ETV Bharat / sitara

ಇವರು ಟಿಆರ್‌ಪಿಗಾಗಿ ಸುಳ್ಳು ಸುದ್ದಿ ಬಿತ್ತರಿಸುತ್ತಾರೆ.. ಝೀ ಸುದ್ದಿವಾಹಿನಿ ವಿರುದ್ಧ ನಟ ಶೇಖರ್‌ ಸುಮನ್‌ ಆರೋಪ - ಬಾಲಿವುಡ್​ ನಟ ಶೇಖರ್​ ಸುಮನ್​ ಪುತ್ರ

ಝೀ ನ್ಯೂಸ್ ಸುಳ್ಳು ಸುದ್ದಿ ಪ್ರಸಾರ ಮಾಡಿದ ಬೆನ್ನಿಗೇ ಅಧ್ಯಯನ್ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ಝೀ ನ್ಯೂಸ್ ಯಾವ ನೈತಿಕತೆಯಿಂದ ಇಂತಹ ಸುದ್ದಿ ಪ್ರಕಟಿಸಿದೆ. ನಿಮ್ಮಂತಹ ಜನರಿಂದ ನನ್ನ ಕುಟುಂಬಕ್ಕೆ ಅತೀವ ನೋವುಂಟಾಗಿದೆ..

File Photo
ಸಂಗ್ರಹ ಚಿತ್ರ
author img

By

Published : Feb 23, 2021, 3:24 PM IST

Updated : Feb 23, 2021, 3:30 PM IST

ಹೈದರಾಬಾದ್ : ನನ್ನ ಪುತ್ರ ಅಧ್ಯಾಯನ್ ಸುಮನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸುಳ್ಳು ಸುದ್ದಿಯನ್ನು ವಾಹಿನಿಯೊಂದು ವರದಿ ಮಾಡಿದೆ. ಈ ಕೂಡಲೇ ಸುದ್ದಿ ವಾಹಿನಿಯ ಪರವಾನಿಗೆ ರದ್ದುಗೊಳಿಸಬೇಕು ಎಂದು ನಟ ಶೇಖರ್​ ಸುಮನ್​ ಆಗ್ರಹಿಸಿದ್ದಾರೆ.

ಅಧ್ಯಾಯನ್ ಸುಮನ್​​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯನ್ನು ಝೀ ಸುದ್ದಿ ವಾಹಿನಿ ಬಿತ್ತರಿಸಿದೆ. ತಮ್ಮ ಚಾನೆಲ್‌ಗೆ ವೀಕ್ಷಕರ ಸಂಖ್ಯೆ ಹೆಚ್ಚಿಸಲು ಹಾಗೂ ಟಿಆರ್​ಪಿ ಪಡೆಯಲು ಇಂತಹ ನಕಲಿ ಸುದ್ದಿ ಪ್ರಸಾರ ಮಾಡುವ ಮಟ್ಟಕ್ಕೆ ತಲುಪಿದೆ. ಅದಲ್ಲದೇ ಈ ನ್ಯೂಸ್​ ಚಾನೆಲ್ ಈ ಕೃತ್ಯ ಮುಚ್ಚಿ ಹಾಕಲು ಪ್ರಯತ್ನಿಸಿದೆ. ಈ ಚಾನೆಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶೇಖರ್​ ಸುಮನ್​ ಕಿಡಿಕಾರಿದ್ದಾರೆ.

ನನ್ನ ಹೆಂಡತಿ ಮತ್ತು ನಾನು ಈ ಸುದ್ದಿ ನೋಡಿ ಬೆಚ್ಚಿ ಬಿದ್ದಿದ್ದೆವು. ಅಧ್ಯಾಯನ್ ದೆಹಲಿಗೆ ಹೋಗಿರುವ ವಿಷಯ ತಿಳಿದಿತ್ತು. ಅದಲ್ಲದೆ, ಆ ಸಮಯದಲ್ಲಿ ಆತನ ಫೋನ್​​ ಸಹ ನಾಟ್​ ರೀಚಬಲ್​​ ಆಗಿತ್ತು. ಈ ಎಲ್ಲ ಕಾರಣದಿಂದ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಗಾಬರಿಯಾಗಿದ್ದೆವು. ಝೀ ವಾಹಿನಿ ನಮಗೆ ಅತೀವ ನೋವು ಉಂಟು ಮಾಡಿದೆ, ಕ್ಷಮಿಸಲಾಗದ ತಪ್ಪನ್ನು ಅಲ್ಲಿನ ಸಿಬ್ಬಂದಿ ಮಾಡಿದ್ದಾರೆ ಎಂದು ಶೇಖರ್​ ಸುಮನ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • Some random apology by one of @ZeeNews regular journalists is not accepatable for such an unpardonable act.The bosses shld have some shame and own up to their faux-pas which is deplorable.Imagine if they had done the same to any of the political big-wigs.

    — Shekhar Suman (@shekharsuman7) February 22, 2021 " class="align-text-top noRightClick twitterSection" data=" ">

ಝೀ ನ್ಯೂಸ್ ಸುಳ್ಳು ಸುದ್ದಿ ಪ್ರಸಾರ ಮಾಡಿದ ಬೆನ್ನಿಗೇ ಅಧ್ಯಯನ್ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ಝೀ ನ್ಯೂಸ್ ಯಾವ ನೈತಿಕತೆಯಿಂದ ಇಂತಹ ಸುದ್ದಿ ಪ್ರಕಟಿಸಿದೆ. ನಿಮ್ಮಂತಹ ಜನರಿಂದ ನನ್ನ ಕುಟುಂಬಕ್ಕೆ ಅತೀವ ನೋವುಂಟಾಗಿದೆ.

ಇದಕ್ಕಾಗಿ ನೀವು ಬೆಲೆ ತೆರಲೇಬೇಕಿದೆ. ಇವರು ಟಿಆರ್​ಪಿಗಾಗಿ ಏನು ಬೇಕಾದರೂ ಮಾಡುತ್ತಾರೆಂದು ಇಡೀ ಜಗತ್ತಿಗೆ ಗೊತ್ತಾಗುವಂತಾಗಲು, ನನಗೆ ಸಹಾಯ ಮಾಡಿ ಎಂದು ತಮ್ಮ ವಾಲ್​​ನಲ್ಲಿ ಬರೆದುಕೊಂಡಿದ್ದಾರೆ.

ಫೆಬ್ರವರಿ 20ರಂದು ಝೀ ಸುದ್ದಿ ವಾಹಿನಿ ವರದಿ ಮಾಡಿದೆ. ಅಧ್ಯಾಯನ್ ಸುಮನ್​​ ಕೆಲಸದ ನಿಮಿತ್ತ ದೆಹಲಿಯಲ್ಲಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಸುದ್ದಿ ಪ್ರಸಾರ ಮಾಡಲಾಗಿತ್ತು.

Last Updated : Feb 23, 2021, 3:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.