ETV Bharat / sitara

"ತನ್ನ ತಪ್ಪುಗಳಿಂದ ಬುದ್ಧಿ ಕಲಿಯಬೇಕು".. ಶನಾಯಾಗೆ ತಂದೆ ಸಂಜಯ್​ ಕಪೂರ್​ ಕಿವಿಮಾತು - ದಿ ಲಾಸ್ಟ್ ಅವರ್ ಚಿತ್ರ

ಶನಾಯಾ ಇನ್ನೂ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿಲ್ಲವಾದರೂ, ಅವರು ಜಾನ್ವಿ ಕಪೂರ್ ಅವರ ಗುಂಜನ್ ಸಕ್ಸೇನಾ : ದಿ ಕಾರ್ಗಿಲ್ ಗರ್ಲ್​ ಸಿನಿಮಾಕ್ಕೆ ಸಹಾಯಕರಾಗಿಯೂ ಕೆಲಸ ಮಾಡಿದ್ದಾರೆ..

shanaya
shanaya
author img

By

Published : May 19, 2021, 3:00 PM IST

Updated : May 19, 2021, 7:39 PM IST

ಹೈದರಾಬಾದ್ : ಎರಡು ದಶಕಗಳಿಂದ ಚಿತ್ರೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ನಟ ಸಂಜಯ್ ಕಪೂರ್ ಪುತ್ರಿ ಶನಾಯ ಸಹ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

ಅಮೆಜಾನ್ ಪ್ರೈಮ್​ನಲ್ಲಿ ಇತ್ತೀಚಿಗೆ ಬಿಡುಗಡೆಯಾದ ‘ದಿ ಲಾಸ್ಟ್ ಅವರ್’ ಚಿತ್ರದ ಪ್ರಚಾರ ಸಂದರ್ಶನವೊಂದರಲ್ಲಿ, ಶನಾಯಾಳನ್ನು ತಂದೆಯಾಗಿ ಹೇಗೆ ಬೆಂಬಲಿಸುತ್ತಾರೆ ಎಂಬುದರ ಕುರಿತು ಅವರು ಮಾತನಾಡಿದ್ದಾರೆ.

"ಅವಳು ಬಹಳ ಕಾಲದಿಂದ ನಟಿಯಾಗಬೇಕೆಂದು ಬಯಸುತ್ತಿದ್ದಳು. ನಾನು ಅವಳ ಹಿಂದೆ ಬೆನ್ನೆಲುಬಾಗಿ ಇರುತ್ತೇನೆ. ಪ್ರಾಮಾಣಿಕವಾಗಿ, ಪ್ರತಿಯೊಬ್ಬ ವ್ಯಕ್ತಿಯು ಇರಬೇಕೆಂದು ನಾನು ಭಾವಿಸುತ್ತೇನೆ.

ಅವರು ತಮ್ಮದೇ ಆದ ತಪ್ಪುಗಳಿಂದ ಮತ್ತು ಅನುಭವದಿಂದ ಕಲಿಯುತ್ತಾರೆ. ಎಲ್ಲದಕ್ಕೂ ನಾನು ಅವಳ ಕೈಯನ್ನು ಹಿಡಿದಿಟ್ಟುಕೊಳ್ಳುವುದಕ್ಕಿಂತ ಹೆಚ್ಚಾಗಿ ಅವಳು ತನ್ನ ಪ್ರಯಾಣವನ್ನು ಹೆಚ್ಚು ಆನಂದಿಸಬೇಕು"ಎಂದು ಸಂಜಯ್ ಹೇಳಿದರು.

ಸಂಜಯ್ ಮತ್ತು ಮಹೀಪ್ ಕಪೂರ್ ಅವರ ಪುತ್ರಿ ಶನಾಯಾ ಹೊಸ ಪ್ರತಿಭೆಯಾಗಿ ಕರಣ್ ಜೊಹಾರ್​ ನಿರ್ಮಾಣದ ಸಿನಿಮಾದಲ್ಲಿ ನಟಿಸಲಿದ್ದಾರೆ.

ಶನಾಯಾ ಇನ್ನೂ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿಲ್ಲವಾದರೂ, ಅವರು ಜಾನ್ವಿ ಕಪೂರ್ ಅವರ ಗುಂಜನ್ ಸಕ್ಸೇನಾ : ದಿ ಕಾರ್ಗಿಲ್ ಗರ್ಲ್​ ಸಿನಿಮಾಕ್ಕೆ ಸಹಾಯಕರಾಗಿಯೂ ಕೆಲಸ ಮಾಡಿದ್ದಾರೆ.

Last Updated : May 19, 2021, 7:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.