ಸಲ್ಮಾನ್ ಖಾನ್ ನಟನೆಯ ದಬ್ಬಾಂಗ್-3 ಸಿನಿಮಾ ರಿಲೀಸ್ಗೆ ರೆಡಿಯಾಗಿ ಎಲ್ಲೆಡೆ ಸದ್ದು ಮಾಡುತ್ತಿದೆ. ಈಗಾಗಲೆ ಈ ಸಿನಿಮಾವನ್ನು ನೋಡಿರುವ ಸಲ್ಮಾನ್ಖಾನ್ ತಂದೆ ಸಲೀಂ ಖಾನ್ ಸಲ್ಲು ಬಾಯ್ಗೆ ಸಿನಿಮಾ ಬಗ್ಗೆ ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ.
- " class="align-text-top noRightClick twitterSection" data="">
ಹೌದು ಈ ಬಗ್ಗೆ ಸ್ವತಃ ಸಲ್ಮಾನ್ ಖಾನ್ ಈ ಬಗ್ಗೆ ಹೇಳಿಕೊಂಡಿದ್ದಾರೆ. ಸಲ್ಲು ಬಾಯ್ ಸಿನಿಮಾಗಳನ್ನು ನೋಡಿ ಪ್ರತೀ ಬಾರಿಯೂ ಸಲೀಂ ಖಾನ್ ಟೀಕೆ ಮಾಡುತ್ತಾರಂತೆ. ಸಿನಿಮಾ ಬಗ್ಗೆ ಏನೇ ಇದ್ದರೂ ನೇರವಾಗಿಯೇ ಹೇಳುತ್ತಾರಂತೆ.
ಹಿಂದಿನ ಸಿನಿಮಾಗಳಿಗೆ ಹೇಳಿದಂತೆ ದಬಾಂಗ್-3 ಸಿನಿಮಾದ ಬಗ್ಗೆ ಮಾತನಾಡಿರುವ ಸಲೀಂ ಖಾನ್, ಸಲ್ಮಾನ್ಗೆ ಸಲಹೆ ನೀಡಿದ್ದಾರೆ. ಬೇಟಾ ಈ ಹಿಂದೆ ನಡೆದಿರುವುದನ್ನು ಮರೆತುಬಿಡು. ಈ ಸಿನಿಮಾಕ್ಕಾಗಿ ಅತಿಯಾದ ಒತ್ತಡಗಳನ್ನು ತಲೆಗೆ ತಂದುಕೊಳ್ಳಬೇಡ. ಸಿನಿಮಾ ಯಶಸ್ಸಿನ ಬಗ್ಗೆ ತೆಲೆ ಕೆಡಿಸಿಕೊಳ್ಳಬೇಡ. ನಿನ್ನ ಮುಂದಿನ ಸಿನಿಮಾಕ್ಕೆ ಶ್ರಮಪಟ್ಟು ಕೆಲಸ ಮಾಡು ಎಂದಿದ್ದಾರೆ.
ಇನ್ನು ದಬಾಂಗ್-3 ಸಿನಿಮಾ ಕನ್ನಡ, ಹಿಂದಿ, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ಇದೇ ತಿಂಗಳ 20ಕ್ಕೆ ಚಿತ್ರ ತೆರೆ ಕಾಣಲಿದೆ.