ETV Bharat / sitara

ಗೌರವಕ್ಕೆ ಸಂದ ಬೆಲೆ... ರಾಘವ್​ ಮನೆಗೆ ಬಾಲಿವುಡ್​​​​ ನಿರ್ಮಾಪಕ

ಗೌರವ ಇಲ್ಲದ ಜಾಗದಲ್ಲಿ ನಾನು ಇರಲ್ಲ. ಈ ಪ್ರಪಂಚದಲ್ಲಿ ಹಣ, ಹೆಸರಿಗಿಂತ ಆತ್ಮಾಭಿಮಾನ ಎಷ್ಟೋ ಮುಖ್ಯ. ನನಗೆ ಆತ್ಮಾಭಿಮಾನ ಇದೆ. ಅದಕ್ಕೆ ಲಕ್ಷ್ಮಿ ಬಾಂಬ್​ ಚಿತ್ರದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ ಎಂದಿದ್ದರು ರಾಘವ್​. ಇದೀಗ ಇವರ ಮನ ಒಲಿಸಲು ಲಕ್ಷ್ಮೀ ಬಾಂಬ್ ನಿರ್ಮಾಪಕ ಖುದ್ದು ತಾವೇ ಚೆನ್ನೈಗೆ ಆಗಮಿಸುತ್ತಿದ್ದಾರೆ.

ಚಿತ್ರಕೃಪೆ : ಟ್ವಿಟ್ಟರ್​
author img

By

Published : May 27, 2019, 1:12 PM IST

ಚೈನ್ನೈ: ಗೌರವ ಸಿಗಲಿಲ್ಲ ಅನ್ನೋ ಕಾರಣಕ್ಕೆ ಬಾಲಿವುಡ್​​ನಿಂದ ನಿರ್ಗಮಿಸಿರುವ ತಮಿಳು ನಿರ್ದೇಶಕ ರಾಘವ ಲಾರೆನ್ಸ್​​ ಅವರ ಮನವೊಲಿಕೆ ಕಾರ್ಯ ನಡೆದಿದೆ. ಸ್ವತಃ ನಿರ್ಮಾಪಕರೇ ವಿಮಾನ ಏರಿ ರಾಘವ ಮನೆಗೆ ಬರುತ್ತಿದ್ದಾರೆ.

ರಾಘವ ಲಾರೆನ್ಸ್​ ನಟಿಸಿ, ನಿರ್ದೇಶಿಸಿರುವ ಕಾಂಚನಾ - 3 ಸಿನಿಮಾ ಬಾಲಿವುಡ್​ನಲ್ಲಿ ಲಕ್ಷ್ಮೀ ಬಾಂಬ್​ ಟೈಟಲ್​​ನಲ್ಲಿ ರಿಮೇಕ್ ಆಗುತ್ತಿದೆ. ಅಕ್ಷಯ್​ ಕುಮಾರ್ ನಟಿಸುತ್ತಿರುವ ಈ ಚಿತ್ರಕ್ಕೂ ಇವರೇ ನಿರ್ದೇಶನ ಮಾಡಲಿದ್ದರು. ಆದರೆ, ಇವರ ಗಮನಕ್ಕೆ ತರದೆ ಚಿತ್ರತಂಡ ಫಸ್ಟ್​ ಲುಕ್​ ರಿಲೀಸ್​ ಮಾಡಿತ್ತು. ಇದರಿಂದ ನೊಂದುಕೊಂಡಿದ್ದ ರಾಘವ್​, ನಮಗೆ ಗೌರವ ಸಿಗದಿರುವ ಜಾಗದಲ್ಲಿ ನಿಲ್ಲಬಾರದು ಎಂದು ಚಿತ್ರತಂಡದಿಂದ ಹೊರ ನಡೆದಿದ್ದರು. ಈ ಸುದ್ದಿ ಕಾಲಿವುಡ್ ಹಾಗೂ ಬಾಲಿವುಡ್​ನಲ್ಲಿ ಬಹು ಚರ್ಚಿತವಾಗಿತ್ತು. ನಮ್ಮ ನಿರ್ದೇಶಕರನ್ನು ಅಲ್ಲಿಗೆ ಕರೆಯಿಸಿಕೊಂಡು ಅಪಮಾನ ಮಾಡಲಾಯಿತು ಎನ್ನುವ ಮಾತುಗಳು ಕೇಳಿ ಬಂದಿದ್ದವು.

ಇತ್ತ ಲಕ್ಷ್ಮೀ ಬಾಂಬ್​ ಚಿತ್ರಕ್ಕೆ ಹೊಸ ನಿರ್ದೇಶಕರನ್ನು ಕರೆತರುತ್ತಾರೆ ಎನ್ನಲಾಗಿತ್ತು. ಆದರೆ, ಚಿತ್ರತಂಡ ಬೇಗನೆ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಮತ್ತೇ ರಾಘವ್ ಅವರನ್ನೇ ಕರೆತಂದು, ನಿರ್ದೇಶನ ಮಾಡಿಸಲು ಮುಂದಾಗಿದೆ. ಈಗಾಗಲೇ ಅವರ ಜತೆ ಮಾತಾಡಿರುವ ನಿರ್ಮಾಪಕರು, ಸ್ವತಃ ಚೆನ್ನೈಗೆ ಬಂದು ಮಾತುಕತೆ ನಡೆಸಲಿದ್ದಾರಂತೆ. ರಾಘವ್​ ಕೂಡ ತಮ್ಮ ಮನಸ್ಸು ಬದಲಿಸಿಕೊಳ್ಳುವ ಲಕ್ಷಣ ಗೋಚರಿಸಿದೆ. ಅಕ್ಷಯ್ ಕುಮಾರ್​ ಹಾಗೂ ತಮ್ಮ ಅಭಿಮಾನಿಗಳ ಪ್ರೀತಿಭರಿತ ಒತ್ತಡಕ್ಕೆ ಮಣಿದಿರುವ ಅವರು, ನಿರ್ಮಾಪಕರು ಚೆನ್ನೈಗೆ ಬರುತ್ತಿದ್ದಾರೆ. ಒಂದು ವೇಳೆ ನಮಗೆ ಅಲ್ಲಿ ಗೌರವ ಸಿಗುವುದಾದರೆ, ನಾನು ವರ್ಕ್ ಬಗ್ಗೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಭೇಟಿಯ ನಂತರ ಏನಾಗುತ್ತೆ ಎಂಬುದನ್ನು ನೋಡೋಣ ಎಂದು ಅಭಿಮಾನಿಗಳಿಗೆ ಟ್ವಿಟ್ಟರ್​ನಲ್ಲಿ ತಿಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.