ಮುಂಬೈ (ಮಹಾರಾಷ್ಟ್ರ): ಬಣ್ಣದ ಲೋಕದ ಕನಸು ಹೊತ್ತು ಬಂದ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪದಡಿ ಬಾಲಿವುಡ್ ಸಿರಿಯಲ್ ನಟ ಪರ್ಲ್ ವಿ ಪುರಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಆದರೆ, ಪ್ರಕರಣವನ್ನು ಅಲ್ಲಗಳೆದಿರುವ ನಟನ ಸಹೋದ್ಯೋಗಿಗಳು ಹಾಗೂ ಕುಟುಂಬಸ್ಥರು ಇದು ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ.
ವಿ ಪುರಿ ಬಗ್ಗೆ ನಮಗೆ ಗೊತ್ತಿರುವ ನಟ. ಒಳ್ಳೆಯ ಹಾಗೂ ಸಭ್ಯಸ್ಥ ಹುಡುಗ. ಆತನ ಹೆಸರು ಇಂತಹ ಕೃತ್ಯದಲ್ಲಿ ಕೇಳಿಬಂದಿದ್ದು ನಮಗೂ ಆಶ್ಚರ್ಯ ತಂದಿದೆ. ಇದು ನಿಜವಲ್ಲ. ಪ್ರಕರಣದಲ್ಲಿ ಈತನನ್ನು ಸಿಲುಕಿಸಲಾಗುತ್ತಿದೆ. ತಪ್ಪಿತಸ್ಥರು ಯಾರು ಹಾಗೂ ಸತ್ಯ ಏನು ಅನ್ನುವುದು ಶೀಘ್ರದಲ್ಲೇ ಹೊರಬರಲಿದೆ ಎಂದು ಅನಿತಾ ಎನ್ನುವವರು ಇನ್ಸ್ಟಾಗ್ರಾಮ್ನಲ್ಲಿ ಬರೆದು ಕೊಂಡಿದ್ದಾರೆ.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ನಟ ಪುರಿ ವಿರುದ್ಧ ದೂರು ದಾಖಲಾಗಿದ್ದು, ಮುಂಬೈ ಪೊಲೀರು ಇಂದು ಬೆಳಗ್ಗೆ ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರು ಐಪಿಸಿ ಮತ್ತು ಪೋಸ್ಕೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯ 4,8,12, 19 ಮತ್ತು 21 ರ ಸೆಕ್ಷನ್ 376 ರ ಅಡಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ಬಾಲಕಿಯ ತಂದೆ ಪೊಲೀಸರಿಗೆ ಈ ಬಗ್ಗೆ ದೂದು ನೀಡಿದ್ದರು. ನಿರ್ಮಾಪಕಿ ಏಕ್ತಾ ಕಪೂರ್ ಸಹ ಈ ಬಗ್ಗೆ ಟ್ವೀಟ್ ಮಾಡಿ ಪ್ರಕರಣವನ್ನು ಅಲ್ಲಗಳೆದಿದ್ದಾರೆ. ಅಲ್ಲದೇ ಪ್ರಕರಣದಲ್ಲಿ ಯಾರು ಸರಿ ಯಾರದ ತಪ್ಪು ಎಂದು ನನಗೆ ನಿರ್ಧರಿಸುವ ಹಕ್ಕಿಲ್ಲ. ಇದನ್ನು ನ್ಯಾಯಾಲಯಗಳು ನಿರ್ಧರಿಸುತ್ತದೆ. ಆಧಾರರಹಿತ ದೂರು ಯಾವತ್ತೂ ಗಟ್ಟಿಯಾಗಿ ನಿಲ್ಲದು. ಮುಂದಿನ ದಿನಮಾನದಲ್ಲಿ ಸತ್ಯಾಸತ್ಯತೆ ತಿಳಿದು ಬರಲಿದೆ ಎಂದು ನಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಟರಾದ ಕ್ರಿಸ್ಟಲ್ ಡಿಸೋಜಾ, ಶಾಲಿನ್ ಭಾನೋಟ್ ಹಾಗೂ ಸುರ್ಭಿ ಜ್ಯೋತಿ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಒಡನಾಟವನ್ನು ಬರೆದುಕೊಂಡಿದ್ದಲ್ಲದೇ ಆಧಾರರಹಿತ ಆರೋಪಕ್ಕೆ ಕಿಡಿ ಕಾರಿದ್ದಾರೆ.