ಹೈದರಾಬಾದ್: ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಮುಂಬರುವ ಚಿತ್ರ 'ಕಭಿ ಈದ್ ಕಭಿ ದಿವಾಲಿ'ಯಲ್ಲಿ ಪೂಜಾ ಹೆಗ್ಡೆ ತೆರೆ ಹಂಚಿಕೊಳ್ಳಲಿದ್ದಾರೆ. ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ನಟಿ, ಸೆಟ್‌ನಲ್ಲಿ ದಬಾಂಗ್ ಸ್ಟಾರ್ ಜೊತೆ ನಟಿಸಲು ಕಾತರರಾಗಿರುವುದಾಗಿ ತಿಳಿಸಿದ್ದಾರೆ.
- " class="align-text-top noRightClick twitterSection" data="
">
ಈ ಹಿಂದೆ, ಕಭಿ ಈದ್ ಕಭಿ ದಿವಾಲಿಯನ್ನು 2021ರ ಈದ್ ಹಬ್ಬದ ವೇಳೆ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ತಡವಾಗಿದೆ. ಈ ಬಗ್ಗೆ ಮಾತನಾಡುತ್ತಾ, "ಇದು ಜನರನ್ನು ನಗಿಸುವ ಮೋಜಿನ ಚಿತ್ರ. ನಾವು ಇದನ್ನು ಈ ಹಿಂದೆಯೇ ಪ್ರಾರಂಭಿಸಲು ಯೋಜಿಸಿದ್ದೆವು. ಆದರೆ ಕೊರೊನಾದಿಂದ ಶೂಟಿಂಗ್ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರಿತು. ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಇದು ಅವರೊಂದಿಗಿನ ನನ್ನ ಮೊದಲ ಚಿತ್ರ" ಪೂಜಾ ಹೇಳಿದ್ದಾರೆ.
- " class="align-text-top noRightClick twitterSection" data="
">
ಸದ್ಯ ಪೂಜಾ ಅವರು ಪ್ರಭಾಸ್ ಜೊತೆಗಿನ 'ರಾಧೆ ಶ್ಯಾಮ್' ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಮೂಡಿ ಬರಲಿರುವ ಚಿತ್ರವು ಈ ವರ್ಷ ಜುಲೈ 30ರಂದು ತೆರೆಗೆ ಬರಲಿದೆ.