ETV Bharat / sitara

ಕೋಮು ಸೌಹಾರ್ದತೆ ಹೆಚ್ಚಿಸುವ ಭಾಯ್​ ಭಾಯ್​ ಹಾಡು ಕೇಳುವಂತೆ ಅಭಿಮಾನಿಗಳಿಗೆ ಸಲ್ಲು ಸಲಹೆ - ಭಾಯ್​ ಭಾಯ್​ ಹಾಡು ಬಿಡುಗಡೆ ಮಾಡಿದ ಸಲ್ಮಾನ್ ಖಾನ್

ಈದುಲ್ ಫಿತರ್​ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಿರುವ ಹಾಡು 'ಭಾಯ್​ ಭಾಯ್'​ ಗೆ ಬೆಂಬಲ ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿರುವ ನಟ ಸಲ್ಮಾನ್ ಖಾನ್, ಈ ಹಾಡನ್ನು ಯುವಜನರಿಗೆ ಹೆಚ್ಚು ಹೆಚ್ಚು ಕೇಳಿಸಿ ಎಂದು ಮನವಿ ಮಾಡಿದ್ದಾರೆ.

Salman Khan requests younger generation to listen to Bhai Bhai
ಭಾಯ್​ ಭಾಯ್​ ನ್ನು ಹೆಚ್ಚಾಗಿ ಕೇಳುವಂತೆ ಸಲ್ಮಾನ್ ಖಾನ್ ಮನವಿ
author img

By

Published : May 28, 2020, 8:27 AM IST

Updated : May 28, 2020, 12:25 PM IST

ಮುಂಬೈ: ಸಹೋದರತ್ವ ಮತ್ತು ಕೋಮು ಸೌಹಾರ್ದತೆಯನ್ನು ಪ್ರತಿಬಿಂಬಿಸುವ 'ಭಾಯ್​ ಭಾಯ್​' ಎಂಬ ಹಾಡನ್ನು ಬಿಡುಗಡೆ ಮಾಡಿರುವ ಬಾಲಿವುಡ್ ನಟ ಸಲ್ಮಾನ್ ಖಾನ್, ಈ ಹಾಡನ್ನು ಹೆಚ್ಚು ಹೆಚ್ಚು ಕೇಳಿ ಎಂದು ತಮ್ಮ ಯುವ ಅಭಿಮಾನಿಗಳಿಗೆ ಹೇಳಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ಹಾಡಿನ ಪೋಸ್ಟರ್​ ಹಂಚಿಕೊಂಡಿರುವ ಸಲ್ಮಾನ್ ಖಾನ್, ನೂತನ ಹಾಡಿಗೆ ಬೆಂಬಲ ವ್ಯಕ್ತಪಡಿಸಿದ್ದಕ್ಕಾಗಿ ತನ್ನ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದು ದಯವಿಟ್ಟು ಯುವ ಪೀಳಿಗೆಗೆ ಈ ಹಾಡನ್ನು ಮತ್ತೆ ಮತ್ತೆ ಕೇಳುವಂತೆ ಮಾಡಿ, ನಿಮ್ಮ ಕಿರಿಯ ಸಹೋದರರು, ನಿಮ್ಮ ಮಕ್ಕಳು ಎಲ್ಲರಿಗೂ ಈ ಹಾಡು ಕೇಳಿಸಿ. ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

ಸಹೋದರತ್ವ ಮತ್ತು ಏಕತೆಯ ಮನೋಭಾವನೆಯನ್ನು ವೃದ್ದಿಸುವ ನಿಟ್ಟಿನಲ್ಲಿ ಈದ್​ ಉಲ್ ಫಿತರ್​ ಸಂದರ್ಭ ಸಲ್ಮಾನ್ ಖಾನ್ ಈ ಹಾಡನ್ನು ಬಿಡುಗಡೆಗೊಳಿಸಿದ್ದರು. ಪನ್ವೆಲ್​ನಲ್ಲಿರುವ ಸಲ್ಮಾನ್​ರ ತೋಟದ ಮನೆಯಲ್ಲಿ ಕೆಲ ವ್ಯಕ್ತಿಗಳನ್ನು ಬಳಸಿಕೊಂಡು ಈ ಹಾಡನ್ನು ಚಿತ್ರೀಕರಿಸಲಾಗಿದೆ.

Last Updated : May 28, 2020, 12:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.