ETV Bharat / sitara

ಬಾಲಿವುಡ್​ ಎದುರು ಬೆದರಿದ 'ಸಾಹೋ'...ಹೊಸ ಡೇಟ್​ ಪ್ರಕಟಿಸಿದ ಚಿತ್ರತಂಡ - ಟಾಲಿವುಡ್​ ಡಾರ್ಲಿಂಗ್

ಟಾಲಿವುಡ್​ ಡಾರ್ಲಿಂಗ್ ಪ್ರಭಾಸ್​ ಹಾಗೂ ಶ್ರದ್ಧಾ ಕಪೂರ್​ ನಟಿಸಿರುವ 'ಸಾಹೋ' ಸಿನಿಮಾ ರಿಲೀಸ್​ಗೆ ಕೊನೆಗೂ ಡೇಟ್​ ಫಿಕ್ಸ್​ ಆಗಿದೆ. ಬಹುನಿರೀಕ್ಷಿತ ಈ ಚಿತ್ರ ಆಗಸ್ಟ್​ ಕೊನೆಯ ವಾರದಲ್ಲಿ ದೇಶ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ.

ಸಾಹೋ
author img

By

Published : Jul 23, 2019, 11:32 AM IST

Updated : Jul 23, 2019, 2:25 PM IST

ಈ ಮೊದಲು ಆಗಸ್ಟ್​ 15 ರಂದೇ ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಆದರೆ, ಪೋಸ್ಟ್ ಪ್ರೊಡಕ್ಷನ್​ ಕೆಲಸ ಬಾಕಿ ಇರುವ ಹಿನ್ನೆಲೆ ಎರಡು ವಾರ ಮುಂದಕ್ಕೆ ಹೋಗಿತ್ತು. ಇಂದು ಚಿತ್ರದ ಹೊಸ ಪೋಸ್ಟರ್​ ರಿಲೀಸ್ ಮಾಡಿರುವ ಚಿತ್ರತಂಡ, ಆಗಸ್ಟ್​ 30 ರಂದು ಸಿನಿಮಾ ಬಿಡುಗಡೆ ಎಂದು ಘೋಷಿಸಿದೆ.

ಎರಡು ವರ್ಷಗಳಿಂದ ಪ್ರಭಾಸ್ ಅಭಿಮಾನಿಗಳು ಸಾಹೋ ಚಿತ್ರ ಕಾಯುತ್ತಿದ್ದಾರೆ. ಸಾಧ್ಯವಾದಷ್ಟು ಬೇಗನೆ ಸಿನಿಮಾ ತೋರಿಸಬೇಕೆಂದುಕೊಂಡಿದ್ದ ಚಿತ್ರತಂಡ ಆಗಸ್ಟ್ 15 ರಂದು ಬಿಡುಗಡೆಗೆ ಡೇಟ್​ ನಿಗದಿ ಪಡಿಸಿತ್ತು. ಆದರೆ, ಅಂದೇ ಬಾಲಿವುಡ್​ನ ಎರಡು ಬಿಗ್ ಸಿನಿಮಾಗಳು ಚಿತ್ರಮಂದಿರಗಳಿಗೆ ದಾಂಗುಡಿ ಇಡುತ್ತಿವೆ. ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ 'ಮಿಷನ್ ಮಂಗಲ್' ಹಾಗೂ ಜಾನ್ ಅಬ್ರಹಾಂ ಅವರ 'ಬಟ್ಲಾ ಹೌಸ್' ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ. ಈಗಾಗಲೇ ಸಿಕ್ಕಾಪಟ್ಟೆ ಟಾಕ್ ಶುರು ಮಾಡಿರುವ ಈ ಸಿನಿಮಾಗಳು ಬಹುತೇಕ ಥಿಯೇಟರ್​​ಗಳನ್ನ ತಮ್ಮ ತೆಕ್ಕೆಗೆ ಪಡೆದಿವೆಯಂತೆ. ಇದು ಇತರ ಸಿನಿಮಾಗಳ ಮೇಲೆ ಪರಿಣಾಮ ಬೀರಿದೆ.

ಬಾಲಿವುಡ್​ನ ಮಿಷನ್ ಮಂಗಲ್​ ಹಾಗೂ ಬಟ್ಲಾ ಹೌಸ್​ ಎದುರು ತೆರೆಗೆ ಬಂದ್ರೆ ಚಿತ್ರಮಂದಿರಗಳ ಕೊರತೆ ಎದುರಾಗಲಿದೆ ಎಂಬುದು ಸಾಹೋ ತಂಡ ಮನಗಂಡಂತಿದೆ. ಅಷ್ಟೆ ಅಲ್ಲದೆ ಗಳಿಕೆ ಮೇಲೂ ಪೆಟ್ಟು ಬೀಳಬಹುದು ಎಂಬುದು ಚಿತ್ರತಂಡ ಮುಂದಾಲೋಚನೆ. ಇದೇ ಕಾರಣಕ್ಕೆ ಕೊಂಚ ಮುಂದಕ್ಕೆ ಹೋದರೆ ಒಳ್ಳೆಯದೆಂದು ತೀರ್ಮಾನಿಸಿ ಆಗಸ್ಟ್ 30 ರಂದು ಪ್ರೇಕ್ಷಕರ ಮುಂದೆ ಸಿನಿಮಾ ತರುತ್ತಿದೆಯಂತೆ.

Intro:Body:Conclusion:
Last Updated : Jul 23, 2019, 2:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.