ಮುಂಬೈ(ಮಹಾರಾಷ್ಟ್ರ): ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ಜೀವನಾಧಾರಿತ ಸಿನಿಮಾ ಸೈನಾ ಚಿತ್ರದಲ್ಲಿ ಪರಿಣಿತಿ ಚೋಪ್ರಾ ಬಣ್ಣ ಹಚ್ಚಿದ್ದು, ಈ ಚಿತ್ರದ ತಾಲೀಮು ಗೀತೆ "ಪರಿಂದ" ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಟಿ-ಸೀರಿಸ್ ಯುಟ್ಯೂಬ್ನಲ್ಲಿ ಬಿಡುಗಡೆ ಮಾಡಿರುವ ವಿಡಿಯೋವನ್ನು ಟ್ವಿಟರ್ ಮೂಲಕ ಹಂಚಿಕೊಂಡಿರುವ ಪರಿಣಿತಿ ಚೋಪ್ರಾ, 'ನನ್ನ ಹೊಸ ತಾಲೀಮು ಗೀತೆ' ಎಂದು ಬರೆದುಕೊಂಡಿದ್ದಾರೆ.
ಎರಡೂವರೆ ನಿಮಿಷದ ಈ ವಿಡಿಯೋದಲ್ಲಿ ಸೈನಾ ನೆಹ್ವಾಲ್ ಪಾತ್ರಕ್ಕಾಗಿ ಪರಿಣಿತಿ ನಡೆಸಿರುವ ಕಸರತ್ತು ಹಾಗೂ ಸೈನಾ ಗುರಿ ಸಾಧನೆಗಾಗಿ ಪಟ್ಟ ಪಾಡು ಎಲ್ಲದರ ಬಗ್ಗೆ ಹೇಳುತ್ತದೆ. ಮನೋಜ್ ಮುಂತಾಶಿರ್ ಬರೆದಿರುವ ಈ ಗೀತೆಗೆ ಮಲಿಕ್ ಸಂಗೀತ ಸಂಯೋಜನೆ ಮಾಡಿದ್ದಾರೆ.
- " class="align-text-top noRightClick twitterSection" data="">