ಬಾಲಿವುಡ್ ನಟ ರಣವೀರ್ ಸಿಂಗ್ ಆಕ್ಟಿಂಗ್ ಮಾತ್ರವಲ್ಲ ವಿಭಿನ್ನ ಫ್ಯಾಷನ್ ಹಾಗೂ ಕೆಲವೊಮ್ಮೆ ವಿಭಿನ್ನ ಕಾಸ್ಟ್ಯೂಮ್ ಧರಿಸಿ ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ರಣವೀರ್ ಮತ್ತೊಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ.
- " class="align-text-top noRightClick twitterSection" data="
">
ಕೆಲವು ದಿನಗಳ ಹಿಂದೆ ರಣವೀರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ಫೋಟೋವೊಂದನ್ನು ನೋಡಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಪುತ್ರಿ ಜೀವಾ, ಇವರು ನನ್ನ ಕನ್ನಡಕವನ್ನು ಏಕೆ ಹಾಕಿಕೊಂಡಿದ್ದಾರೆ. ಅವರಿಗೆ ನೀವು ನನ್ನ ಸನ್ಗ್ಲಾಸ್ ಏಕೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾಳೆ. ಆಗ ಧೋನಿ ಅದು ನಿನ್ನ ಸನ್ಗ್ಲಾಸ್ ಅಲ್ಲ ಎಂದಾಗ ಜೀವಾ ಕೂಡಲೇ ತನ್ನ ಸನ್ಗ್ಲಾಸ್ ಮನೆಯಲ್ಲಿ ಇದೆಯಾ ಎಂಬುದನ್ನು ಖಚಿತಪಡಿಸಿಕೊಂಡಿದ್ದಾಳೆ. ಈ ವಿಷಯವನ್ನು ಸ್ವತಃ ಧೋನಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಜೀವಾಗಿ ನಾಲ್ಕೂವರೆ ವರ್ಷ. ಇಷ್ಟು ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ಇಷ್ಟು ಬುದ್ಧಿ ಇರುತ್ತದೆ ಎಂದುಕೊಂಡಿರಲಿಲ್ಲ. ಒಂದು ವೇಳೆ ಜೀವಾ ಮುಂದಿನ ಬಾರಿ ರಣ್ವೀರ್ ಭೇಟಿ ಆದರೆ, ನನ್ನ ಬಳಿಯೂ ನಿಮ್ಮ ರೀತಿಯ ಸನ್ಗ್ಲಾಸ್ ಇದೆ ಎಂದು ಹೇಳಿಕೊಳ್ಳುವುದಾಗಿ ಧೋನಿ ಕ್ಯಾಪ್ಷನ್ ಬರೆದಿದ್ದಾರೆ.