ETV Bharat / sitara

ಕೂಸು ಹುಟ್ಟುವ ಮುನ್ನ... ನನ್ನ ಮಕ್ಕಳು ಲಿಂಗ ತಾರತಮ್ಯಕ್ಕೆ ಸಾಕ್ಷಿಯಾಗಬಾರದು ಎಂದ ಪಿಗ್ಗಿ

ಲಿಂಗ ಸಮಾನತೆಯಲ್ಲಿ ನಂಬಿಕೆಯಿಟ್ಟಿರುವ ಪ್ರಿಯಾಂಕಾ ಚೋಪ್ರಾ, ತಾಯಿಯಾಗುವ ಮೊದಲೇ ತನ್ನ ಮಕ್ಕಳು ಲಿಂಗ ತಾರತಮ್ಯದ ಬಗ್ಗೆ ಚಿಂತಿಸಬಾರದು ಎಂದು ಸಮಾನತೆಯ ಮಾತುಗಳನ್ನಾಡಿದ್ದಾರೆ.

priyanka
author img

By

Published : Mar 30, 2020, 9:34 AM IST

Updated : Mar 30, 2020, 10:45 AM IST

ನವದೆಹಲಿ: ನನ್ನ ಮಕ್ಕಳು ಲಿಂಗ ತಾರತಮ್ಯದ ಬಗ್ಗೆ ಚಿಂತಿಸಬಾರದು. ವ್ಯಕ್ತಿಯ ಲಿಂಗದ ಕುರಿತು ಚರ್ಚೆಯೇ ನಡೆಯದ ಘಟ್ಟಕ್ಕೆ ನಾವು ತಲುಪಬೇಕು ಎಂದು ನಟಿ ಪ್ರಿಯಾಂಕಾ ಚೋಪ್ರಾ ಆಶಿಸಿದ್ದಾರೆ.

"ನಾನು ಲಿಂಗ ಸಮಾನತೆಯ ಜಗತ್ತಿನಲ್ಲಿ ನಂಬಿಕೆ ಇಡುವವಳು. ಸ್ತ್ರೀ ಕೇಂದ್ರಿತ ಚಲನಚಿತ್ರಗಳು ಎಂದು ಹೇಳುವ ಬದಲು ಚಲನಚಿತ್ರಗಳು ಎಂದು ಹೇಳಬೇಕು, ಮಹಿಳಾ ನಿರ್ದೇಶಕರ ಬದಲು ನಿರ್ದೇಶಕರು ಎಂದು ಹೇಳಬೇಕಿದೆ, ಮಹಿಳಾ ಕ್ರೀಡಾಪಟುಗಳ ಬದಲಿಗೆ ಕ್ರೀಡಾಪಟುಗಳು ಎಂದು ಉಲ್ಲೇಖಿಸಬೇಕು" ಅನ್ನೋದು ಪ್ರಿಯಂಕಾ ಅಭಿಪ್ರಾಯವಾಗಿದೆ.

ತಮ್ಮ ಸಿನಿಮಾಗಳಲ್ಲಿ ಪ್ರಿಯಾಂಕಾ, ಆ್ಯಕ್ಷನ್​ ಸೀನ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಅನೇಕ ಸಾಹಸ ಚಿತ್ರಗಳಲ್ಲಿ ನಟಿಸಲು ನಾನು ಬಯಸುತ್ತೇನೆ ಎಂದಿದ್ದಾರೆ.

"ನನ್ನ ಚಿತ್ರಗಳಲ್ಲಿ ಸ್ಟಂಟ್ ಹಾಗೂ ಸಾಹಸಗಳನ್ನು ನಾನೇ ಮಾಡಿದ್ದೇನೆ. ನಾನು ಆ್ಯಕ್ಷನ್ ಸಿನಿಮಾಗಳನ್ನು ಆನಂದಿಸುತ್ತೇನೆ" ಎಂದು ಪ್ರಿಯಾಂಕಾ ತಿಳಿಸಿದರು. ಪ್ರಿಯಾಂಕಾ ಚೋಪ್ರಾ ತಾಯಿಯಾಗುವ ಮುನ್ನವೇ ಭವಿಷ್ಯದಲ್ಲಿ ತನ್ನ ಮಕ್ಕಳು ಲಿಂಗ ತಾರತಮ್ಯಕ್ಕೆ ಸಾಕ್ಷಿಯಾಗಬಾರದು ಎಂದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Last Updated : Mar 30, 2020, 10:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.