ಮುಂಬೈ: ಜನಪ್ರಿಯ ರಿಯಾಲಿಟಿ ಶೋ ಹಿಂದಿ ಬಿಗ್ಬಾಸ್ ಸೀಸನ್ 14 ಮುಕ್ತಾಯಗೊಂಡಿದ್ದು, ಖ್ಯಾತ ಕಿರುತೆರೆ ನಟಿ ರುಬಿನಾ ದಿಲೈಕ್ ಹಿಂದಿ ಬಿಗ್ ಬಾಸ್ -14 ಸೀಸನ್ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಪತಿ, ನಟ ಅಭಿನವ್ ಶುಕ್ಲಾ ಜೊತೆ ಬಿಗ್ಬಾಸ್ ಮನೆ ಪ್ರವೇಶಿಸಿದ ರುಬಿನಾ ಮೊದಲ ದಿನವೇ ಪ್ರೇಕ್ಷಕರ ಮನಗೆದ್ದಿದ್ದರು. ಛೋಟಿ ಬಹು, ಶಕ್ತಿ-ಅಸ್ತಿತ್ವ್ ಕಿ ಎಹಸಾಸ್ ಮುಂತಾದ ಕಾರ್ಯಕ್ರಮಗಳ ಮೂಲಕ ರುಬಿನಾ ಹೆಚ್ಚು ಜನಪ್ರಿಯತೆ ಗಳಿಸಿದ್ದರು. ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರಾದ ನಟ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಬಿಗ್ಬಾಸ್ನ ವಿನ್ನರ್ ಹೆಸರನ್ನ ಘೋಷಿಸಿದ್ರು.
ಪತಿ ಅಭಿನವ್ ಶುಕ್ಲಾ ಜೊತೆ ಕಳೆದ ಅಕ್ಷೋಬರ್ನಲ್ಲಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ 33 ರ ಹರೆಯದ ರುಬಿನಾ ದಿಲೈಕ್, ಬಂದ ದಿನದಿಂದಲೇ ಪ್ರೇಕ್ಷಕರ ನೆಚ್ಚಿನ ಕಂಟೆಸ್ಟೆಂಟ್ ಆಗಿದ್ದರು. ಪತಿ ಅಭಿನವ್ ಹಿಂದೆ ಬಿದ್ದಿದ್ದ ರಾಖಿ ಸಾವಂತ್ ವಿರುದ್ಧ ಸಿಡಿದೆದ್ದಿದ್ದ ರುಬಿನಾ, ಬಿಗ್ಬಾಸ್ ಮನೆಯ ಕೆಲವು ಸ್ಪರ್ಧಿಗಳ ಅಗ್ರೆಸಿವ್ ಧೋರಣೆಯನ್ನು ಕಟುವಾಗಿ ಖಂಡಿಸಿ, ಜನರ ಪ್ರೀತಿಗೆ ಪಾತ್ರರಾಗಿದ್ದರು.
ಇನ್ನು ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆಯಂದು ಹಿರಿಯ ನಟ ಧರ್ಮೇಂದ್ರ ಮತ್ತು ನರ್ತಕಿ-ನಟ ನೋರಾ ಫತೇಹಿ ಡ್ಯಾನ್ಸ್ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ರು.