ಲಾಸ್ ಏಂಜಲೀಸ್(ಅಮೆರಿಕ): ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ದಂಪತಿ ತಂದೆ-ತಾಯಿಯಾಗಿ ಬಡ್ತಿ ಪಡೆದಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಅವರಿಬ್ಬರೂ ಮಗುವನ್ನು ಪಡೆದಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ.
ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಜನವರಿ 15ರಂದು ಮಗುವಿಗೆ ಜನ್ಮ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಮಗುವಿನ ಲಿಂಗ ಮತ್ತು ಇತರ ವಿಚಾರಗಳ ಬಗ್ಗೆ ಯಾವುದೇ ಮಾಹಿತಿ ನೀಡದ ಅವರು, 'ಇಂತಹ ವಿಶೇಷ ಸಂದರ್ಭದಲ್ಲಿ ನಮಗೆ ಖಾಸಗಿತನದ ಅವಶ್ಯಕತೆ ಇದೆ. ನಾವು ನಮ್ಮ ಕುಟುಂಬದ ಬಗ್ಗೆ ಗಮನಹರಿಸಬೇಕಿದೆ' ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಈ ವಿಚಾರವನ್ನು ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಮತ್ತು ಹಿತೈಷಿಗಳಿಂದ ಹಾಗೂ ಸ್ನೇಹಿತರಿಂದ ಶುಭಾಶಯಗಳ ಸುರಿಮಳೆ ಹರಿದು ಬಂದಿದೆ.
ನಟಿ ಲಾರಾ ದತ್ತ ಅಭಿನಂದನೆಗಳು ಎಂದು ಕಮೆಂಟ್ ಮಾಡಿದ್ದು, ನಿರ್ಮಾಪಕರಾದ ಗೋನಿತ್ ಮೊಂಗಾ 'ಇದು ತುಂಬಾ ವಿಶೇಷ, ಅಭಿನಂದನೆಗಳು' ಎಂದಿದ್ದಾರೆ. ನಟಿ ಪೂಜಾ ಹೆಗಡೆ ಕೂಡಾ ಶುಭಾಶಯ ತಿಳಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ