ETV Bharat / sitara

2ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪಿಗ್ಗಿ- ಜೋನಸ್​

author img

By

Published : Dec 2, 2020, 11:11 AM IST

ಬಾಲಿವುಡ್​ ಬ್ಯೂಟಿ ಪ್ರಿಯಾಂಕ ಚೋಪ್ರಾ-ನಿಕ್​ ಜೋನಸ್​ ಜೊತೆ ಹಸೆಮಣೆ ಏರಿ 2 ವರ್ಷ ಕಳೆದಿವೆ. ಈ ಹಿನ್ನೆಲೆ ಈ ಜೋಡಿ ತಮ್ಮ ವಿಶೇಷ ಫೋಟೋ ಶೇರ್​ ಮಾಡುವ ಮೂಲಕ ಮದುವೆ ವಾರ್ಷಿಕೋತ್ಸವದ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.

Priyanka, Nick Jonas gush over each other on their second wedding anniversary
2ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪ್ರಿಯಾಂಕ

ವಾಷಿಂಗ್ಟನ್​​ : ಬಾಲಿವುಡ್​​ ಸ್ಟಾರ್​ ನಟಿ ಪ್ರಿಯಾಂಕ ಚೋಪ್ರಾ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಡಿಸೆಂಬರ್​ 1 ಕ್ಕೆ ಪ್ರಿಯಾಂಕ ಅಮೆರಿಕದ ಗಾಯಕ ನಿಕ್​ ಜೋನಸ್​ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು 2 ವರ್ಷ ಕಳೆದಿವೆ.

ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪ್ರಿಯಾಂಕ

ಈ ಹಿನ್ನೆಲೆ ಪ್ರೀತಿಯ ಪತಿ ಜೊತೆ ಪಿಗ್ಗಿ ತಮ್ಮ ಎರಡನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದರು. ಈ ಸಂಭ್ರಮದ ಭಾಗವಾಗಿ ಲಂಡನ್ ಸ್ಟ್ರೀಟ್​​ನಲ್ಲಿ ಪತಿ ನಿಕ್​ ಜೋನಸ್​ ಕೈ ಹಿಡಿದು ಸುತ್ತಾಡುತ್ತಿರುವ ಫೋಟೋವೊಂದನ್ನು ಪ್ರಿಯಾಂಕ್​ ಹಂಚಿಕೊಂಡಿದ್ದಾರೆ. ಇದರ ಜೊತೆ ಹೃದಯಸ್ಪರ್ಶಿ ಶೀರ್ಷಿಕೆಯೊಂದನ್ನು ನೀಡಿದ್ದಾರೆ. ನನ್ನ ಜೀವನದ ಪ್ರೀತಿಗೆ 2 ನೇ ವರ್ಷದ ವಾರ್ಷಿಕೋತ್ಸವದ ಶುಭಾಶಯಗಳು. ಯಾವಾಗಲೂ ನನ್ನ ಜೊತೆಯಲ್ಲೇ ಇರು. ನನ್ನ ಶಕ್ತಿ, ನನ್ನ ದೌರ್ಬಲ್ಯ. ನನ್ನೆಲ್ಲವೂ ನೀನೇ .. ಐ ಲವ್​​ ಯು ನಿಕ್​ ಜೋನಸ್​ ಅಂತ ಬರೆದು ಪತಿಗೆ ಶುಭಾಶಯ ಕೋರಿದ್ದಾರೆ.

ಇತ್ತ ಪ್ರಿಯಾಂಕ ಪತಿ 28 ವರ್ಷದ ಅಮೆರಿಕನ್​ ಸಿಂಗರ್​ ನಿಕ್​ ಜೋನಸ್​, ರಾಜಸ್ಥಾನದ ಜೋಧ್​​ಪುರದ ಉಮೈದ್ ಭವನ್ ಅರಮನೆಯಲ್ಲಿ ನಡೆದ ತಮ್ಮ ರಾಯಲ್ ವೆಡ್ಡಿಂಗ್​​ ಫೋಟೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅವರು ಅತೀ ಸುಂದರ, ಅತ್ಯಂತ ಅದ್ಭುತ, ಸ್ಫೂರ್ತಿದಾಯಕ ಮಹಿಳೆಯನ್ನು ಮದುವೆಯಾಗಿ ಇಂದಿಗೆ 2 ವರ್ಷಗಳು ಎಂದು ಬರೆದುಕೊಂಡಿದ್ದಾರೆ.

ಹ್ಯಾಪಿ ವಾರ್ಷಿಕೋತ್ಸವ @ ಪ್ರಿಯಾಂಕಾಚೋಪ್ರಾ, ಐ ಲವ್ ಯು ಅಂತ ಜೋನಸ್​ ಬರೆದುಕೊಂಡಿದ್ದು. ಪ್ರಿಯಾಂಕಾ ಕೂಡ" ಐ ಲವ್ ಯು ಮೇರಿ ಜಾನ್ " ಎಂದು ಕಮೆಂಟ್​ ಮಾಡಿದ್ದಾರೆ.

2018ರಲ್ಲಿ ಪ್ರಿಯಾಂಕಾ ಮತ್ತು ನಿಕ್ ಜೋನಸ್​ ತಾರಾಜೋಡಿ ಡಿಸೆಂಬರ್ 1 ಮತ್ತು 2 ರಂದು ಜೋಧ್​ಪುರದ ಉಮೈದ್ ಭವನ್ ಅರಮನೆಯಲ್ಲಿ ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯದಂತೆ ವಿವಾಹವಾದರು. ನಂತರ, ದಂಪತಿ ದೆಹಲಿ ಮತ್ತು ಮುಂಬೈನಲ್ಲಿ ಎರಡು ರಿಸೆಪ್ಷನ್​ ಸಹ ಆಯೋಜಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.