ETV Bharat / sitara

ಹ್ಯಾಪಿ ಮೂಡ್​ನಲ್ಲಿ ಶೆಹನಾಜ್​ ಗಿಲ್​​.. ಪಾರಿವಾಳಗಳಂತೆ ಹಾರ ಬಯಸುತ್ತೇನೆಂದ ನಟಿ - shehnaaz gill shared new video

ಬಿಗ್​​ಬಾಸ್​ ಖ್ಯಾತಿಯ ಶೆಹನಾಜ್ ಗಿಲ್ ಅವರು ಶುಕ್ರವಾರ ಕಡಲತೀರದಲ್ಲಿ ಸಮಯ ಕಳೆದ ಸಂತೋಷದ ವಿಡಿಯೋವನ್ನು ಹಂಚಿಕೊಂಡಿದ್ದಾರೆ..

shehnaaz gill shared new video
ಹ್ಯಾಪಿ ಮೂಡ್​ನಲ್ಲಿ ಶೆಹೆನಾಜ್​ ಗಿಲ್
author img

By

Published : Feb 12, 2022, 4:16 PM IST

ನಟಿ, ಗಾಯಕಿ ಹಾಗೂ ಬಿಗ್​​ಬಾಸ್​ ಖ್ಯಾತಿಯ ಶೆಹನಾಜ್ ಗಿಲ್ ಅವರು ಶುಕ್ರವಾರ ಕಡಲತೀರದಲ್ಲಿ ಸಮಯ ಕಳೆದ ಸಂತೋಷದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪಾರಿವಾಳಗಳನ್ನು ಬೆನ್ನಟ್ಟುತ್ತಿರುವ ವಿಡಿಯೋವನ್ನು ಶೇರ್​ ಮಾಡಿಕೊಂಡಿರುವ ಶೆಹನಾಜ್ ಗಿಲ್, ಸಖತ್​ ಖುಷಿಯಾಗಿರುವುದನ್ನು ಕಾಣಬಹುದು. ಶೆಹನಾಜ್ ಗಿಲ್ ಖುಷಿಗೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಶೆಹನಾಜ್ ಗಿಲ್ ಸಮುದ್ರತೀರದಲ್ಲಿ ಓಡುತ್ತಿರುವುದನ್ನು ಕಾಣಬಹುದು. ಶೆಹನಾಜ್ ಓಡುತ್ತಿದ್ದಂತೆ ಪಾರಿವಾಳಗಳು ಹಾರತೊಡಗಿವೆ. ಹೀಗೆ ಕೆಲಹೊತ್ತು ಪಾರಿವಾಳಗಳನ್ನು ಬೆನ್ನಟ್ಟಿದ ನಂತರ ಕ್ಯಾಮೆರಾ ಕಡೆ ತಿರುಗಿ ಸುಸ್ತಾದೆ ಎಂದಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡು, "ನಾನು ಕೂಡ ದೂರ ಹಾರಲು ಬಯಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಹ್ಯಾಪಿ ಮೂಡ್‌ನಲ್ಲಿರುವ ಶೆಹನಾಜ್ ಅವರನ್ನು ನೋಡಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. "ನೀವು ಹೀಗೆ ಖುಷಿಯಾಗಿರಿ, ನಗುನಗುತ್ತಾ ಇರಿ, ನೀವು ತುಂಬಾ ಎತ್ತರಕ್ಕೆ ಹೋಗುತ್ತಿದ್ದೀರಿ, ದೇವರು ನಿಮ್ಮನ್ನು ಆಶೀರ್ವದಿಸುತ್ತಾರೆ, ಬಹಳ ಸಮಯದ ನಂತರ ಹೀಗೆ ಖುಷಿಯಾಗಿರುವುದನ್ನು ನೋಡುತ್ತಿದ್ದೇವೆ, ಹೀಗೆ ಇರಿ'' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Valentine’s Day: ಬಾಂದ್ರಾಕ್ಕೆ ತೆರಳಿದ ಬಾಲಿವುಡ್ ನಟಿ ಅಮೃತಾ ರಾವ್ ದಂಪತಿ

ಕಳೆದ ವರ್ಷ ತಮ್ಮ ಆತ್ಮೀಯ ಸ್ನೇಹಿತ ಸಿದ್ಧಾರ್ಥ್ ಶುಕ್ಲಾ ಅವರ ಮರಣದ ನಂತರ ಶೆಹನಾಜ್ ಗಿಲ್​​ ಅಷ್ಟಾಗಿ ಎಲ್ಲೂ ಕಾಣಿಸಿರಲಿಲ್ಲ. ಕೆಲ ದಿನಗಳ ಹಿಂದೆ ಮತ್ತೆ ತಮ್ಮ ವೃತ್ತಿ ಜೀವನಕ್ಕೆ ಮರಳಿದ್ದು, ಈಗ ಸಖತ್​ ಆ್ಯಕ್ಟೀವ್​ ಆಗಿರುವುದನ್ನು ನೋಡಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.