ಹೈದರಾಬಾದ್: ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ 'ಆದಿಪುರುಷ್' ಈಗ ಎಲ್ಲಿಗೆ ಬಂತು? ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಅನ್ನೋದಕ್ಕೂ ಮುನ್ನ ವಿರ್ದೇಶಕ ಓಂ ರೌತ್ ಸಿನಿ ರಸಿಕರಿಗೆ ಒಂದು ಸಂತಸದ ಸುದ್ದಿ ನೀಡಿದ್ದಾರೆ.

ಟಾಲಿವುಡ್ ನಟ ಪ್ರಭಾಸ್ ಹಾಗೂ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮುಖ್ಯಭೂಮಿಕೆಯಲ್ಲಿ ತಯಾರಾಗುತ್ತಿರುವ ಚಿತ್ರದ ಚಿತ್ರೀಕರಣ ಭಾಗಶಃ ಮುಗಿದಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ಓಂ ರಾವುತ್ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸ್ಪಷ್ಟಪಡಿಸಿದ್ದಾರೆ.
-
It’s a film wrap for Lankesh!!! Had so much fun shooting with you SAK!!!#SaifAliKhan #Adipurush #AboutLastNight pic.twitter.com/WLE8n0Ycu7
— Om Raut (@omraut) October 9, 2021 " class="align-text-top noRightClick twitterSection" data="
">It’s a film wrap for Lankesh!!! Had so much fun shooting with you SAK!!!#SaifAliKhan #Adipurush #AboutLastNight pic.twitter.com/WLE8n0Ycu7
— Om Raut (@omraut) October 9, 2021It’s a film wrap for Lankesh!!! Had so much fun shooting with you SAK!!!#SaifAliKhan #Adipurush #AboutLastNight pic.twitter.com/WLE8n0Ycu7
— Om Raut (@omraut) October 9, 2021
ಸೈಫ್ ಅಲಿ ಖಾನ್ ಅವರ ಪಾತ್ರದ ಬಗ್ಗೆ ಕೆಲವು ಸಾಲುಗಳನ್ನು ಬರೆದಿರುವ ಓಂ ರಾವುತ್, 'ಆದಿಪುರುಷ್' ಚಿತ್ರದಲ್ಲಿ ನಟ ಸೈಫ್ ಅಲಿ ಖಾನ್ ರಾವಣನ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಅವರ ಎಲ್ಲ ದೃಶ್ಯಗಳು ಪೂರ್ಣಗೊಂಡಿವೆ. ಹಾಗಾಗಿ ಈ ಸೆಲೆಬ್ರೆಷನ್ ಎಂದು ಬರೆದುಕೊಂಡಿದ್ದಾರೆ.

ಬಹುದಿನಗಳಿಂದ ನಡೆಯುತ್ತಿರುವ ಚಿತ್ರದ ಚಿತ್ರೀಕರಣ ಒಂದು ಹಂತಕ್ಕೆ ಬಂದು ತಲುಪಿದ್ದರಿಂದ ಹಾಗೂ ಚಿತ್ರದಲ್ಲಿನ ತಮ್ಮ ಎಲ್ಲ ಶೆಡ್ಯೂಲ್ಡ್ ಕಂಪ್ಲೀಟ್ ಆಗಿದ್ದರಿಂದ ಖುಷಿಯಲ್ಲಿರುವ ನಟ ಸೈಫ್ ಅಲಿ ಖಾನ್ ಕೈ ಮೇಲೆ ಎತ್ತಿ ಗೆದ್ದಂತೆ ಆಶಯ ವ್ಯಕ್ತಪಡಿಸಿದ್ದಾರೆ. ಈ ಫೋಟೋವನ್ನೇ ವಿರ್ದೇಶಕ ಓಂ ರೌತ್ ಟ್ವೀಟ್ ಮಾಡಿದ್ದಾರೆ.
-
Celebrating the victory of good over evil! #Adipurush#Prabhas @ItsBhushanKumar @vfxwaala @rajeshnair06 @TSeries @retrophiles1 #TSeries pic.twitter.com/zx5NXseX0G
— Om Raut (@omraut) August 18, 2020 " class="align-text-top noRightClick twitterSection" data="
">Celebrating the victory of good over evil! #Adipurush#Prabhas @ItsBhushanKumar @vfxwaala @rajeshnair06 @TSeries @retrophiles1 #TSeries pic.twitter.com/zx5NXseX0G
— Om Raut (@omraut) August 18, 2020Celebrating the victory of good over evil! #Adipurush#Prabhas @ItsBhushanKumar @vfxwaala @rajeshnair06 @TSeries @retrophiles1 #TSeries pic.twitter.com/zx5NXseX0G
— Om Raut (@omraut) August 18, 2020
ಇನ್ನು ಚಿತ್ರದಲ್ಲಿ ನಟ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ. ಈ ಹೈ - ಬಜೆಟ್ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಇದೇ ಮೊದಲ ಬಾರಿಗೆ ಪ್ರಭಾಸ್ ವಿರುದ್ಧ ತೊಡೆತಟ್ಟುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಸಹಜವಾಗಿ ಇದು ಸಿನಿ ರಸಿಕರ ನಿದ್ದೆ ಕೆಡಿಸಿದೆ.

ಬಾಲಿವುಡ್ ನಟಿ ಕೃತಿ ಸನೋನ್ ಈ ಚಿತ್ರದಲ್ಲಿ ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ಸನ್ನಿ ಸಿಂಗ್ ಕೂಡ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು 2022 ರಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಇತರ ವಿದೇಶಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
