ಪ್ರಸ್ತುತ ಲಂಡನ್‌ನಲ್ಲಿರುವ ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ ತಮ್ಮ ಅಮೆರಿಕನ್ ಪತಿ ನಿಕ್ ಜೊನಾಸ್ ಮತ್ತು ಅತ್ತೆ-ಮಾವನ ಜತೆ ಹೋಳಿ ಆಚರಣೆ ಮಾಡಿದ್ದಾರೆ.
ಇಂದು ಬೆಳಗ್ಗೆ, ಹೋಳಿ ಆಚರಣೆಯ ವರ್ಣರಂಜಿತ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
"ಹೋಳಿ ಬಣ್ಣಗಳ ಹಬ್ಬ. ಇದು ನನ್ನ ಮೆಚ್ಚಿನ ಹಬ್ಬಗಳಲ್ಲಿ ಒಂದಾಗಿದೆ" ಎಂದು ಪಿಗ್ಗಿ ಬರೆದಿದ್ದಾರೆ. "ನಾವೆಲ್ಲರೂ ಹೋಳಿ ಹಬ್ಬವನ್ನು ನಮ್ಮ ಪ್ರೀತಿಪಾತ್ರರೊಡನೆ ಆಚರಿಸೋಣ. ಎಲ್ಲರಿಗೂ ಹ್ಯಾಪಿ ಹೋಳಿ" ಎಂದು ಶುಭ ಕೋರಿದ್ದಾರೆ.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ಬಾಸ್ ಚೈತ್ರಾ ಕೋಟೂರ್
ಕಳೆದ ವರ್ಷದಲ್ಲಿ ಇದೇ ಸಮಯದಲ್ಲಿ, ಪ್ರಿಯಾಂಕಾ ನಿಕ್ ಅವರೊಂದಿಗೆ ಭಾರತದಲ್ಲಿದ್ದರು ಮತ್ತು ಇಶಾ ಅಂಬಾನಿಯವರ ಹೋಳಿ ಪಾರ್ಟಿಯಲ್ಲಿ ಭಾಗವಹಿಸಿದ್ದರು.
ಪ್ರಿಯಾಂಕಾ ಅವರು ಇತ್ತೀಚೆಗೆ ಬಾಲಿವುಡ್ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಅಲ್ಲದೇ ನ್ಯೂಯಾರ್ಕ್ನಲ್ಲಿ ಭಾರತೀಯ ಆಹಾರ ಪದ್ಧತಿಯುಳ್ಳ ಹೋಟೆಲ್ವೊಂದನ್ನು ತೆರೆದಿದ್ದಾರೆ.