ಬಿಗ್ಬಾಸ್ ಸೀಸನ್ 15ರ ಗ್ರ್ಯಾಂಡ್ ಫಿನಾಲೆ ವೇಳೆ ಈ ಮೊದಲು ಗ್ರ್ಯಾಂಡ್ ಫಿನಾಲೆ ಗೆದ್ದ ಸ್ಪರ್ಧಿಗಳೆಲ್ಲ ಒಟ್ಟಿಗೆ ಸೇರಿ ಡ್ಯಾನ್ಸ್ ಮಾಡಿದ್ದಾರೆ. ತೇಜಸ್ವಿ ಪ್ರಕಾಶ್ ಈ ಆವೃತ್ತಿಯಲ್ಲಿ ಜಯಗಳಿಸಿದ್ದು ಒಂದು ಸುದ್ದಿಯಾದರೆ, ನಟ ಸಲ್ಮಾನ್ ಖಾನ್ ಕತ್ರಿಕಾ ಕೈಫ್ಗೆ ವಿವಾಹಕ್ಕೆ ಶುಭಾಶಯಗಳನ್ನು ಕೋರಿದ್ದು ಅಭಿಮಾನಿಗಳ ಕುತೂಹಲವನ್ನು ತಣಿಸಿದೆ.
ಹೌದು.. ಭಾನುವಾರ ರಾತ್ರಿ ನಡೆದ ಬಿಗ್ ಬಾಸ್ 15ನೇ ಆವೃತ್ತಿಯ ಫಿನಾಲೆ ಸಮಾರಂಭದಲ್ಲಿ ಗೌತಮ್ ಗುಲಾಟಿ, ಶ್ವೇತಾ ತಿವಾರಿ, ಗೌಹಾರ್ ಖಾನ್, ರುಬಿನಾ ದಿಲಾಯಿಕ್ ಮತ್ತು ಊರ್ವಶಿ ಧೋಲಾಕಿಯಾ ಅವರು ಕುಣಿದು ಕುಪ್ಪಳಿಸಿದರು.
ಶ್ವೇತಾ ತಿವಾರಿ ನದಿಯೋಂನ್ ಪಾರ್ ಎಂಬ ಹಾಡಿಗೆ ಕುಣಿಯುವಾಗ, ಊರ್ವಶಿ ಮತ್ತು ರುಬಿನಾ ಕೂಡಾ ಜೊತೆಯಾಗಿದ್ದಾರೆ. ನಂತರ ಕತ್ರಿನಾ ಅವರ ಚಕ್ನಿ ಚಮೇಲಿ ಸಾಂಗ್ಗೆ ಕೂಡಾ ರಾಖಿ ಸಾವಂತ್ ಮತ್ತು ರುಬಿನಾ ಡ್ಯಾನ್ಸ್ ಮಾಡಿದ್ದು, ಹಾಡಿನ ಕೊನೆಯಲ್ಲಿ ಸಲ್ಮಾನ್ ಖಾನ್ ಕತ್ರಿನಾ ಮತ್ತು ವಿಕ್ಕಿ ಕೌಶಲ್ ವಿವಾಹಕ್ಕೆ ಶುಭಾಶಯ ಕೋರಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ