ETV Bharat / sitara

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಹಿರಿಯ ನಟಿ ಸೈರಾ ಬಾನು - ದಿಲೀಪ್ ಕುಮಾರ್

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ನಟಿ ಸೈರಾ ಬಾನುಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸೈರಾ ಬಾನು
ಸೈರಾ ಬಾನು
author img

By

Published : Sep 3, 2021, 1:28 PM IST

ಮುಂಬೈ: ಹಿರಿಯ ನಟಿ ಸೈರಾ ಬಾನು(77)ಗೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೈರಾ, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಜುಲೈನಲ್ಲಿ ಪತಿ ದಿಲೀಪ್ ಕುಮಾರ್​ ನಿಧನ ಹೊಂದಿದ ಬಳಿಕ ಸೈರಾ, ಆಘಾತಕ್ಕೊಳಗಾಗಿದ್ದರು ಎನ್ನಲಾಗಿದೆ. ಉಸಿರಾಟದ ತೊಂದರೆ, ಬ್ಲಡ್ ಪ್ರಶರ್​, ಶುಗರ್​​​ ನಿಂದ ಬಳಲುತ್ತಿದ್ದ ಅವರನ್ನು ಆಗಸ್ಟ್ 28 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಅವರ ಹೃದಯದ ತಪಾಸಣೆ ನಡೆಸಿದ್ದು, ಪರಿಧಮನಿಯ ಸಿಂಡ್ರೋಮ್(oronary angiogram) ಇರುವುದು ಪತ್ತೆಯಾಗಿದೆ ಎಂದು ಹಿಂದುಜಾ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

ಸೈರಾ, ಆಂಜಿಯೋಗ್ರಫಿ ಚಿಕಿತ್ಸೆಗೆ ಒಳಗಾಗಲು ನಿರಾಕರಿಸಿದ್ದು, ಅವರು ಒಪ್ಪಿಗೆ ನೀಡಿದ ನಂತರ ಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ದಿಲೀಪ್ ಕುಮಾರ್ ಸಾವಿನ ನಂತರ ಸೈರಾ ಬಾನು ಖಿನ್ನತೆಗೊಳಗಾಗಿದ್ದಾರೆ. ಹೆಚ್ಚು ನಿದ್ರೆ ಮಾಡುತ್ತಿಲ್ಲ. ಸದಾ ಮನೆಗೆ ಹೋಗಬೇಕೆಂದು ತವಕಿಸುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ಆ್ಯಸಿಡ್​​​ ದಾಳಿ ಸಂತ್ರಸ್ತೆಗೆ 10 ಲಕ್ಷ ರೂ. ದೇಣಿಗೆ ನೀಡಿದ ಬಾಲಿವುಡ್​ ನಟಿ ದೀಪಿಕಾ

ಸೈರಾ ಬಾನು ಪತಿ ದಿಲೀಪ್ ಕುಮಾರ್ ಜುಲೈ 7 ರಂದು ಅನಾರೋಗ್ಯದಿಂದ ಮೃತಪಟ್ಟರು. ಸಗಿನಾ, ಗೋಪಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದ ದಂಪತಿ, 1966 ರಲ್ಲಿ ವಿವಾಹವಾದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.