ಹೈದರಾಬಾದ್: ಬಾಲಿವುಡ್ ನಟಿ ರವೀನಾ ಟಂಡನ್ ಅವರ ತಂದೆ, ನಿರ್ದೇಶಕ ರವಿ ಟಂಡನ್(86) ಇಂದು ಬೆಳಗ್ಗೆ ಮುಂಬೈನ ನಿವಾಸದಲ್ಲಿ ನಿಧನರಾಗಿದ್ದಾರೆ. ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವರ ಅಭಿಮಾನಿಗಳು, ನಟ- ನಟಿಯರು ಸಂತಾಪ ಸೂಚಿಸಿದ್ದಾರೆ.
ನಟಿ ರವೀನಾ ಟಂಡನ್ ಅವರು ತಮ್ಮ ತಂದೆಯ ಜೊತೆ ಇರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ' ನೀವು ಎಂದಿಗೂ ನನ್ನ ಜೊತೆಗೇ ಇರುತ್ತೀರಿ, ನಾನು ನಿಮ್ಮೊಂದಿಗೆ ಇರುವೆ. ನಿಮ್ಮನ್ನು ನಾನು ಬಿಟ್ಟು ಕೊಡುವುದಿಲ್ಲ. ಲವ್ ಯೂ ಅಪ್ಪ' ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ರವೀನಾ ಅವರ ಈ ಪೋಸ್ಟ್ಗೆ ನಟಿಯರಾದ ನೀಲಮ್ ಕೊಠಾರಿ, ಜೂಹಿ ಚಾವ್ಲಾ, ನಮ್ರತಾ ಸಿರೋಡಕರ್ ಸೇರಿದಂತೆ ಹಲವಾಗಿ ಸಿನಿಮಾ ತಾರೆಯರು ಕಮೆಂಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ನಿರ್ದೇಶಕರಾಗಿದ್ದ ರವಿ ಟಂಡನ್ ಅವರು ಖೇಲ್ ಖೇಲ್ ಮೇ, ಅನ್ಹೋನಿ, ನಜ್ರಾನಾ, ಮಜ್ಬೂರ್, ಖುದ್-ದಾರ್ ಮತ್ತು ಜಿಂದಗಿ ಸೇರಿದಂತೆ ಅನೇಕ ಚಲನಚಿತ್ರಗಳನ್ನು ಡೈರೆಕ್ಟ್ ಮಾಡಿದ್ದಾರೆ.
ಓದಿ: ಹಾಲಿವುಡ್ ಮೂಲಕ ಬೆಳ್ಳಿತೆರೆಗೆ ದೇಶಿ ಸೂಪರ್ ಹೀರೋ ಶಕ್ತಿಮಾನ್!