ETV Bharat / sitara

ಆತ್ಮಚರಿತ್ರೆ ಬರೆಯಲು ಸಜ್ಜಾದ ಸೈಫ್​ ಅಲಿ ಖಾನ್​: ಕುತೂಹಲ ಕೆರಳಿಸಿದ ಪುಸ್ತಕದ ಹೆಸರು!

author img

By

Published : Aug 25, 2020, 4:36 PM IST

Updated : Aug 25, 2020, 11:47 PM IST

ಬಾಲಿವುಡ್​ ನಟ ಸೈಫ್ ಅಲಿ ಖಾನ್​ ವೃತ್ತಿ ಬದುಕಿನ ನೆನಪುಗಳನ್ನೇ ಕೂಡಿಹಾಕಿ ಆತ್ಮಚರಿತ್ರೆಯೊಂದನ್ನು ಬರೆಯಲು ಸಜ್ಜಾಗಿದ್ದಾರಂತೆ. ತಾವು ನಡೆದು ಬಂದ ಹಾದಿ, ತಮ್ಮ ಖಾಸಗಿ ಜೀವನ ಸೇರಿದಂತೆ ಚಿತ್ರರಂಗದ ಬದುಕಿನ ಹಲವು ವಿಚಾರಗಳನ್ನು ಪುಸ್ತಕ ರೂಪದಲ್ಲಿ ಅಭಿಮಾನಿಗಳಿಗೆ ನೀಡಲಿದ್ದಾರಂತೆ.

Saif Ali Khan to pen autobiography with a dash of humour
ಸೈಫ್​ ಅಲಿ ಖಾನ್ (ಸಂಗ್ರಹ ಚಿತ್ರ)

ಮುಂಬೈ: ವಿಭಿನ್ನ ಪಾತ್ರಗಳ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿರುವ ಬಾಲಿವುಡ್​ ನಟ ಸೈಫ್ ಅಲಿ ಖಾನ್​ ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದು ಎಲ್ಲರಿಗೂ ತಿಳಿದು ವಿಚಾರ. ವಾರಗಳ ಹಿಂದಷ್ಟೇ ಸ್ವತಃ ಸೈಫ್ ಪತ್ನಿ ಕರೀನಾ ಕಪೂರ್​ ಜೊತೆಗೆ ಎರಡನೇ ಮಗುವಿನ ಆಗಮನದಲ್ಲಿರುವುದಾಗಿ ಹೇಳಿಕೆ ತಿಳಿಸಿದ್ದರು. ಈ ಖುಷಿ ಜೊತೆಗೆ ಅವರು ಮತ್ತೊಂದು ಸಿಹಿಯಾದ ಸುದ್ದಿ ನೀಡಿದ್ದಾರೆ.

ಸೈಫ್​ ಹುಟ್ಟುಹಬ್ಬಕ್ಕೆ ವಿಶೇಷ ಸರ್ಪ್ರೈಸ್​ ನೀಡಿದ ಕರೀನಾ

ಹೌದು, ಬಣ್ಣದ ಬದುಕಿಗೆ ಬಂದು 25 ವರ್ಷಗಳನ್ನು ಪೂರೈಸಿದ ನಟ ಸೈಫ್ ಅಲಿ ಖಾನ್​,​ ಇದೀಗ ತಮ್ಮ ವೃತ್ತಿ ಬದುಕಿನ ನೆನಪುಗಳನ್ನೇ ಪುಸ್ತಕದ ರೂಪದಲ್ಲಿ ಅಭಿಮಾನಿಗಳ ಕೈಗೆ ನೀಡಲಿದ್ದಾರಂತೆ. ಇದು ಅವರ ಆತ್ಮಚರಿತ್ರೆಯಾಗಲಿದೆ. ಇನ್ನು ಹೆಸರಿಡದ ಈ ಆತ್ಮಚತಿತ್ರೆ 2021ಕ್ಕೆ ಅಭಿಮಾನಿಗಳ ಕೈ ತಲುಪಲಿದೆಯಂತೆ.

ನನ್ನ 50 ವರ್ಷದ ಜೀವನ, ಅನುಭವಗಳು, ಕುಟುಂಬದ ಜೊತೆಗಿದ್ದ ಒಡನಾಟ, ವೃತ್ತಿ ಜೀವನ ಸೇರಿದಂತೆ ಹತ್ತು ಹಲವು ಸಂಗತಿಗಳನ್ನು ಪುಸ್ತಕ ರೂಪದಲ್ಲಿ ಹಂಚಿಕೊಳ್ಳಲು ತಯಾರಿ ನಡೆಸಿದ್ದೇನೆ. ನನ್ನ ಈ ಆತ್ಮಚರಿತ್ರೆ ಮತ್ತೊಬ್ಬರಿಗೆ ಸ್ಫೂರ್ತಿಯಾಗಲಿದೆ ಎಂದ ಮಹಾದಾಸೆಯಿಂದ ಈ ಕಾರ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ. ಅನೇಕ ವಿಷಯಗಳು ನಮಗೆ ತಿಳಿದೂ ತಿಳಿಯದಂತೆ ಮರೆಯಾಗುತ್ತಲಿರುತ್ತವೆ. ಅದನ್ನು ನಾವು ಯಾವುದಾದರೂ ರೂಪದಲ್ಲಿ ದಾಖಲಿಸಿಕೊಳ್ಳಬೇಕು. ಇಲ್ಲದಿದ್ದರೆ ಅವುಗಳು ಮುಂದೆ ಮರೆಯಾಗುವ ಸಾಧ್ಯತೆಗಳು ಹೆಚ್ಚು ಎಂದು ಖಾನ್​ ಹೇಳಿದ್ದಾರೆ.

Last Updated : Aug 25, 2020, 11:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.