ETV Bharat / sitara

ಪ್ರೇಯಸಿಯೊಂದಿಗೆ ಉಂಗುರ ಬದಲಿಸಿಕೊಂಡ 'ಸಾಹೋ' ನಿರ್ದೇಶಕ - Saaho director Sujeet got Engaged

ಪ್ರಭಾಸ್ ಅಭಿನಯದ 'ಸಾಹೋ' ಚಿತ್ರದ ನಿರ್ದೇಶಕ ಸುಜೀತ್ ತಾವು ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ಪ್ರವಲ್ಲಿಕ ಅವರೊಂದಿಗೆ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Saaho director got engaged
ಸಾಹೋ ನಿರ್ದೇಶಕನ ಎಂಗೇಜ್​​​ಮೆಂಟ್
author img

By

Published : Jun 11, 2020, 5:19 PM IST

ಒಂದೆಡೆ ತೆಲುಗು ನಟ ರಾಣಾ ದಗ್ಗುಬಾಟಿ ದಾಂಪತ್ಯ ಜೀವನಕ್ಕೆ ಕಾಲಿಡಲು ತಯಾರಿ ನಡೆಸುತ್ತಿದ್ದರೆ ತೆಲುಗು ನಿರ್ದೇಶಕ ಸುಜೀತ್ ತಮ್ಮ ಪ್ರೇಯಸಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸುಜೀತ್ ಅವರು ಪ್ರಭಾಸ್ ನಟನೆಯ 'ಸಾಹೋ' ಚಿತ್ರದ ನಿರ್ದೇಶಕ.

Saaho director got engaged
'ಸಾಹೋ' ನಿರ್ದೇಶಕ ಸುಜೀತ್

ಇಂದು ಬೆಳಗ್ಗೆ ಹೈದರಾಬಾದ್​​ನ ಗೊಲ್ಕೊಂಡಾ ರೆಸಾರ್ಟ್​ನಲ್ಲಿ ಈ ನಿಶ್ಚಿತಾರ್ಥ ಸಮಾರಂಭ ನೆರವೇರಿದೆ. ಬಹಳ ದಿನಗಳಿಂದ ತಾವು ಪ್ರೀತಿಸುತ್ತಿದ್ದ ಪ್ರವಲ್ಲಿಕ ಎಂಬುವರೊಂದಿಗೆ ಸುಜೀತ್ ಎಂಗೇಜ್​​​ಮೆಂಟ್ ರಿಂಗ್ ಬದಲಿಸಿಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸುಜಿತ್ ಕೂಡಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸುಜೀತ್ ಪ್ರೇಯಸಿ ಪ್ರವಲ್ಲಿಕ ದಂತ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ.

Saaho director got engaged
ಪ್ರಭಾಸ್ ಜೊತೆಗೆ ಸುಜೀತ್

'ರನ್ ರಾಜಾ ರನ್' ಚಿತ್ರದ ಮೂಲಕ ನಿರ್ದೇಶಕನಾಗಿ ಸಿನಿಕರಿಯರ್ ಆರಂಭಿಸಿದ ಸುಜೀತ್, ನಂತರ ಬಿಗ್ ಬಜೆಟ್ 'ಸಾಹೋ' ಚಿತ್ರಕ್ಕೆ ಕೂಡಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಹಾಗೂ ಅವರಿಗೆ ನಾಯಕಿಯಾಗಿ ಶ್ರದ್ಧಾ ಕಪೂರ್ ನಟಿಸಿದ್ದಾರೆ. ಮಲಯಾಳಂ 'ಲೂಸಿಫರ್' ತೆಲುಗು ರೀಮೇಕ್​​​​ನಲ್ಲಿ ಚಿರಂಜೀವಿ ನಟಿಸುತ್ತಿದ್ದು ಈ ಚಿತ್ರವನ್ನು ಸುಜೀತ್ ನಿರ್ದೇಶಿಸಲಿದ್ದಾರೆ. ಅತಿ ಕಡಿಮೆ ಸಮಯದಲ್ಲಿ ಒಳ್ಳೆ ಹೆಸರು ಸಂಪಾದಿಸಿದ ನಿರ್ದೇಶಕ ಇವರು. ಸುಜೀತ್ ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಸುಜೀತ್ ಹಾಗೂ ಪ್ರವಲ್ಲಿಕ ಕುಟುಂಬದವರು ಚರ್ಚಿಸಿ ಶೀಘ್ರದಲ್ಲೇ ಮದುವೆ ದಿನಾಂಕ ಫಿಕ್ಸ್ ಮಾಡುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.