ಪೌರಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ ಫರೀದಾಬಾದ್ ಪೊಲೀಸರು ಓರ್ವ ಶಾರ್ಪ್ ಶೂಟರ್ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಬಂಧಿತ ಶಾರ್ಪ್‌ಶೂಟರ್ ರಾಹುಲ್ ಅಲಿಯಾಸ್ ಸಾಂಗಾ ಎಂದು ತಿಳಿದು ಬಂದಿದ್ದು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಕಡೆಯವನೆಂದು ಹೇಳಲಾಗುತ್ತಿದೆ. ಕೃಷ್ಣಮೃಗ ಭೇಟಿ ಹಿನ್ನೆಲೆ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾನೆ ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.
![Sharpshooter held for allegedly plotting Salman Khan's murder](https://etvbharatimages.akamaized.net/etvbharat/prod-images/8487552_871_8487552_1597909486666.png)
ಸಲ್ಮಾನ್ ಅವರನ್ನು ಹತ್ಯೆ ಮಾಡಲು ಶಾರ್ಪ್ ಶೂಟರ್ ರಾಹುಲ್ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಆದೇಶ ನೀಡಿತ್ತು. ಇದೇ ಕಾರಣದಿಂದ ರಾಹುಲ್, ಜನವರಿಯಲ್ಲಿ ಮುಂಬೈಗೆ ಬಂದ್ದು ಸಲ್ಮಾನ್ ಖಾನ್ ಅವರ ಚಲನಚಲನ ತಿಳಿದುಕೊಂಡಿದ್ದ.
ಕ್ರಿಮಿನಲ್ ಪ್ರಕರಣಗಳಲ್ಲಿ ದರೋಡೆಕೋರ ರಾಹುಲ್ಗೆ ಸಹಾಯ ಮಾಡಿದ್ದಕ್ಕಾಗಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಶಾರ್ಪ್ ಶೂಟರ್ ರಾಹುಲ್ನನ್ನು ಆ.15ರಂದು ಕೊಲೆ ಪ್ರಕರಣವೊಂದರಲ್ಲಿ ಉತ್ತರಾಖಂಡದಲ್ಲಿ ಬಂಧಿಸಲಾಸಲಾಗಿತ್ತು. ಈ ಪ್ರಕರಣದ ವಿಚಾರಣೆ ವೇಳೆ ಸಲ್ಮಾನ್ ಹತ್ಯೆಯ ಸಂಚಿನ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಫರಿದಾಬಾದ್ ಡಿಸಿಪಿ ರಾಜೇಶ್ ದುಗ್ಗಲ್ ಮಾಹಿತಿ ನೀಡಿದ್ದಾರೆ.