ಮುಂಬೈ: ಇತ್ತೀಚೆಗಷ್ಟೇ ತಮ್ಮ ಮದುವೆಯಲ್ಲಿ ಪತಿ ನಿಕ್ ಜೋನಾಸ್ ಹಾಗೂ ತಾವು ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಬಗ್ಗೆ ಮಾತನಾಡಿದ್ದ ಬಹುಭಾಷಾ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಮತ್ತೊಂದು ವಿಷಯ ಬಹಿರಂಗ ಪಡಿಸಿದ್ದಾರೆ.
ನಿಕ್ ಮತ್ತು ಪ್ರಿಯಾಂಕಾ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ಸಂಬಂಧದಲ್ಲಿ ಹೇಗೆ ನಂಬಿಕೆ ಉಳಿಸಿಕೊಂಡಿದ್ದೇವೆ ಎಂಬುದರ ಬಗ್ಗೆ ಮಾತನಾಡಿದ್ದು, ಅಂತಿಮವಾಗಿ ಧರ್ಮವು ಅದೇ ಗಮ್ಯಸ್ಥಾನವನ್ನು ತಲುಪುತ್ತದೆ. ಅದು ದೇವರು ಎಂದು ತಾನು ನಂಬಿದ್ದೇನೆ ಎಂದು ಹೇಳಿದ್ದಾರೆ.
ನಾವೆಲ್ಲರೂ ಒಂದೇ ದಿಕ್ಕಿನಲ್ಲಿ ಉನ್ನತ ಶಕ್ತಿಯತ್ತ ಸಾಗುತ್ತಿದ್ದೇವೆ ಎಂದಿರುವ ಚೋಪ್ರಾ, ತಮ್ಮ ಮನೆಯಲ್ಲಿ ಸಾಕಷ್ಟು ರೀತಿಯ ಪೂಜೆ ಪುನಸ್ಕಾರಗಳನ್ನು ಮಾಡುತ್ತೇವೆ. ಆಗ ಪತಿ ನಿಕ್ ಇದಕ್ಕೆ ಬೆಂಬಲ ಸೂಚಿಸಿ ಏನಾದರೂ ಹೊಸದನ್ನು ಮಾಡುವ ಮುನ್ನ ಪೂಜೆ ಮಾಡು ಎಂದು ಹೇಳುತ್ತಾರಂತೆ. ಈಕೆ ತನ್ನ ಜೀವನದಲ್ಲಿ ಏನೇ ವಿಶೇಷವಾದದ್ದನ್ನು ಮಾಡಿದರೂ ಪ್ರಾರ್ಥನೆ ಮಾಡಿ ದೇವರಿ ಧನ್ಯವಾದ ಹೇಳುತ್ತಾರೆ. ಮೊದಲನಿಂದಲೂ ಇವರ ಕುಟುಂಬದಲ್ಲಿ ಇಂತಹ ಸಂಪ್ರದಾಯ ಪಾಲನೆ ಮಾಡಿಕೊಂಡು ಬಂದಿರುವುದಾಗಿ ಹೇಳಿಕೊಂಡಿದ್ದಾರೆ.
2018ರಲ್ಲಿ ಅಮೆರಿಕದ ಸಿಂಗರ್ ಕ್ರೈಸ್ತ ಸಮುದಾಯದ ನಿಕ್ ಜೋನಾಸ್ ಅವರನ್ನು ಪ್ರಿಯಾಂಕಾ ಜೋಪ್ರಾ ವರಿಸಿದ್ದರು. ಕ್ರಿಶ್ಚಿಯನ್ ಹಾಗೂ ಹಿಂದೂ ಎರಡೂ ಸಂಪ್ರದಾಯಗಳ ಪ್ರಕಾರ ವಿವಾಹ ಕಾರ್ಯಕ್ರಮಗಳನ್ನು ಮಾಡಿಕೊಂಡಿದ್ದು, ವಿಶೇಷವಾಗಿತ್ತು.