ETV Bharat / sitara

ವಿಕ್ಕಿ- ಕತ್ರಿನಾ ಜೋಡಿಗೆ ವಿಶ್​ ಮಾಡಿದ ಸಲ್ಮಾನ್​ ಖಾನ್​ ಕುಟುಂಬ - ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಲವ್ ಅಫೇರ್​

ಸಲ್ಮಾನ್ ಖಾನ್, ವಿಕ್ಕಿ ಕೌಶಲ್‌ ಮತ್ತು ಕತ್ರಿನಾ ಕೈಫ್‌ ಜೋಡಿಯ ವಿವಾಹಕ್ಕೆ ಇನ್ನೂ ಶುಭ ಕೋರಿಲ್ಲ. ಆದರೆ, ಅವರ ಕುಟುಂಬ ಸದಸ್ಯರು ನವ ದಂಪತಿಗಳಿಗೆ 'ಜೀವಮಾನ ಸುಖವಾಗಿರಲಿ' ಎಂದು ಹಾರೈಸಿದ್ದಾರೆ.

salman-khans-family-members-wish-katrina-vicky-lifetime-of-happiness
ವಿಕ್ಕಿ-ಕತ್ರಿನಾ ಜೋಡಿಗೆ ವಿಶ್​ ಮಾಡಿದ ಸಲ್ಮಾನ್​ ಖಾನ್​ ಕುಟುಂಬ
author img

By

Published : Dec 10, 2021, 5:57 PM IST

ಹೈದರಾಬಾದ್ : ಒಂದು ಕಾಲದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಲವ್ ಅಫೇರ್​ ಇತ್ತು, ನಂತರ ಕಾರಣಾಂತರದಿಂದ ಬ್ರೇಕ್​ ಅಪ್​ ಆಯ್ತು ಅಂತ ಸುದ್ದಿ ಹರಿದಾಡುತ್ತಿತ್ತು. ಈ ನಡುವೆ ಕತ್ರಿನಾ - ವಿಕ್ಕಿ ಮದುವೆಗೂ ಸಲ್ಮಾನ್ ಗೈರಾಗಿದ್ದರು. ಅಲ್ಲದೇ, ವಿಶ್​ ಕೂಡಾ ಮಾಡಿಲ್ಲ. ಆದ್ರೆ ಸಲ್ಮಾನ್​ ಖಾನ್​ ಕುಟುಂಬ ಸದಸ್ಯರು ನವ ದಂಪತಿಗಳಿಗೆ ಶುಭಾಶಯ ಕೋರಿದ್ದಾರೆ.

ರೂಮರ್ಸ್​ ನಡುವೆಯೂ ಸಹ ಕತ್ರಿನಾ, ಸಲ್ಮಾನ್ ಕುಟುಂಬದಲ್ಲಿ ನಡೆಯುವ ಸಂಭ್ರಮಾಚರಣೆ ಭಾಗವಾಗಿದ್ದರು. ಆದರೆ, ಕತ್ರಿನಾ ವಿಕ್ಕಿ ತಮ್ಮ ಮದುವೆಗೆ ಸಲ್ಮಾನ್​ ಬಾಯ್​ನನ್ನು ಆಹ್ವಾನಿಸಲಿಲ್ಲವೇ ಅಥವಾ ಟೈಗರ್​ ಮದುವೆ ಮಿಸ್ ಮಾಡಿಕೊಂಡ್ರಾ ಅನ್ನೋದೆ ಡೌಟು. ಸಾಮಾನ್ಯವಾಗಿ ಸಲ್ಮಾನ್​ ಭಾಯ್​, ಕತ್ರಿನಾ ಜನ್ಮದಿನಕ್ಕೆ ಶುಭ ಕೋರುತ್ತಿದ್ದರು. ಆದರೆ, ಅವರು ತಮ್ಮ ಗೆಳತಿಯ ಹೊಸ ಆರಂಭಕ್ಕೆ ಅಭಿನಂದಿಸಲಿಲ್ಲ.

ಸಲ್ಮಾನ್ ಅವರ ಕಿರಿಯ ಸಹೋದರಿ ಅರ್ಪಿತಾ ಖಾನ್ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ವಿಕ್ಕಿ ಮತ್ತು ಕತ್ರಿನಾ ಮದುವೆಯ ಶುಭ ಕೋರಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ವಿಕ್ಕಿ ಮತ್ತು ಕತ್ರಿನಾ ಚಿತ್ರವನ್ನು ಹಂಚಿಕೊಂಡು 'ಹೃದಯಪೂರ್ವಕ ಅಭಿನಂದನೆಗಳು, ನಿಮ್ಮ ಜೀವನ ಸಂತೋಷ ಮಯವಾಗಿರಲಿ ಎಂದು ಬಯಸುತ್ತೇನೆ' ಎಂದು ಬರೆದಿದ್ದಾರೆ. ಅರ್ಪಿತಾ ಪತಿ ಆಯುಷ್ ಶರ್ಮಾ ಸಹ ತಮ್ಮ ಇನ್​ಸ್ಟಾಗ್ರಾಂನಲ್ಲಿ 'ನಿಮ್ಮಿಬ್ಬರ ಜೀವನ ಸುಖಮಯವಾಗಿರಲಿ.. ಬ್ಲೆಸ್​ ಯು ಅಂತ ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.