'ದಿ ವೈಟ್ ಟೈಗರ್' ಚಿತ್ರದಲ್ಲಿನ ನಟನೆಗಾಗಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ ಪ್ರಶಸ್ತಿ ದೊರೆತಿದ್ದು ಈ ಸಂತೋಷದ ವಿಚಾರವನ್ನು ಪ್ರಿಯಾಂಕಾ ತಂಗಿ ಪರಿಣಿತಿ ಚೋಪ್ರಾ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಪ್ರಿಯಾಂಕ ಚೋಪ್ರಾ ಸಹ ನಿರ್ಮಾಣ ಕೂಡಾ ಇದೆ.
ಬಿಎಎಫ್ಟಿಎ ನಿಂದ ಬಿಡುಗಡೆಯಾಗಿರುವ ವಿನ್ನರ್ಗಳ ಹೆಸರಿರುವ ಪಟ್ಟಿಯನ್ನು ಪರಿಣಿತಿ ಚೋಪ್ರಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು ಸ್ನೇಹಿತರೇ, ನನ್ನ ಸಹೋದರಿ ಪ್ರಿಯಾಂಕಾ ಚೋಪ್ರಾ ಬಿಎಎಫ್ಟಿಎ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆಕೆ ಪ್ರಶಸ್ತಿ ಪಡೆಯುವ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ. 'ದಿ ವೈಟ್ ಟೈಗರ್' ಚಿತ್ರ ಅತ್ಯುತ್ತಮ ಪೋಷಕ ಪ್ರಶಸ್ತಿ, ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರವನ್ನು ರಮಿನ್ ಬಹ್ರಾನಿ ನಿರ್ದೇಶಿಸಿದ್ದು ಪ್ರಿಯಾಂಕಾ ಚೋಪ್ರಾ, ಆದರ್ಶ್ ಗೌರವ್, ರಾಜ್ಕುಮಾರ್ ರಾವ್ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ರಾಜ್ಕುಮಾರ್ ರಾವ್ ಆಯ್ಕೆಯಾಗಿದ್ದಾರೆ.
- " class="align-text-top noRightClick twitterSection" data="
">
ಇದನ್ನೂ ಓದಿ: ಮತ್ತೆ ಬಣ್ಣ ಹಚ್ಚಲು ರೆಡಿಯಾದ್ರು ರಾಗಿಣಿ ದ್ವಿವೇದಿ
'ದಿ ವೈಟ್ ಟೈಗರ್' ಅಮೆರಿಕನ್-ಇಂಡಿಯನ್ ಸಿನಿಮಾವಾಗಿದ್ದು, ಚಿತ್ರದ ಕಥೆಯನ್ನು ಅರವಿಂದ್ ಅಡಿಗ ಬರೆದಿರುವ ಬೂಕರ್ ಪ್ರಶಸ್ತಿ ವಿಜೇತ ದಿ ವೈಟ್ ಟೈಗರ್ ಪುಸ್ತಕದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ವರ್ಣ ವಿಭಜನೆ ಹಾಗೂ ಭಾರತೀಯ ಸಾಮಾಜಿಕ ವ್ಯವಸ್ಥೆಯ ಕರಾಳ ವಾಸ್ತವ ವಿಚಾರಗಳನ್ನು ತೋರಿಸಲಾಗಿದೆ. ಜನವರಿ 22 ರಂದು ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿತ್ತು.