ಹೈದರಾಬಾದ್: ಬಾಲಿವುಡ್ನ ಚಾಕಲೇಟ್ ಲುಕ್ ನಟ ಶಾಹಿದ್ ಕಪೂರ್ಗೆ ಇಂದು 41ನೇ ಹುಟ್ಟುಹಬ್ಬದ ಸಂಭ್ರಮ. ದೆಹಲಿಯಲ್ಲಿ ಶಾಹಿದ್ ಕಪೂರ್ ಜನಿಸಿದ್ದು, ಅವರು ನಟ ಪಂಕಜ್ ಕಪೂರ್ ಅವರ ಹಿರಿಯ ಮಗ. ಶಾಹಿದ್ ಅವರು ಬಾಲಿವುಡ್‌ನಲ್ಲಿ ಸ್ಟಾರ್ಡಮ್ಗಳಿಸಲು ಐದು ಸಿನಿಮಾಗಳೇ ಕಾರಣವೆಂದು ಹೇಳಲಾಗುತ್ತದೆ. ಈ ಸಿನಿಮಾಗಳಲ್ಲಿ ಶಾಹಿದ್ ತಮ್ಮ ನಟನೆಯಿಂದ ಬಾಕ್ಸ್ ಆಫೀಸ್‌ನಲ್ಲಿ ತಲ್ಲಣ ಮೂಡಿಸಿದ್ದಾರೆ.
ಜಬ್ ವಿ ಮೆಟ್ (2007): ಶಾಹಿದ್ ಕಪೂರ್ ಇಷ್ಕ್-ವಿಷ್ಕ್ (2003) ಚಿತ್ರದ ಮೂಲಕ ನಟನಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಆರಂಭಿಕ ಹಂತದಲ್ಲಿ 10 ಚಿತ್ರಗಳನ್ನು ಮಾಡಿದ್ರೂ, ಶಾಹಿದ್‌ಗೆ ಸ್ಟಾರ್ ಪಟ್ಟ ಸಿಕ್ಕಿರಲಿಲ್ಲ. ಇದೇ ಸಮಯದಲ್ಲಿ 2007 ರಲ್ಲಿ ಇಮ್ತಿಯಾಜ್ ಅಲಿ ನಿರ್ದೇಶನದ ಜಬ್ ವಿ ಮೆಟ್ ಚಿತ್ರವು ಶಾಹಿದ್ ಕಪೂರ್ ಅವರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತು. ಆದಾಗ್ಯೂ 2006 ರ ಆರಂಭದಲ್ಲಿ ಶಾಹಿದ್ ಕಪೂರ್ ವಿವಾಹ ಚಿತ್ರದ ಮೂಲಕ ಸಾಕಷ್ಟು ಪ್ರಶಂಸೆಯನ್ನು ಗಳಿಸಿದರು.
ಕಮೀನೆ (2009): 2009 ರಲ್ಲಿ ಬಿಡುಗಡೆಯಾದ ವಿಶಾಲ್ ಭಾರದ್ವಾಜ್ ಅವರ ಚಿತ್ರ ಕಮೀನೆಯಲ್ಲಿ ಶಾಹಿದ್ ನಟಿಸಿದರು. ಈ ಚಿತ್ರದಲ್ಲಿ ಶಾಹಿದ್, ಚಾರ್ಲಿ ಶರ್ಮಾ ಮತ್ತು ಗುಡ್ಡು ಶರ್ಮಾ ಎಂಬ ಎರಡು ಪಾತ್ರಗಳಲ್ಲಿ ತಮ್ಮ ಕೌಶಲ್ಯವನ್ನು ತೋರಿಸಿದರು. ವಿಮರ್ಶಕರು ಕೂಡ ಈ ಚಿತ್ರವನ್ನು ತುಂಬಾ ಇಷ್ಟಪಟ್ಟಿದ್ದಾರೆ.
ಹೈದರ್ (2014): 2009 ರಿಂದ 2013 ರ ವರೆಗೆ ಶಾಹಿದ್ ಕಪೂರ್ 8 ಫ್ಲಾಪ್ ಸಿನಿಮಾಗಳನ್ನು ನೀಡಿದರು. ಇದರಲ್ಲಿ ದಿಲ್ ಬೋಲೆ ಹಡಿಪ್ಪಾ, ಚಾನ್ಸ್ ಪೆ ಡ್ಯಾನ್ಸ್, ಪಾಠಶಾಲಾ, ಬದ್ಮಾಶ್ ಕಂಪನಿ, ಮಿಲೇಂಗೆ-ಮಿಲೇಂಗೆ, ಮೌಸಂ, ತೇರಿ ಮೇರಿ ಕಹಾನಿ ಮತ್ತು ಫಾಟಾ ಪೋಸ್ಟರ್ ನಿಕ್ಲಾ ಹೀರೋ ಸೇರಿವೆ. 2014 ರಲ್ಲಿ, ವಿಶಾಲ್ ಭಾರದ್ವಾಜ್ ಅವರ ಹೈದರ್ ಚಿತ್ರದ ಮೂಲಕ ಶಾಹಿದ್ ಮತ್ತೊಮ್ಮೆ ಕಮಾಲ್ ಮಾಡಿದರು.
ಉಡ್ತಾ ಪಂಜಾಬ್ (2016): ಹೈದರ್ ಚಿತ್ರದ ನಂತರ, ಶಾಹಿದ್ ಅವರ ವೃತ್ತಿಜೀವನದ ಅತಿದೊಡ್ಡ ಫ್ಲಾಪ್ ಚಿತ್ರ ಶಾಂದಾರ್ (2015). ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಆಲಿಯಾ ಭಟ್ ಜೊತೆ ಕಾಣಿಸಿಕೊಂಡಿದ್ದಾರೆ. ನಂತರ 2016 ರಲ್ಲಿ 'ಉಡ್ತಾ ಪಂಜಾಬ್' ಚಿತ್ರವು ಶಾಹಿದ್ ಅವರಿಗೆ ಯಶಸ್ಸು ತಂದುಕೊಡ್ತು.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ವಿಶ್ವದ ಮೇಲಾಗುತ್ತದೆ: ಪ್ರಿಯಾಂಕಾ ಚೋಪ್ರಾ
ಕಬೀರ್ ಸಿಂಗ್ (2019): 2016 ರ ನಂತರ, ಶಾಹಿದ್ ರಂಗೂನ್ (2017) ಚಿತ್ರ ಮಾಡಿದರು. ಚಿತ್ರದಲ್ಲಿ, ಅವರು ಕಂಗನಾ ರಣಾವತ್ ಮತ್ತು ಸೈಫ್ ಅಲಿ ಖಾನ್ ಅವರೊಂದಿಗೆ ಕಾಣಿಸಿಕೊಂಡರು. 2019 ರಲ್ಲಿ, ತೆಲುಗು ಚಿತ್ರ ಅರ್ಜುನ್ ರೆಡ್ಡಿಯ ಹಿಂದಿ ರಿಮೇಕ್ ಕಬೀರ್ ಸಿಂಗ್, ಶಾಹಿದ್ ಕಪೂರ್ ತುಂಬಾ ಯಶಸ್ಸನ್ನು ತಂದುಕೊಟ್ಟಿದೆ. ಶಾಹಿದ್ ಕಪೂರ್ ಮತ್ತೊಂದು ಸೌತ್ ಚಿತ್ರ ಜರ್ಸಿಯ ಹಿಂದಿ ರಿಮೇಕ್ ಮಾಡಿದ್ದಾರೆ.
ಶಾಹಿದ್ ಕಪೂರ್ ತಿರಸ್ಕರಿಸಿದ 5 ಚಿತ್ರಗಳು: ಶಾಹಿದ್ ಕಪೂರ್ ತಿರಸ್ಕರಿಸಿದ ಚಿತ್ರಗಳಲ್ಲಿ ರಣಬೀರ್ ಕಪೂರ್ ಅಭಿನಯದ ರಾಕ್‌ಸ್ಟಾರ್, ರಂಗ್ ದೇ ಬಸಂತಿ, ಶುದ್ಧ್ ದೇಸಿ ರೋಮ್ಯಾನ್ಸ್, ರಾಂಜನಾ, ಬ್ಯಾಂಗ್-ಬ್ಯಾಂಗ್ ಮತ್ತು ಮೀರಾ ನಾಯರ್ ಅವರ ಚಿತ್ರ ದಿ ರಿಲಕ್ಟಂಟ್ ಫಂಡಮೆಂಟಲಿಸ್ಟ್ ಹೆಸರು ಸೇರಿವೆ.