ETV Bharat / sitara

'ಟೈಗರ್​-3'ಗೆ ಸಲ್ಮಾನ್​ ಖಾನ್​ ಭರ್ಜರಿ ತಯಾರಿ: ವರ್ಕೌಟ್​ ವಿಡಿಯೋ ವೈರಲ್​ - Salman Khan upcoming movie

ಸಲ್ಮಾನ್ ಖಾನ್ ಟೈಗರ್ 3 ಸಿನಿಮಾಗೆ ಭರ್ಜರಿ ತಯಾರಿ ನಡೆಸುತ್ತಿದ್ದು, ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಇದೀಗ ಆ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

Salman Khan
ಸಲ್ಮಾನ್​ ಖಾನ್​
author img

By

Published : Jul 21, 2021, 1:25 PM IST

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಟೈಗರ್ 3 ಸಿನಿಮಾಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇನ್ನು ವರ್ಕೌಟ್​ ಮಾಡುತ್ತಿರುವ ವಿಡಿಯೋವನ್ನು ಮಂಗಳವಾರ ಸಲ್ಲು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ಈ ವಿಡಿಯೋಗೆ ಶೀರ್ಷಿಕೆ ನೀಡಿರುವ ಅವರು, "ಟೈಗರ್ 3 ಗಾಗಿ ತರಬೇತಿ ಪಡೆಯುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಟೈಗರ್​ ಸಿನಿಮಾದ ಥೀಮ್​ ಸಾಂಗ್​ನ್ನು ಬಳಸಿಕೊಂಡಿದ್ದಾರೆ.

ಕಬೀರ್ ಖಾನ್ ನಿರ್ದೇಶನದ ಮೊದಲ ಸಿರೀಸ್​ 'ಏಕ್ ಥಾ ಟೈಗರ್' 2012 ರಲ್ಲಿ ಬಿಡುಗಡೆಯಾಯಿತು. ಬಳಿಕ ಎರಡನೇ 'ಟೈಗರ್ ಜಿಂದಾ ಹೈ' 2017 ರಲ್ಲಿ ಬಿಡುಗಡೆಯಾಯಿತು. ಅದನ್ನು ಅಲಿ ಅಬ್ಬಾಸ್ ಜಾಫರ್ ನಿರ್ದೇಶಿಸಿದ್ದಾರೆ. ಇನ್ನು ಮುಂಬರುವ ಟೈಗರ್​ 3 ಸಿನಿಮಾದಲ್ಲಿ ನಟ ಇಮ್ರಾನ್ ಹಶ್ಮಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.