ETV Bharat / sitara

ಮಹಾಶಿವರಾತ್ರಿಗೆ ಡಾರ್ಲಿಂಗ್‌ ಪ್ರಭಾಸ್‌ ಗುಡ್‌ ನ್ಯೂಸ್‌ ; ಆದಿಪುರುಷ್‌ ಚಿತ್ರ ಬಿಡುಗಡೆಯ ದಿನಾಂಕ ರಿವೀಲ್‌ - ನಟ ಪ್ರಭಾಸ್‌ ಅಭಿನಯದ ಆದಿಪುರುಷ್‌

ಇದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸುತ್ತ ಸುತ್ತುತ್ತದೆ. ರೆಟ್ರೋಫೈಲ್ಸ್‌ನ ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ಓಂ ರಾವುತ್, ಪ್ರಸಾದ್ ಸುತಾರ್ ಹಾಗೂ ರಾಜೇಶ್ ನಾಯರ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ..

Prabhas announces Adipurush release date
ಮಹಾಶಿವರಾತ್ರಿಗೆ ಡಾರ್ಲಿಂಗ್‌ ಪ್ರಭಾಸ್‌ ಗುಡ್‌ ನ್ಯೂಸ್‌; ಆದಿಪುರುಷ್‌ ಚಿತ್ರ ಬಿಡುಗಡೆಯ ದಿನಾಂಕ ರಿವೀಲ್‌
author img

By

Published : Mar 1, 2022, 10:18 AM IST

ಮುಂಬೈ : ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಟಾಲಿವುಡ್‌ನ ಡಾರ್ಲಿಂಗ್‌ ಪ್ರಭಾಸ್ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. ಪ್ರಭಾಸ್‌, ನಟಿ ಕೃತಿ ಸನೋನ್ ಅಭಿನಯದ, ಬಹು ನಿರೀಕ್ಷಿತ ‘ಆದಿಪುರುಷ್’ ಚಿತ್ರ ಬಿಡುಗಡೆಯ ದಿನಾಂಕ ಘೋಷಿಸಲಾಗಿದೆ.

ಓಂ ರಾವುತ್ ನಿರ್ದೇಶನದ ಈ ಸಿನಿಮಾ ಮುಂದಿನ ವರ್ಷ ಜನವರಿಯಲ್ಲಿ ಥಿಯೇಟರ್‌ಗೆ ಬರಲಿದೆ. ದೃಶ್ಯ ವಿಜೃಂಭಣೆಯಿಂದ ಕೂಡಿರುವ ಈ ಚಿತ್ರವು ವಿಎಫ್‌ಎಕ್ಸ್ ಅಭಿಮಾನಿಗಳಿಗೆ ರಸದೌತಣ ಉಣಿಸುವ ನಿರೀಕ್ಷೆಯಿದೆ.

ಸಾಮಾಜಿಕ ಜಾಲತಾಣ ಇನ್‌ಸ್ಟಾದಲ್ಲಿ ಈ ಕುರಿತ ಮಾಹಿತಿಯನ್ನು ಪ್ರಭಾಸ್‌ ಹಂಚಿಕೊಂಡಿದ್ದು, ಆದಿಪುರುಷ್‌ ಸಿನಿಮಾ ತ್ರಿಡಿಯಲ್ಲಿ 2023ರ ಜನವರಿ 12ಕ್ಕೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

ನಟರಾದ ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಕೂಡ ಆದಿಪುರುಷ್‌ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಭಾರತೀಯ ಮಹಾಕಾವ್ಯದ ರೂಪಾಂತರವಾಗಿದೆ ಎಂದು ಹೇಳಲಾಗುತ್ತದೆ.

ಇದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸುತ್ತ ಸುತ್ತುತ್ತದೆ. ರೆಟ್ರೋಫೈಲ್ಸ್‌ನ ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ಓಂ ರಾವುತ್, ಪ್ರಸಾದ್ ಸುತಾರ್ ಹಾಗೂ ರಾಜೇಶ್ ನಾಯರ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

ಆದಿಪುರುಷ್‌ನಲ್ಲಿ ಗ್ರಾಫಿಕ್ಸ್ ಬಾಹುಬಲಿ ಸರಣಿಗಿಂತ ಮೂರು ಪಟ್ಟು ವಿಎಫ್‌ಎಕ್ಸ್ ಇರುತ್ತೆ ಎಂದು ಹೇಳಲಾಗಿದೆ. ಹಾಗಾಗಿ, ನಿರೀಕ್ಷೆಗಳು ಗರಿಗೆದರಿವೆ. ರಾಮಾಯಣ ಆಧಾರಿತ ಪೌರಾಣಿಕ ಚಲನಚಿತ್ರವನ್ನು ಹಿಂದಿ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರವು ಅದರ ಡಬ್ಬಿಂಗ್ ಆವೃತ್ತಿಗಳೊಂದಿಗೆ ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ 2023ರ ಜನವರಿ 12ರಂದು ತೆರೆಗೆ ಬರಲಿದೆ.

ಇದನ್ನೂ ಓದಿ: ಸಖತ್​ ವೈರಲ್​ ವಿಜಯ್ ದೇವರಕೊಂಡ ಅವರ 'ಜನ ಗಣ ಮನ' ಲುಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.