ETV Bharat / sitara

ನೀನು ಈ ವರ್ಷದ ಬಹುದೊಡ್ಡ ಉಡುಗೊರೆ.. ಬರ್ತ್‌ಡೇ ದಿನವೇ ರಾಕುಲ್ ಪ್ರೀತ್ ಸಿಂಗ್​ ಸಿಹಿ ಸುದ್ದಿ.. - ರಕುಲ್ ಪ್ರೀತ್ ಸಿಂಗ್ ಲೇಟೆಸ್ಟ್ ನ್ಯೂಸ್

ನೀನಿಲ್ಲದೆ ದಿನ ಕಳೆದಂತೆ ಅನುಸುವುದಿಲ್ಲ. ನೀನಿಲ್ಲದೆ ಯಾವುದೇ ವಿಷಯಗಳಲ್ಲಿಯೂ ಸಂಸತ ಇರುವುದಿಲ್ಲ. ನಿನ್ನಿಂದ ನನ್ನ ಪ್ರಪಂಚ ತುಂಬಾ ಸಿಹಿಯಾಗಿದೆ. ನಿನ್ನ ಸಂತೋಷದ ಈ ದಿನ, ನಿನ್ನ ನಗುವಿನಂತೆ ಸುಂದರವಾಗಿರಲಿ.. ಜನ್ಮದಿನದ ಶುಭಾಶಯಗಳು ನನ್ನ ಪ್ರೀತಿಯೆ..

Rakulpreet Singh
ರಕುಲ್ ಪ್ರೀತ್ ಸಿಂಗ್​
author img

By

Published : Oct 10, 2021, 5:00 PM IST

ಹೈದರಾಬಾದ್ : ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್‌ಗೆ​ ಹುಟ್ಟುಹಬ್ಬದ ಸಂಭ್ರಮ. ಇದೇ ಖುಷಿಯಲ್ಲಿರುವ ಈ ನಟಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

31ನೇ ವಸಂತಕ್ಕೆ ಕಾಲಿಟ್ಟಿರುವ ರಾಕುಲ್, ಈ ವಿಶೇಷ ದಿನದಿಂದು ಇನ್​​ಸ್ಟಾಗ್ರಾಮ್‌ನಲ್ಲಿ ನಿರ್ಮಾಪಕ ಜಾಕಿ ಭಗ್ನಾನಿ ಜೊತೆಗಿನ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಭಗ್ನಾನಿ ಜತೆಗಿನ ಸಂಬಂಧವನ್ನು ಬಹಿರಂಗಗೊಳಿಸಿದ್ದಾರೆ.

ಧನ್ಯವಾದಗಳು ನನ್ನ ಪ್ರೀತಿಯೇ.. ನೀನು ನನ್ನ ಈ ವರ್ಷದ ಬಹುದೊಡ್ಡ ಉಡುಗೊರೆ.. ನನ್ನ ಜೀವನಕ್ಕೆ ಬಣ್ಣ ತುಂಬಿದ್ದಕ್ಕಾಗಿ ಧನ್ಯವಾದಗಳು.. ನನ್ನನ್ನು ತುಂಬಾ ನಗಿಸಿದ್ದಕ್ಕಾಗಿ ಧನ್ಯವಾದಗಳು.. ನನ್ನ ಜೊತೆ ಇರುವುದಕ್ಕಾಗಿ ಧನ್ಯವಾದಗಳು ಮೈ ಲವ್​ ಜಾಕಿ ಭಗ್ನಾನಿ.. ಎಂದು ಹೃದಯಸ್ಪರ್ಶಿಯಾಗಿ ರಾಕುಲ್‌ ಪ್ರೀತ್‌ ಸಿಂಗ್‌ ಬರೆದುಕೊಂಡಿದ್ದಾರೆ.

ಇದಕ್ಕೆ ಜಾಕಿ ಭಗ್ನಾನಿ ತಮ್ಮ ಇನ್​​ಸ್ಟಾಗ್ರಾಮ್‌ನಲ್ಲಿ ಅದೇ ಫೋಟೋವನ್ನು ಪೋಸ್ಟ್ ಮಾಡಿ, 'ನೀನಿಲ್ಲದೆ ದಿನ ಕಳೆದಂತೆ ಅನುಸುವುದಿಲ್ಲ. ನೀನಿಲ್ಲದೆ ಯಾವುದೇ ವಿಷಯಗಳಲ್ಲಿಯೂ ಸಂಸತ ಇರುವುದಿಲ್ಲ. ನಿನ್ನಿಂದ ನನ್ನ ಪ್ರಪಂಚ ತುಂಬಾ ಸಿಹಿಯಾಗಿದೆ. ನಿನ್ನ ಸಂತೋಷದ ಈ ದಿನ, ನಿನ್ನ ನಗುವಿನಂತೆ ಸುಂದರವಾಗಿರಲಿ.. ಜನ್ಮದಿನದ ಶುಭಾಶಯಗಳು ನನ್ನ ಪ್ರೀತಿಯೆ.. ಎಂದು ಬರೆದಿದ್ದಾರೆ. ಈ ಮೂಲಕ ಇಬ್ಬರು ತಮ್ಮ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ.

ಪ್ರೀತ್ ಸಿಂಗ್ ಹುಟ್ಟುಹಬ್ಬಕ್ಕೆ ಬಾಲಿವುಡ್ ನಟ-ನಟಿಯರು ಸಹ ಶುಭ ಕೋರಿದ್ದಾರೆ. ಇಬ್ಬರ ಸಂಬಂಧ ಗಟ್ಟಿಯಾಗಿರಲು ಆಶಯಿಸಿದ್ದಾರೆ. ಸದ್ಯ ರಾಕುಲ್, ಅಕ್ಷಯ್ ಕುಮಾರ್ ಜೊತೆ ಪ್ರೊಡಕ್ಷನ್ ನಂ. 41 ಚಿತ್ರದ ಶೂಟಿಂಗ್ ಮುಗಿಸಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ ಸುಂದರಿಗೆ ಜನ್ಮದಿನದ ಸಂಭ್ರಮ.. ರೇಖಾಗೆ ಶುಭಾಶಯ ಕೋರಿದ ಕಂಗನಾ ​ ​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.