೇಶನ ಮೂರ್ತಿ ಖರೀದಿಸಿದ್ದ ಶಿಲ್ಪಾ ಶೆಟ್ಟಿ, 'ಗಣಪತಿ ಬಪ್ಪಾ ಮೋರಯಾ' ಎಂದು ಜಯಘೋಷ ಹಾಕುತ್ತಾ ತಮ್ಮ ಮನೆಗೆ ಗಣೇಶನನ್ನು ಬರಮಾಡಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿತ್ತು. ಇಂದು ಶಾಸ್ತ್ರೋಕ್ತವಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ನಟಿ, ಮಕ್ಕಳಾದ ವಿಯಾನ್, ಸಮೀಷಾ ಜೊತೆ ಹಬ್ಬ ಆಚರಣೆ ಮಾಡಿದ್ದಾರೆ.

ಗಣೇಶ ಚತುರ್ಥಿ ಆಚರಣೆಯ ಫೋಟೋಗಳನ್ನು ಶಿಲ್ಪಾ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಒಂದು ಫೋಟೋದಲ್ಲಿ ಶಿಲ್ಪಾ ಶೆಟ್ಟಿ ತಮ್ಮ ಮಕ್ಕಳಿಗೆ ಲಡ್ಡು ತಿನಿಸುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಅಮ್ಮ-ಮಗಳು ಇಬ್ಬರೂ ಗುಲಾಬಿ ಬಣ್ಣದ ಒಂದೇ ರೀತಿಯ ಉಡುಪು ಧರಿಸಿದ್ದಾರೆ.

ಇದನ್ನೂ ಓದಿ: ಗಣೇಶನ ವಿಗ್ರಹ ಮನೆಗೆ ತಂದ ಶಿಲ್ಪಾಶೆಟ್ಟಿ.. ಗಣಪತಿ ಬಪ್ಪಾ ಮೋರಯಾ ಎಂದು ಜೈಕಾರ ಹಾಕಿದ ನಟಿ

"ಓಂ ಗನ್ ಗಣಪತಾಯ ನಮೋ ನಮಃ ! ಶ್ರೀ ಸಿದ್ಧಿವಿನಾಯಕ ನಮೋ ನಮಃ ! ಅಷ್ಟ ವಿನಾಯಕ ನಮೋ ನಮಃ ! ಗಣಪತಿ ಬಪ್ಪಾ ಮೋರಯಾ! ನಮ್ಮ ಗಣ್ಣು ರಾಜ ನಮ್ಮನ್ನು ಭೇಟಿ ಮಾಡಲು 11ನೇ ವರ್ಷವೂ ಬಂದಿದ್ದಾನೆ" ಎಂದು ಶಿಲ್ಪಾ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅಶ್ಲೀಲ ವಿಡಿಯೋ ಚಿತ್ರೀಕರಣ ಕೇಸ್

ಲಂಡನ್ ಮೂಲದ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು, ಮೊಬೈಲ್ ಆ್ಯಪ್ ಮೂಲಕ ಅಶ್ಲೀಲ ವಿಡಿಯೋ ಸ್ಟ್ರೀಮಿಂಗ್ ಮಾಡುವ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪದಡಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್​ ಕುಂದ್ರಾ ಜತೆಗೆ 11 ಮಂದಿಯನ್ನು ಜುಲೈ 19ರಂದು ಮುಂಬೈ ಪೊಲೀಸರು ಬಂಧಿಸಿದ್ದರು. ಪ್ರಸ್ತುತ ರಾಜ್​ ಕುಂದ್ರಾ ಜೈಲಿನಲ್ಲಿದ್ದು, ಇದೇ ಮೊದಲ ಬಾರಿಗೆ ಶಿಲ್ಪಾ, ಪತಿಯ ಅನುಪಸ್ಥಿತಿಯಲ್ಲಿ ಗಣೇಶ ಚತುರ್ಥಿ ಆಚರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.