ETV Bharat / sitara

ಸಡಕ್-2 ಟ್ರೇಲರ್ ಬಿಡುಗಡೆ...ನಿರೀಕ್ಷಿಸಿದಂತೆ ಸಕ್ಸಸ್ ಆಗಲಿದ್ಯಾ ಸಿನಿಮಾ...? - ಡಿಸ್ನಿ ಹಾಟ್​​​ಸ್ಟಾರ್​​​ನಲ್ಲಿ ಸಡಕ್ 2 ರಿಲೀಸ್

ಮಹೇಶ್ ಭಟ್ ನಿರ್ದೇಶನದ ಬಹುನಿರೀಕ್ಷಿತ 'ಸಡಕ್​​​​-2' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇದೇ ತಿಂಗಳ 28 ರಂದು ಸಿನಿಮಾ ಡಿಸ್ನಿ+ಹಾಟ್​​ಸ್ಟಾರ್​​ನಲ್ಲಿ ಸಡಕ್-2 ರಿಲೀಸ್ ಆಗಲಿದೆ.

Sadak 2 trailer out
ಸಡಕ್-2 ಟ್ರೇಲರ್ ಬಿಡುಗಡೆ
author img

By

Published : Aug 12, 2020, 2:40 PM IST

ಆಲಿಯಾ ಭಟ್, ಆದಿತ್ಯ ರಾಯ್ ಕಪೂರ್, ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಡಕ್-2 ಚಿತ್ರದ ಅಫಿಷಿಯಲ್ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ಸುಮಾರು 21 ವರ್ಷಗಳ ನಂತರ ಮಹೇಶ್ ಭಟ್ ಮತ್ತೆ ನಿರ್ದೇಶನಕ್ಕೆ ವಾಪಸಾಗಿದ್ದಾರೆ.

  • " class="align-text-top noRightClick twitterSection" data="">

3:02 ನಿಮಿಷ ಅವಧಿಯ ಟ್ರೇಲರ್​​​ನಲ್ಲಿ ಚಿತ್ರದ ಪ್ರಮುಖ ಪಾತ್ರಗಳನ್ನು ಪರಿಚಯಿಸಲಾಗಿದೆ. ಟ್ರೇಲರ್​​​ನ ಮೊದಲಾರ್ಧ ಲವ್, ಸೆಂಟಿಮೆಂಟ್ ದೃಶ್ಯಗಳನ್ನು ತೋರಿಸಲಾಗಿದ್ದರೆ, ನಂತರ ಆ್ಯಕ್ಷನ್, ರಕ್ತಪಾತದ ದೃಶ್ಯಗಳನ್ನು ತೋರಿಸಲಾಗಿದೆ. 21 ವರ್ಷಗಳ ಬಳಿಕವೂ ಮಹೇಶ್ ಭಟ್ ನಿರ್ದೇಶನವನ್ನು ಮರೆತಿಲ್ಲ ಎನ್ನುವುದಕ್ಕೆ ಟ್ರೇಲರ್ ಉದಾಹರಣೆಯಾಗಿದೆ. ಟ್ರೇಲರ್​​​​ ಆರಂಭದಲ್ಲಿ 1991 ರಲ್ಲಿ ಬಿಡುಗಡೆಯಾದ ಸಡಕ್ ಚಿತ್ರದ ದೃಶ್ಯವನ್ನು ಕೂಡಾ ತೋರಿಸಲಾಗಿದೆ. ಈ ಚಿತ್ರದಲ್ಲಿ ಕೂಡಾ ಸಂಜಯ್ ದತ್ ಟ್ಯಾಕ್ಸಿ ಡ್ರೈವರ್ ಪಾತ್ರವನ್ನು ಮುಂದುವರೆಸಿದ್ದಾರೆ.

ಚಿತ್ರದಲ್ಲಿ ಆಲಿಯಾ ಭಟ್ ಹಾಗೂ ಆದಿತ್ಯ ರಾಯ್ ಕಪೂರ್ ಪ್ರೇಮಿಗಳಾಗಿ ನಟಿಸಿದ್ದಾರೆ. ಈ ನಡುವೆ ಟ್ರೇಲರ್​​​ಗೆ ನಿರೀಕ್ಷಿಸಿದಷ್ಟು ವೀಕ್ಷಣೆ ಹಾಗೂ ಲೈಕ್ಸ್ ದೊರೆತಿಲ್ಲ ಎನ್ನಲಾಗುತ್ತಿದೆ. 'ಸಡಕ್​​​-2' ಬಾಲಿವುಡ್​​ನ ಬಹುನಿರೀಕ್ಷಿತ ಚಿತ್ರವಾದರೂ ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ಎಲ್ಲಾ ಬದಲಾಗಿದೆ ಎನ್ನಲಾಗುತ್ತಿದೆ. 'ಸಡಕ್-2' ಚಿತ್ರದಿಂದ ಸುಶಾಂತ್ ಸಿಂಗ್ ರಜಪೂತ್​​​​​​​​​​​​​​​​​ ಅವರನ್ನು ರಿಜೆಕ್ಟ್ ಮಾಡಲಾಗಿದ್ದು ಅಪ್ಪ-ಮಕ್ಕಳು ಸ್ವಜಪಕ್ಷಪಾತ ಮಾಡಿದ್ದಾರೆ ಎಂದು ಸುಶಾಂತ್ ಅಭಿಮಾನಿಗಳು ಆರೋಪಿಸುತ್ತಿದ್ದಾರೆ.

ಈ ನಡುವೆ ಸಂಜಯ್ ದತ್ ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ಧಾರೆ. ಆಗಸ್ಟ್ 28 ರಂದು ಡಿಸ್ನಿ+ಹಾಟ್​​ಸ್ಟಾರ್​​ನಲ್ಲಿ ಸಡಕ್-2 ಬಿಡುಗಡೆಯಾಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.