ETV Bharat / sitara

"ಬಾತ್ರಾ ಜೊತೆ ಡಿಂಪಲ್​ ಕಳೆದಿದ್ದು ಕೇವಲ 40 ದಿನ".. 'ಅಮರ' ಪ್ರೇಮದ ಕಹಾನಿ ಬಿಚ್ಚಿಟ್ಟ ಸಂದೀಪ್​ ಶ್ರೀವಾಸ್ತವ್

author img

By

Published : Aug 30, 2021, 12:24 PM IST

ಕ್ಯಾಪ್ಟನ್ ವಿಕ್ರಮ್ ಬಾತ್ರಾರ ಜೀವನಾಧಾರಿತ ಚಿತ್ರ 'ಶೇರ್​ ಷಾ' ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಯಶಸ್ಸಿನೆಡೆಗೆ ಮುನ್ನುಗ್ಗುತ್ತಿದೆ. ಈ ಚಿತ್ರದಲ್ಲಿ ಪ್ರೇಮಕಥೆಯನ್ನು ಮುಖ್ಯವಾಗಿ ಬೆರೆಸಿರುವುದರ ಹಿಂದಿನ ಸತ್ಯಾಂಶವನ್ನು ಚಿತ್ರಕಥೆಗಾರ ಸಂದೀಪ್​ ಶ್ರೀವಾಸ್ತವ್​ ಬಹಿರಂಗಗೊಳಿಸಿದ್ದಾರೆ.

Shershaah
ಕ್ಯಾಪ್ಟನ್ ವಿಕ್ರಮ್ ಬಾತ್ರಾರ ಜೀವನಾಧಾರಿತ ಚಿತ್ರ 'ಶೇರ್​ ಷಾ'

ಹೈದರಾಬಾದ್: ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಕ್ಯಾಪ್ಟನ್ ವಿಕ್ರಮ್ ಬಾತ್ರಾರ ಜೀವನಾಧಾರಿತ ಚಿತ್ರ 'ಶೇರ್​ ಷಾ' ಜನ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೆ ಎರಡು ಕಾರಣಗಳಿವೆ. ಅವುಗಳೆಂದರೆ ಒಂದು ಧೈರ್ಯಶಾಲಿ ಸೈನಿಕ ವಿಕ್ರಮ್​ ಬಾತ್ರಾ ಅವರ ವೀರೋಚಿತ ಕಥೆ. ಇನ್ನೊಂದು ಯುದ್ಧದ ನಿರೂಪಣೆ ಜೊತೆಗೆ ಸುಂದರವಾದ ಪ್ರೇಮಕಥೆಯನ್ನು ಸಹ ಹೆಣೆದಿರುವುದು. ಇದೀಗ ಈ ಚಿತ್ರದಲ್ಲಿ ಪ್ರೇಮಕಥೆಯನ್ನು ಮುಖ್ಯವಾಗಿ ಬೆರೆಸಿರುವುದರ ಹಿಂದಿನ ಸತ್ಯಾಂಶವನ್ನು ಚಿತ್ರಕಥೆಗಾರ ಸಂದೀಪ್​ ಶ್ರೀವಾಸ್ತವ್​ ಬಿಚ್ಚಿಟ್ಟಿದ್ದಾರೆ.

ವಿಕ್ರಮ್​ ಬಾತ್ರಾ ಡಿಂಪಲ್​ ಚೀಮಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದರು. ಚಂಡೀಗಢದಲ್ಲಿರುವ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಎಂಎ ಇಂಗ್ಲಿಷ್ ಕೋರ್ಸ್‌ ಮಾಡುತ್ತಿದ್ದಾಗ ಡಿಂಪಲ್​ ಸಹ ಅದೇ ತರಗತಿಯಲ್ಲಿ ಕಲಿಯುತ್ತಿದ್ದರು. ಇವರಿಬ್ಬರ ಪ್ರೇಮ ಇತರರಿಗೆ ಮಾದರಿ ಎನ್ನಬಹುದು. ಏಕೆಂದರೆ ಕಾರ್ಗಿಲ್​ ಯುದ್ಧದಲ್ಲಿ ವಿಕ್ರಮ್​ ಮರಣ ಹೊಂದಿದ ಬಳಿಕ ತನ್ನ ಜೀವನವನ್ನೇ ತ್ಯಾಗ ಮಾಡಿ, ಆತನ ನೆನಪಿನಲ್ಲಿಯೇ ಇಂದಿಗೂ ಜೀವನ ಕಳೆಯುತ್ತಿದ್ದಾರಂತೆ. ಇದೊಂದು ವಿಚಾರ ಇಡೀ ಸಿನಿಮಾದಲ್ಲಿ ಪ್ರೇಮಕಥೆಯನ್ನು ಮುಖ್ಯವಾಗಿ ಬಿಂಬಿಸಲು ಕಾರಣವಾಗಿದೆ ಎಂದು ಸಂದೀಪ್​ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಡಿಂಪಲ್​ ಅವರನ್ನು ಭೇಟಿಯಾಗಿ ಸಂಪೂರ್ಣ ಮಾಹಿತಿ ಪಡೆಯಲು ಚಿತ್ರತಂಡ ಪ್ರಯತ್ನಿಸಿದರೂ ವೈಯಕ್ತಿಕವಾಗಿ ಭೇಟಿಯಾಗಲು ಅವರು ಒಪ್ಪಲಿಲ್ಲ. ಆದರೆ ದೂರವಾಣಿ ಮೂಲಕ ಮಾತನಾಡಲು ಅವರು ಒಪ್ಪಿಕೊಂಡರು. ಈ ಬಳಿಕ ಅವರು ವಿಕ್ರಮ್​ ಜೊತೆಗೆ ಕಳೆದ ಅಮೂಲ್ಯವಾದ ನೆನಪುಗಳನ್ನು ಚಿತ್ರತಂಡದ ಜೊತೆ ಹಂಚಿಕೊಂಡರು. ಆಶ್ಚರ್ಯ ಎಂದರೆ ಡಿಂಪಲ್,​ ಬಾತ್ರಾ ಜೊತೆ ಕಳೆದಿರುವುದು ಕೇವಲ 40 ದಿನಗಳು ಮಾತ್ರವಂತೆ.

"ವಿಕ್ರಮ್ ಬಾತ್ರಾ ಮತ್ತು ಡಿಂಪಲ್ ಚೀಮಾ ನಾಲ್ಕು ವರ್ಷಗಳ ಕಾಲ ಪರಸ್ಪರ ತಿಳಿದಿದ್ದರೂ ಸಹ ಅವರು ಒಟ್ಟಿಗೆ ಕಳೆದ ಸಮಯ ಕೇವಲ 40 ದಿನಗಳು" ಎಂದು ಬಹಿರಂಗಪಡಿಸಿದ್ದಾರೆ.

ಕಿಯಾರಾ ಪಾತ್ರ ನಿರ್ವಹಣೆ ಬಗ್ಗೆ ಮಾತನಾಡಿದ ಅವರು, "ಆ 40 ದಿನಗಳ ಸುಂದರ ಭಾವವನ್ನು ನಾನು ಸೆರೆ ಹಿಡಿದಿದ್ದೇನೆ. ಡಿಂಪಲ್​​ ಭಾವನೆಗಳನ್ನು ಕಿಯಾರಾ ವ್ಯಕ್ತಪಡಿಸಿದ್ದಾರೆ. ಡಿಂಪಲ್​ ಭಾವನೆಗಳ ಸಾರವೇ ಕಿಯಾರಾ ಪಾತ್ರವನ್ನು ನಿರ್ವಹಿಸಿದ ರೀತಿ. ಅದು ನಿಜವಾಗಿಯೂ ಜನರಿಗೆ ಮೆಚ್ಚುಗೆಯಾಗಿದೆ" ಎಂದು ಹೇಳಿದರು.

'ಶೇರ್ ​ಷಾ' ಚಿತ್ರವನ್ನು ಧರ್ಮ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಕರಣ್ ಜೋಹರ್ ಸೇರಿದಂತೆ, ಶಬ್ಬೀರ್ ಬಾಕ್ಸ್​ವಾಲಾ, ಹಿಮಾಂಶು ಗಾಂಧಿ ಮೊದಲಾದವರು ನಿರ್ಮಿಸಿದ್ದಾರೆ. ಚಿತ್ರವನ್ನು ವಿಷ್ಣುವರ್ಧನ್ ನಿರ್ದೇಶಿಸಿದ್ದು, ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಮೆಜಾನ್ ಪ್ರೈಮ್ ಮುಖಾಂತರ ನೇರವಾಗಿ ಬಿಡುಗಡೆಗೊಂಡಿರುವ ಈ ಚಿತ್ರಕ್ಕೆ ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.