ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಾಗಿನಿಂದ ನಟಿ ಕಂಗನಾ ರಣಾವತ್, ಬಾಲಿವುಡ್ ಮೂವಿ ಮಾಫಿಯಾ ವಿರುದ್ಧ ತಿರುಗಿಬಿದ್ದಿದ್ದಾರೆ. ಆದರೆ ಈಗ ಆಕೆಗೆ ಅದೇ ಮುಳುವಾದಂತೆ ಕಾಣುತ್ತಿದೆ. ಮುಂಬೈನಲ್ಲಿ ಅಕ್ರಮವಾಗಿ ಕಚೇರಿ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಕಂಗನಾ ಕಚೇರಿಯನ್ನು ನೆಲಸಮ ಮಾಡಲಾಗಿದೆ. ಇದಕ್ಕೆ ಕಂಗನಾ ಬೇಸರ ವ್ಯಕ್ತಪಡಿಸಿದ್ದರೂ ನಾನು ಇಂತ ಪ್ರಯತ್ನಕ್ಕೆಲ್ಲಾ ಕುಗ್ಗುವುದಿಲ್ಲ ಎಂದು ಹೇಳಿದ್ದಾರೆ.
ಈ ನಡುವೆ ಬಹುಭಾಷಾ ನಟ ಪ್ರಕಾಶ್ ರೈ, ಕಂಗನಾ ಬಗ್ಗೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಮೆಮೆಯೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಂದು ಚಿತ್ರದಲ್ಲಿ ನಟಿಸಿದ ಮಾತ್ರಕ್ಕೆ ಕಂಗನಾ ತನ್ನನ್ನು ರಾಣಿ ಲಕ್ಷ್ಮಿಬಾಯಿ ಎಂದು ಭಾವಿಸಿದರೆ ಹೇಗೆ..? ಹಾಗಿದ್ದಲ್ಲಿ ಶಾರುಖ್ ಖಾನ್ ಅಶೋಕ ಚಕ್ರವರ್ತಿ, ಆಮೀರ್ ಖಾನ್ ಮಂಗಲ್ ಪಾಂಡೆ, ದೀಪಿಕಾ ಪಡುಕೋಣೆ ಪದ್ಮಾವತಿ, ಹೃತಿಕ್ ರೋಷನ್ ಅಕ್ಬರ್, ವಿವೇಕ್ ಒಬೆರಾಯ್ ಪ್ರಧಾನಿ ಮೋದಿ ಹಾಗೂ ಅಜಯ್ ದೇವಗನ್ ತಮ್ಮನ್ನು ಭಗತ್ ಸಿಂಗ್ ಎಂದು ಭಾವಿಸಬೇಕಾಗುತ್ತದೆ ಎಂದು ಈ ಮೆಮೆಯಲ್ಲಿ ಆಯಾ ನಟ-ನಟಿಯರ ಪಾತ್ರಗಳ ಫೋಟೋಗಳನ್ನು ಬಳಸಿ ಜೋಕ್ ಮಾಡಲಾಗಿದೆ.
-
#justasking pic.twitter.com/LlJynLM1xr
— Prakash Raj (@prakashraaj) September 12, 2020 " class="align-text-top noRightClick twitterSection" data="
">#justasking pic.twitter.com/LlJynLM1xr
— Prakash Raj (@prakashraaj) September 12, 2020#justasking pic.twitter.com/LlJynLM1xr
— Prakash Raj (@prakashraaj) September 12, 2020
ಪ್ರಕಾಶ್ ರೈ ಷೇರ್ ಮಾಡಿರುವ ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಕಂಗನಾ ಅಭಿಮಾನಿಯೊಬ್ಬರು, 'ಕಂಗನಾ ಬಹಳ ಕಷ್ಟಪಟ್ಟು ಕಟ್ಟಿದ್ದ, ತನ್ನ ಮನೆ ಎಂದು ತಿಳಿದಿದ್ದ ಕಚೇರಿಯನ್ನು ನಾಶ ಮಾಡಲಾಗಿದೆ. ಹೀಗೆಲ್ಲಾ ಆಕೆಯನ್ನು ಸಿನಿಮಾ ಪಾತ್ರಗಳಿಗೆ ಹೋಲಿಸುವುದು ನಿಮಗೆಲ್ಲಾ ಬಹಳ ಸುಲಭ. ಒಂದು ವೇಳೆ ನಿಮ್ಮ ಮನೆಯೇ ನಾಶವಾಗಿದ್ದರೆ ನಿಮಗೆ ಹೇಗೆ ಅನ್ನಿಸುತ್ತಿತ್ತು' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ನೆಟಿಜನ್ಸ್ ಕಮೆಂಟ್ ಮಾಡಿ 'ನಾನು ನಿಮ್ಮನ್ನು ವೈಯಕ್ತಿಕವಾಗಿ ಗೌರವಿಸುತ್ತೇನೆ. ಆದರೆ ಈ ವಿಚಾರದಲ್ಲಿ ನಾನು ನಿಮ್ಮನ್ನು ಪ್ರೋತ್ಸಾಹಿಸುವುದಿಲ್ಲ' ಎಂದು ಹೇಳಿದ್ದಾರೆ.
'ಈ ಕೊರೊನಾ ಸಮಯದಲ್ಲಿ ಎಷ್ಟೋ ಜನರು ಕೆಲಸ ಕಳೆದುಕೊಂಡಿದ್ದಾರೆ. ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಮುಂಬೈ ಪೊಲೀಸರ ಕೆಲಸವನ್ನು ಆಕೆ ಟೀಕಿಸಿ ಸರಣಿ ಟ್ವೀಟ್ಗಳನ್ನು ಮಾಡಲಾರಂಭಿಸಿದರು. ಈ ಮೂಲಕ ಶಿವಸೇನೆ ನಾಯಕರೊಂದಿಗೆ ವೈರತ್ವ ಬೆಳೆಸಿಕೊಂಡ ನಂತರ ಕಂಗನಾಗೆ ಇದೆಲ್ಲಾ ಕಷ್ಟಗಳು ಆರಂಭವಾಯ್ತು' ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ತನ್ನ ಮೇಲೆ ಕೆಲವರು ವೈರತ್ವ ಸಾಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ಟ್ವೀಟ್ ಮಾಡಿದ್ದ ಕಂಗನಾ, 'ಮರಾಠಿಗರ ಹೆಮ್ಮೆಯ ಶಿವಾಜಿ ಮಹಾರಾಜ್ ಹಾಗೂ ರಾಣಿ ಲಕ್ಷ್ಮಿಬಾಯಿ ಕುರಿತಾದ ಸಿನಿಮಾವನ್ನು ಮಾಡಿದ ಮೊದಲ ನಟಿ, ನಿರ್ದೇಶಕಿ ನಾನು. ಆದರೂ ಈ ಚಿತ್ರ ಬಿಡುಗಡೆಯಾಗುವ ಸಮಯದಲ್ಲಿ ನಾನು ಮರಾಠಿಗರಿಂದಲೇ ವಿರೋಧ ಎದುರಿಸಬೇಕಾಯ್ತು' ಎಂದು ಕಂಗನಾ ಬೇಸರ ವ್ಯಕ್ತಪಡಿಸಿದ್ದರು.