ETV Bharat / sitara

ಅರೇ, ಅಂಕಲ್ ಯಾವತ್ತೂ ಹುಡುಗೀನೇ ನೋಡಿಲ್ವಾ? ಎಂದ ರಾಖಿ ಸಾವಂತ್ - Bollywood actoress Rakhi Sawant

ದಾರಿಹೋಕನಿಗೆ ಬೈದು ಇದೀಗ ರಾಖಿ ಸಾವಂತ್ ಮತ್ತೆ ಸುದ್ದಿಯಲ್ಲಿದ್ದಾರೆ. ಪಾಪರಾಜಿಗಳಿಗೆ ಸಂದರ್ಶನ ಕೊಡುತ್ತಿದ್ದ ಸಮಯ ದಾರಿಹೋಕನೋರ್ವನಿಗೆ ಬೈದು ಆತನ ಬೆವರಿಳಿಸಿದ್ದಾಳೆ.

ರಾಖಿ ಸಾವಂತ್
ರಾಖಿ ಸಾವಂತ್
author img

By

Published : Jun 6, 2021, 1:47 PM IST

ಬಾಲಿವುಡ್ ನಟಿ ರಾಖಿ ಸಾವಂತ್ ಸದಾ ಒಂದಲ್ಲೊಂದು ರೀತಿಯಲ್ಲಿ ಸುದ್ದಿ ಮಾಡುತ್ತಲೇ ಇರುತ್ತಾರೆ. ಬಹುಶಃ ಒಂದು ವರ್ಷದಲ್ಲಿ ಬಾಲಿವುಡ್​ನಲ್ಲಿ ಅತೀ ಹೆಚ್ಚು ಸುದ್ದಿಯಲ್ಲಿರುವುದು ಯಾರು ಎಂದು ಸಮೀಕ್ಷೆ ನಡೆದರೆ, ರಾಖಿ ಸಾವಂತ್ ಹೆಸರು ಮೊದಲಿಗೆ ಬರಬಹುದೇನೋ?

ಈಗ್ಯಾಕೆ ಈ ವಿಷಯವೆಂದರೆ, ರಾಖಿ ಇದೀಗ ಇನ್ನೊಂದು ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ದಾರಿಹೋಕನಿಗೆ ಬೈದು ಲೈಮ್​ಲೈಟ್​ಗೆ ಬಂದಿದ್ದಾರೆ. ಆಗಿದ್ದೇನೆಂದರೆ, ಇತ್ತೀಚೆಗೆ ರಾಖಿ ಸಾವಂತ್ ಮುಂಬೈನಲ್ಲಿ ಸಂದರ್ಶನ ಕೊಡುತ್ತಿದ್ದರಂತೆ. ಆ ಸಮಯದಲ್ಲಿ ಯಾರೋ ಬೈಕ್​ನಲ್ಲಿ ಹೋಗುತ್ತಿದ್ದವರು, ಇದು ರಾಖಿ ಸಾವಂತ್ ಅಲ್ವಾ ಎಂದು ಗುರುತಿಸಿ, ಬೈಕ್ ನಿಲ್ಲಿಸಿ ನೋಡುತ್ತಾ ನಿಂತಿದ್ದಾರೆ. ಅದರಿಂದ ಡಿಸ್ಟರ್ಬ್ ಆದ ರಾಖಿ, ಅರೆ ಅಂಕಲ್ ಜಾಗ ಬಿಡಿ. ಯಾಕೆ ಹೀಗೆ ನೋಡ್ತಿದ್ದೀರಾ? ಜೀವನದಲ್ಲಿ ಯಾವ ಹುಡುಗಿಯನ್ನೂ ನೋಡಿಲ್ವಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನು ನೋಡಿ ಗಾಬರಿಯಾದ ಆ ದಾರಿಹೋಕ, ತಕ್ಷಣವೇ ಬೈಕ್ ಸ್ಟಾರ್ಟ್ ಮಾಡಿ ವೇಗವಾಗಿ ಹೊರಟರಂತೆ. ಅದಕ್ಕೂ ಬಾಯಿ ತೆಗೆದ ರಾಕಿ, ಹುಷಾರಾಗಿ ಹೋಗಿ. ಆಕ್ಸಿಡೆಂಟ್ ಆಗಿಹೋಗುತ್ತದೆ. ನನ್ನನ್ನು ನೋಡುವ ಬದಲು ಮುಂದೆ ನೋಡಿಕೊಂಡು ಹೋಗಿ ಎಂದು ಸಲಹೆ ಮಾಡಿ ಕಳಿಸಿದ್ದಾರೆ. ರಾಖಿ ಅವರ ಈ ವೀಡಿಯೋ, ಸೋಷಿಯಲ್ ಮೀಡಿಯಾದಲ್ಲಿ ಇದೀಗ ಸಖತ್ ವೈರಲ್ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.