ಹೈದರಾಬಾದ್: ಸೂಪರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ವಕೀಲ್ ಸಾಬ್’ ಇಂದು ತೆರೆಕಂಡಿದೆ. ಆದರೆ ತೆರೆಕಂಡ ಕೆಲವೇ ಗಂಟೆಗಳಲ್ಲಿ ಆನ್ಲೈನ್ನಲ್ಲಿ ಇಡೀ ಸಿನಿಮಾ ಲೀಕ್ ಆಗಿದೆ.
ಕೊರೊನಾದಿಂದ ಹಲವು ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದ್ದು, ಆದರೆ ವಕೀಲ್ ಸಾಬ್ ಚಿತ್ರಮಂದಿರದಲ್ಲೇ ಬಿಡುಗಡೆಯಾಗಿತ್ತು. ಈ ನಡುವೆ ಕಿಡಿಗೇಡಿಗಳು ಚಿತ್ರದ ಹೆಚ್ಡಿ ಪ್ರಿಂಟ್ ಅನ್ನು ಲೀಕ್ ಮಾಡಿದ್ದು, ಹಲವು ವೆಬ್ಸೈಟ್ನಲ್ಲಿ ಸಿನಿಮಾ ಹರಿ ಬಿಡಲಾಗಿದೆ.
- " class="align-text-top noRightClick twitterSection" data="">
ಪವನ್ ಕಲ್ಯಾಣ್ ರಾಜಕೀಯ ಎಂಟ್ರಿ ಬಳಿಕ ರಿಲೀಸ್ ಆಗುತ್ತಿರುವ ಮೊದಲ ಚಿತ್ರ ಇದಾಗಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಹಿಂದಿಯ ಪಿಂಕ್ ಚಿತ್ರದ ರಿಮೇಕ್ ಆಗಿರುವ ವಕೀಲ್ ಸಾಬ್, ಅಪರಾಧ ಹಾಗೂ ಭೂಗತ ಲೋಕದ ಕಥೆ ಹೊಂದಿದೆ.
ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಿರ್ವಹಿಸಿದ್ದ ಪಾತ್ರದಲ್ಲಿ ಪವನ್ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: ಪವನ್ ಕಲ್ಯಾಣ್ ಸಿನಿಮಾ ಸ್ಥಗಿತ: ಅಭಿಮಾನಿಗಳಿಂದ ಚಿತ್ರಮಂದಿರ ಧ್ವಂಸ