ETV Bharat / sitara

ಏರ್​​ಪೋರ್ಟ್ ಅಧಿಕಾರಿಗಳು ನನ್ನನ್ನು ಅನುಮಾನಾಸ್ಪದವಾಗಿ ನೋಡುತ್ತಿದ್ದರು..ಸಾರಾ ಅಲಿಖಾನ್​​

author img

By

Published : Feb 18, 2020, 7:33 AM IST

Updated : Feb 18, 2020, 9:24 AM IST

ಸಾರಾ ಅಲಿಖಾನ್ ಇದಕ್ಕೂ ಮುನ್ನ ಬಹಳ ದಪ್ಪ ಇದ್ದು ಸಿನಿಮಾದಲ್ಲಿ ಅವಕಾಶ ದೊರೆತ ಬಳಿಕ ಸುಮಾರು 28 ಕಿಲೋ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಆದರೆ ಸಾರಾ ಪಾಸ್​​​ಪೋರ್ಟಿನಲ್ಲಿ ಅವರು ದಪ್ಪಗೆ ಇದ್ದಾಗ ತೆಗೆದ ಪೋಟೋ ಇದ್ದು, ವಿದೇಶಕ್ಕೆ ಹೋದಾಗಲೆಲ್ಲಾ ಏರ್​​​ಪೋರ್ಟ್​ ಅಧಿಕಾರಿಗಳು ಅವರನ್ನು ಬಹಳ ವಿಚಿತ್ರವಾಗಿ ನೋಡುತ್ತಿದ್ದರಂತೆ.

Sara ali khan
ಸಾರಾ ಅಲಿಖಾನ್​​

ಸಾರಾ ಅಲಿಖಾನ್, ಬಾಲಿವುಡ್​​​​ನಾದ್ಯಂತ ಸದ್ಯಕ್ಕೆ ಕೇಳಿ ಬರುತ್ತಿರುವ ಹೆಸರು. ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ ಮೊದಲ ಚಿತ್ರ 'ಲವ್ ಆಜ್​​​ಕಲ್​​' ಗೆ ಒಳ್ಳೆಯ ಪ್ರತಿಕ್ರಿಯೆ ದೊರೆತಿದ್ದು ಸಾರಾ ಅಲಿಖಾನ್​​​​ಗೆ ಫ್ಯಾನ್ ಫಾಲೋವರ್ಸ್​ಗಳು ಕೂಡಾ ಹೆಚ್ಚಾಗಿದ್ದಾರೆ.

Sara ali khan
ಸಾರಾ ಅಲಿಖಾನ್​​

ಸಾರಾ ಇದೀಗ ವರುಣ್ ಧವನ್ ಜೊತೆ 'ಕೂಲಿ ನಂ1' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಾರಾ ಒಂದು ಕಾಮಿಡಿ ಶೋನಲ್ಲಿ ಭಾಗವಹಿಸಿದ್ದು ಆ ಕಾರ್ಯಕ್ರಮದಲ್ಲಿ ಒಂದು ಆಸಕ್ತಿಕರ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಚೆಲುವೆ ಇದಕ್ಕೂ ಮುನ್ನ ಬಹಳ ದಪ್ಪ ಇದ್ದು ಸಿನಿಮಾದಲ್ಲಿ ಅವಕಾಶ ದೊರೆತ ಬಳಿಕ ಸುಮಾರು 28 ಕಿಲೋ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಆದರೆ ಸಾರಾ ಪಾಸ್​​​ಪೋರ್ಟಿನಲ್ಲಿ ಅವರು ದಪ್ಪಗೆ ಇದ್ದಾಗ ತೆಗೆದ ಪೋಟೋ ಇದ್ದು, ವಿದೇಶಕ್ಕೆ ಹೋದಾಗಲೆಲ್ಲಾ ಏರ್​​​ಪೋರ್ಟ್​ ಅಧಿಕಾರಿಗಳು ಅವರನ್ನು ಬಹಳ ವಿಚಿತ್ರವಾಗಿ ನೋಡುತ್ತಿದ್ದರಂತೆ. ಅದರಲ್ಲೂ ಅಮೆರಿಕದಲ್ಲಿ ನನ್ನನ್ನು ಬಹಳ ಅನುಮಾನಾಸ್ಪದವಾಗಿ ನೋಡುತ್ತಿದ್ದರು ಎಂದು ಸಾರಾ ಹೇಳಿಕೊಂಡಿದ್ದಾರೆ. ಸಾರಾ ಮೊದಲು ಇದ್ದದ್ದಕ್ಕೂ ಈಗಿನ ಲುಕ್​​​ಗೂ ಸಾಕಷ್ಟು ವ್ಯತ್ಯಾಸವಾಗಿರುವುದೇ ಇದಕ್ಕೆ ಕಾರಣ ಎನ್ನಬಹುದು.

Last Updated : Feb 18, 2020, 9:24 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.