ಹೈದರಾಬಾದ್ : ಖ್ಯಾತ ಸಿನಿಮಾ ನಿರ್ಮಾಪಕ ಕರಣ್ ಜೋಹರ್ ಅವರ ಜನಪ್ರಿಯ ಟಾಕ್ ಶೋ 'ಕಾಫಿ ವಿತ್ ಕರಣ್' ಮೂಲಕ ಮತ್ತೊಮ್ಮೆ ಮರುಳುತ್ತಿದ್ದು, ಕಾರ್ಯಕ್ರಮದ ಪ್ರೋಮೋ ವಿಡಿಯೋ ಒಟಿಟಿಯಲ್ಲಿ ರಿಲೀಸ್ ಆಗಿದೆ. ಪ್ರೋವೋದಲ್ಲಿ ಮೊದಲ ಅಥಿತಿಯಾಗಿ ಧನುಷ್ ಮತ್ತು ಸಾರಾ ಅಲಿ ಖಾನ್ ಆಗಮಿಸಿದ್ದು, ಸಾರಾ, ಅತ್ರಂಗಿ ರೇ ಚಿತ್ರದ ಹಿಟ್ 'ಚಕ ಚಕ್' ಹಾಡಿನ ಬಗ್ಗೆ ದೊಡ್ಡ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ.
- " class="align-text-top noRightClick twitterSection" data="
">
ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿರುವ ಸಾರಾ ಚಕಚಕ್ ಹಾಡಿನ ಕುರಿತಂತೆ ಕೆಲವು ಸ್ವಾರಸ್ಯಕರ ಮಾಹಿತಿ ಹಂಚಿಕೊಂಡಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಕರಣ್ ಜೋಹರ್ ಅವರ ಗೋವಾದ ಮನೆಯ ಸ್ನಾನಗೃಹದಲ್ಲಿ ನೃತ್ಯ ಸಂಯೋಜಕರ ಜೊತೆ 'ಚಕಾ ಚಕ್' ಹಾಡನ್ನು ಅಭ್ಯಾಸ ಮಾಡುತ್ತಿದ್ದೆ ಎಂದು ಸಾರಾ ಅಲಿ ಖಾನ್ ಹೇಳಿದ್ದಾರೆ. ಆಗ ಕರಣ್ ನೀವು ಇದೇ ಹಾಡನ್ನು ಅಭ್ಯಾಸ ಮಾಡುತ್ತಿದ್ದೀರಾ ಎಂದು ಕೇಳಿದರು. ಆಗ ಸಾರಾ ಹೌದು ಎಂದು ಉತ್ತರಿಸಿದ್ದಾರೆ. ಅಷ್ಟೇ ಅಲ್ಲದೆ ಏಕೆ ಹೀಗೆ ಮಾಡಿದೆ ಎಂಬುದನ್ನು ವಿವರಿಸಿದ್ದಾರೆ.
ಮತ್ತೆ ಮಾತು ಮುಂದುವರೆಸಿದ ಸಾರಾ, ನಿಮ್ಮ ಕೋಣೆಯಲ್ಲಿನ ಕನ್ನಡಿ ತುಂಬಾ ಚಿಕ್ಕದಾಗಿದೆ. ಆದರೆ ಸ್ನಾನಗೃಹದಲ್ಲಿನ ಕನ್ನಡಿ ದೊಡ್ಡದಾಗಿತ್ತು. ಹಾಗಾಗಿ ನಾನು ಹಾಡಿನ ಅಭ್ಯಾಸ ಮಾಡಲು ಸ್ನಾನಗೃಹಕ್ಕೆ ಹೋಗುತ್ತಿದ್ದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಕರಣ್ ಶಾಕ್ ಆಗುತ್ತಾರೆ. ಇದೇ ಕಾರಣಕ್ಕೆ ಕಾರ್ಯಕ್ರಮದ ಪ್ರೋಮೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಆನಂದ್ ಎಲ್ ರೈ ನಿರ್ದೇಶನದ 'ಅತ್ರಂಗಿ ರೇ' ಚಿತ್ರ ಡಿಸೆಂಬರ್ 24 ರಂದು ಬಿಡುಗಡೆಯಾಗುತ್ತಿದೆ. ಸಾರಾ ಅಲಿ ಖಾನ್ ಮತ್ತು ನಟ ಧನುಷ್ ಜೊತೆಗೆ ಅಕ್ಷಯ್ ಕುಮಾರ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ನಟಿ ಜೂಹಿ ಚಾವ್ಲಾರ 5 ಜಿ ಪ್ರಕರಣದ ಅರ್ಜಿ ವಿಚಾರಣೆ ಮುಂದೂಡಿದ ದೆಹಲಿ ಕೋರ್ಟ್